ಪೊಲೀಸ್ ಆಯುಕ್ತ ದಯಾನಂದ್ ರಿಂದ ಬಿಬಿಎಂಪಿ ಕಂಟ್ರೋಲ್ ರೂಂನ ಸುಬ್ರಮಣ್ಯರವರಿಗೆ ಸನ್ಮಾನ

VK NEWS
By -
0

ಬೆಂಗಳೂರು:ನ್ಯೂ ಹೊರೈಜಾನ್ ಶಾಲೆ ಸಭಾಂಗಣದಲ್ಲಿ ಬೆಂಗಳೂರುನಗರ ಪೊಲೀಸ್ ವತಿಯಿಂದ ಜನಸಂಪರ್ಕ  ಸಭೆ ಆಯೋಜಿಸಲಾಗಿತ್ತು. ನಗರ ಪೊಲೀಸ್ ಆಯುಕ್ತರಾದ ದಯಾನಂದ್ ರವರು ಬಿಬಿಎಂಪಿ ಕಂಟ್ರೋಲ್ ರೂಂ ಕಾರ್ಯನಿರ್ವಹಿಸುತ್ತಿರುವ ಸುಬ್ರಮಣ್ಯರವರ ಸೇವಾ ಕಾರ್ಯ ಮೆಚ್ಚಿ ಆತ್ಮೀಯವಾಗಿ ಸನ್ಮಾನಿಸಿದರು.

ಸುಬ್ರಮಣ್ಯರವರು ಕಳೆದ 30ವರ್ಷಗಳಿಂದ ಬಿಬಿಎಂಪಿ ಕಂಟ್ರೋಲ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮಳೆ, ಗಾಳಿ, ಮರ ಬಿದ್ದಿರುವುದು  ಪ್ರವಾಹ ಪರಿಸ್ಥಿತಿ ಉಂಟಾದಾಗ ಎಲ್ಲರು ನೆನಪು ಮಾಡಿಕೊಳ್ಳುವುದು ಸುಬ್ರಮಣ್ಯರವರನ್ನು ...

ಇಂತಹ ಕಠಿಣ ಪರಿಸ್ಥಿತಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರ ಆದೇಶ ಆನ್ವಯ ಅಧಿಕಾರಿಗಳ ನಿರಂತರ ಸಂಪರ್ಕ ಸಾಧಿಸಿ ಸಮಸ್ಯೆ ನಿವಾರಣೆಗೆ ಶ್ರಮಿಸುತ್ತಾರೆ.

ನಿವೃತ್ತ ಐ.ಎ.ಎಸ್.ಅಧಿಕಾರಿಗಳಾದ ಜೈರಾಜ್, ಸಿದ್ದಯ್ಯ, ರಾಕೇಶ್ ಸಿಂಗ್ , ಐ.ಎ.ಎಸ್ ಅಧಿಕಾರಿಗಳಾದ ತುಷಾರ್ ಗಿರಿನಾಥ್, ರಂದೀಪ್, ಹರೀಶ್ ರವರು ಆನೇಕ ಐ.ಎ.ಎಸ್. ಅಧಿಕಾರಿಗಳಿಂದ ಸುಬ್ರಮಣ್ಯ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ .

Post a Comment

0Comments

Post a Comment (0)