ಬೆಂಗಳೂರು: ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ನಾವು ಪಕ್ಷದ ವತಿಯಿಂದ ರಾಜಕೀಯ ಮಾಡುತ್ತೇವೆ. ಆದರೆ ಸರ್ಕಾರ ಉಪಯೋಗಿಸಿ ರಾಜಕೀಯ ಮಾಡಲ್ಲ. ಅವರು ರಾಜಕೀಯ ಮಾಡುತ್ತಿದ್ದಾರೆ, ನಾವೂ ರಾಜಕೀಯ ಮಾಡಬೇಕಾಗುತ್ತದೆ. ಮುಡಾ ಹಗರಣ ತನಿಖೆಗೆ ಆಯೋಗ ರಚನೆ ಮಾಡಿದ್ದೇವೆ. ವರದಿಯಲ್ಲಿ ತಪ್ಪು ಅಂತ ಬಂದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ನಾವು ಅನುಮತಿ ಕೊಡುವುದಿಲ್ಲ, ಬೇಕಿದ್ದರೆ ಪ್ರತಿಭಟನೆ ಮಾಡಿಕೊಳ್ಳಲಿ. ಈ ಹಿಂದೆ ನಮಗೂ ಅನುಮತಿ ಕೊಟ್ಟಿರಲಿಲ್ಲ, ಆದರೂ ನಾವು ಪಾದಯಾತ್ರೆ ಮಾಡಿದ್ದೆವು. ಅವರು ಪ್ರತಿಭಟನೆ ಮಾಡಲಿ, ತಡೆ ಹಾಕಲು ಹೋಗುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಕಾಂಗ್ರೆಸ್ನಿಂದ ಕೌಂಟರ್ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿ, ಆ ಬಗ್ಗೆ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಣನೀತಿ ಮಾಡುತ್ತಿದ್ದಾರೆ.