ದಾವಣಗೆರೆ (ಜು.28): ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಎಎಸ್ ಅಧಿಕಾರಿ ಸಂಸದ ಸುನೀಲ್ ಬೋಸ್ ಕುಂಕುಮ ಇಟ್ಟ ಪ್ರಕರಣದ ಬಗ್ಗೆ ಮಾತನಾಡುತ್ತಾ, ಸರ್ಕಾರಿ ಅಧಿಕಾರಿಗೆ ಕುಂಕುಮ ಇಟ್ಟಿರೋದ್ರಲ್ಲಿ ತಪ್ಪೇನಿದೆ.? ಎಂದು ಮಾಧ್ಯಮಗಳಿಗೆ ಪ್ರಶ್ನೆ ಮಾಡಿದ್ದಾರೆ. ಮುಂದುವರೆದು, ಯಾರು ಯಾರಿಗೆ ಬೇಕಾದ್ರು ಕುಂಕುಮ ಇಡಬಹುದು. ಹಿಂದೂ ಸಂಪ್ರದಾಯದಲ್ಲಿ ಸಮಾನತೆ ಅನ್ನೋದು ಇದೆ. ಹೀಗಾಗಿ ಕುಂಕುಮ ಇಟ್ಟಿದಾರೆ ಎಂದು ಸಮಜಾಯಿಸಿ ನೀಡಿದ್ದಾರೆ.
ನನ್ನ ಮಗನಿಗೆ ಮದುವೆ ಆಗಿದಿಯೋ ಇಲ್ವೋ ಅನ್ನೋದು ಅಫಿಡವಿಟ್ ನಲ್ಲಿ ನೋಡಿಕೊಳ್ಳಿ. ಅದನ್ನು ರಿಟರ್ನಿಂಗ್ ಆಫೀಸರ್ ನೋಡಿದ್ದಾರೆ, ಕಾನೂನು ಪ್ರಕಾರ ತಪ್ಪಿದ್ದರೆ ಕ್ರಮ ಆಗುತ್ತದೆ. ಎಲ್ಲವನ್ನೂ ಅಫಿಡವಿಟ್ ನಲ್ಲಿ ಕೊಟ್ಡಿದ್ದಾರೆ. ಎಲೆಕ್ಷನ್ ನಲ್ಲಿ ಬಿಜೆಪಿಯವರು ತಕರಾರು ಹಾಕಿದ್ರು, ನಾಮಪತ್ರ ಸ್ವೀಕೃತಿ ಆಗಿದೆ. ಎಲೆಕ್ಷನ್ ಅರ್ಜಿ ಅಂಗೀಕಾರ ಆಗಿದೆ ಎಂದ ಮೇಲೆ ಕಾನೂನು ರೀತಿ ಎಲ್ಲಾ ಸರಿ ಇದೆ. ಬಿಜೆಪಿ ನಾಯಕರು ಮಾಡದೇ ಇರೋ ಆರೋಪ ಯಾವುದು ಇದೆ. ಸಂವಿಧಾನದಲ್ಲಿ ಎಲ್ಲಾ ಸಮಾನರು ಅಲ್ವಾ.? ಲಿಂಗ ತಾರತಮ್ಯ ಮಾಡಬಾರದು ಅಲ್ವಾ..? ವಾಟ್ ಇಸ್ ದ ಪ್ರಾಬ್ಲಂ ಎಂದು ಮಹದೇವಪ್ಪ ಮಾಧ್ಯಮಗಳ ವಿರುದ್ಧವೇ ಗರಂ ಆದರು.
ಆಷಾಢ ಮಾಸದ ಮೂರನೇ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಇಂದು ಸಂಸದ ಸುನೀಲ್ ಭೋಸ್ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ (ಕೆಎಎಸ್ ಅಧಿಕಾರಿ) ಸವಿತಾ ಕೂಡ ಹೋಗಿದ್ದರು. ಸಂಸದರಾಗಿದ್ದರಿಂದ ಹೆಚ್ಚಿನ ಆದ್ಯತೆ ನೀಡಿ ಗರ್ಭಗುಡಿಯೊಳಗೆ ಕರೆದುಕೊಂಡು ವಿಶೇಷ ಪೂಜೆ ಮಾಡಲು ಅವಕಾಶ ನೀಡಿದ್ದರು. ಈ ವೇಳೆ ಇಬ್ಬರೂ ವಿಶೃಷವಾಗಿ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಈ ವೇಳೆ ಅರ್ಚಕರು ಕೊಟ್ಟ ಕುಂಕುಮವನ್ನು ಸುನೀಲ್ ಭೋಸ್ ತಾವು ಹಚ್ಚಿಕೊಂಡಿದ್ದಲ್ಲದೇ ತಮ್ಮ ಪಕ್ಕದಲ್ಲಿಯೇ ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ನಿಂತಿದ್ದ ಅಧಿಕಾರಿ ಸವಿತಾ ಅವರ ಹೆಗಲ ಮೇಲಿಂದ ಕೈ ಹಾಕಿ ಹಣೆಗೆ ಕುಂಕುಮ ಇಟ್ಟಿದ್ದಾರೆ.