'ಶಕ್ತಿ' ಯೋಜನೆಯಿಂದ ಲಾಭದತ್ತ ಸಾರಿಗೆ ನಿಗಮಗಳು : ರಾಮಲಿಂಗಾರೆಡ್ಡಿ

VK NEWS
By -
0


 

 ಬೆಂಗಳೂರು: ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಿಗಮಗಳಿಗೆ ಲಾಭವಾಗುತ್ತಿದೆ. ಬಿಎಂಟಿಸಿ 10 ವರ್ಷದಿಂದ ಟಿಕೆಟ್ ದರ ಹೆಚ್ಚಿಸಿಲ್ಲ. 'ಶಕ್ತಿ' ಯೋಜನೆ ಜಾರಿ ನಂತರ ಆದಾಯ ಹೆಚ್ಚಾದರೂ ನಿರ್ವಹಣೆ, ಡೀಸೆಲ್, ವೇತನದ ಕಾರಣಕ್ಕೆ ಲಾಭ ತೋರಿಸಲಾಗುತ್ತಿಲ್ಲ. 2020ರಲ್ಲಿ ಉಳಿದ ಮೂರು ಸಾರಿಗೆ ನಿಗಮಗಳಿಂದ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು. ಇದರ ನಡುವೆ ಡೀಸೆಲ್ ದರ ಹೆಚ್ಚಳವಾಗಿದೆ. ಹಾಗಾಗಿ ಲಾಭ ತೋರಿಸಲಾಗಿಲ್ಲ. ಆದರೂ ಮುಂದಿನ ದಿನಗಳಲ್ಲಿ ಲಾಭಕ್ಕೆ ಸಾರಿಗೆ ನಿಗಮಗಳು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2024ರ ಜೂನ್ವರೆಗೆ 'ಶಕ್ತಿ' ಯೋಜನೆಯಡಿ 4,453.50 ಕೋಟಿ ಬಿಡುಗಡೆ ಮಾಡಿದ್ದು 1,413.47 ಕೋಟಿ ಬಾಕಿ ಇದೆ. ಯೋಜನೆಗೆ 5,015 ಕೋಟಿ ಹಣವನ್ನು ಈ ಬಾರಿ ಬಜೆಟ್ನಲ್ಲಿ ಇಡಲಾಗಿದೆ. ಈ ವರ್ಷ ಸ್ವಲ್ಪ ಕೊರತೆಯಾಗಬಹುದು. ಇದನ್ನು ಸರಿಪಡಿಸಲು ಸಿಎಂ ಗಮನಕ್ಕೆ ತರಲಾಗಿದೆ. ಪೂರಕ ಬಜೆಟ್ನಲ್ಲಿ ಒದಗಿಸುವ ಭರವಸೆ ಇದೆ ಎಂದರು.

////////////////////////////////////

Post a Comment

0Comments

Post a Comment (0)