ಅಕ್ರಮ ನಿವೇಶನಗಳ ಹಂಚಿಕೆಯಲ್ಲಿ ಯಾರೇ ಶಾಮೀಲಾಗಿದ್ದರೂ ತನಿಖೆಯಾಗಲಿ: ಯತ್ನಾಳ್

VK NEWS
By -
0


 

ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಯಾರು ಹೆಚ್ಚು ಸೈಟು ಇಲ್ಲವೇ ಜಮೀನುಗಳನ್ನು ಲೂಟಿ ಮಾಡಿದ್ದಾರೆ ಅನ್ನೋದೇ ಇವತ್ತು ಸದನದಲ್ಲಿ ನಡೆದ ಚರ್ಚೆಗಳ ಮುಖ್ಯಾಂಶ! ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸದನದಲ್ಲಿ ಮಾತಾಡಿ, ಪರಸ್ಪರ ಅರೋಪಗಳನ್ನು ಮಾಡುತ್ತಾ ಕಚ್ಚಾಡುವುದು ಬೇಡ, ನಡೆದಿರುವ ಹಗರಣಗಳ ದಾಖಲೆಗಳನ್ನೆಲ್ಲ ಮುಂದಿಟ್ಟುಕೊಂಡು ತನಿಖೆ ನಡೆಸಲಿ, ಯಾರೇ ಲೂಟಿ ಮಾಡಿದ್ದರೂ ಶಿಕ್ಷೆಯಾಗಲಿ, ತಾರತಮ್ಯ ಬೇಡ, ಒಂದು ಮಾನದಂಡವನ್ನು ಫಿಕ್ಸ್ ಮಾಡಿ ಲೂಟಿ ಮಾಡಿದವರು ಅಥವಾ ಅಕ್ರಮ ಎಸಗಿದವರು ಕಾಂಗ್ರೆಸ್ ನಾಯಕರಾಗಿರಲಿ, ಬಿಜೆಪಿ ಇಲ್ಲವೇ ಜೆಡಿಎಸ್ ನಾಯಕರಾಗಿರಲಿ, ತನಿಖೆಯಾಗಲಿ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಸಭಾಧ್ಯಕ್ಷ ಯುಟಿ ಖಾದರ್ ಅವರಿಗೆ ಹೇಳಿದರು.
ಅವರು ಕುಳಿತ ಮೇಲೆ ಎದ್ದು ನಿಂತು ಮಾತಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಒಂದಷ್ಟು ಕಾಗದಗಳ ಬಂಡಲ್ ಅನ್ನು ಸಭಾಧ್ಯಕ್ಷರಿಗೆ ತೋರಿಸಿ, ಬಿಜೆಪಿ ನಾಯಕರು ಎಕರೆಗಟ್ಟಲೆ ಲೂಟಿ ಮಾಡಿದ್ದರೆ, ನೀವು ಅನುಮತಿ ನೀಡಿದರೆ ಎಲ್ಲ ದಾಖಲೆಗಳನ್ನು ಸದನದ ಮುಂದಿಡ್ತೀನಿ ಅನ್ನುತ್ತಾರೆ. 

ಸರಿ ಇಡಿ, ತಡೆದಿದ್ದು ಯಾರು? ಅಂತ ಬಿಜೆಪಿ ಶಾಸಕರು ಹೇಳಿದಾಗ ಸ್ಪೀಕರ್ ಮಧ್ಯೆ ಪ್ರವೇಶಿಸಿ ಸುರೇಶ್ ರನ್ನು ಕೂತುಕೊಳ್ಳಲು ಹೇಳುತ್ತಾರೆ.

Post a Comment

0Comments

Post a Comment (0)