ಯು.ಪಿ.ಎಸ್.ಸಿ.ಯಲ್ಲಿ ಆಯ್ಕೆಯಾದವರಿಗೆ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿರವರಿಂದ ಅಭಿನಂದನೆ

VK NEWS
By -
0

 ವಿಜಯನಗರ: ಚುಂಚಶ್ರೀ ಬಳಗದ ವತಿಯಿಂದ ಯುಗಯೋಗಿ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿರವರ ಆಶೀರ್ವಾದದಿಂದ ಸತ್ಸಂಗ ಮತ್ತು ಯು.ಪಿ.ಎಸ್.ಸಿ.ಆಯ್ಕೆಯಾಗಿರುವ ಸಮುದಾಯದ ಐ.ಎ.ಎಸ್.ಮತ್ತು ಐಪಿಎಸ್ ಹಾಗೂ ಐ.ಎಫ್ ಎಸ್. ಐ.ಆರ್.ಎಸ್. ಮತ್ತಿತರ ನಾಗರಿಕ ಸೇವೆಗಳ ಸಾಧಕರಿಗೆ ಅಭಿನಂದನಾ ಸಮಾರಂಭ.




ದಿವ್ಯಸಾನಿಧ್ಯ ಮತ್ತು ಆಶೀರ್ವಚನ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ॥ ನಿರ್ಮಲಾನಂದನಾಥ ಮಹಾಸ್ವಾಮಿಗಳವರು, ಪೀಠಾಧ್ಯಕ್ಷರು,

ಸಾನಿಧ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮಿಗಳವರು ಕಾರ್ಯದರ್ಶಿಗಳು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ , ಮುಖ್ಯ ಅತಿಥಿಗಳಾಗಿ ಕೃಷಿ ಸಚಿವರಾದ ಚಲುರಾಯಸ್ವಾಮಿರವರು, ಕಂದಾಯಉನ್ನತ ಶಿಕ್ಷಣ ಸಚಿವರಾದ ಡಾ|| ಎಂ.ಸಿ. ಸುಧಾಕರ್ ರವರು ಶಾಸಕರುಗಳಾದ ಡಾ|| ಸಿ.ಎನ್. ಅಶ್ವಥ್ ನಾರಾಯಣ್ ರವರು ಎಂ. ಕೃಷ್ಣಪ್ಪ, ಮಾಜಿ ಮಂತ್ರಿಗಳಾದ ಸಿ.ಎಸ್. ಪುಟ್ಟರಾಜು ರವರು ಚುಂಚಶ್ರೀ ಬಳಗದ ಅಧ್ಯಕ್ಷರಾದ ಗಾ.ನಂ.ಶ್ರೀಕಂಠಯ್ಯ, ಐ.ಜಿ.ಪಿ ಪೊಲೀಸ್ ಅಧಿಕಾರಿ,ರಾಘವೇಂದ್ರ ಸುಹಾಸ್, ಬಿಡಿಎ ಆಯುಕ್ತರಾದ ಜಯರಾಮ್ ರವರು,  ಐ.ಎ.ಎಸ್.ಅಧಿಕಾರಿ ರಂಗಪ್ಪರವರು  ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

*ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ* ರವರು ಮಾತನಾಡಿ ದೇಶ ಸೇವೆಗೆ ಆಯ್ಕೆಯಾಗಿರುವ ಯು.ಪಿ.ಎಸ್.ಸಿ.ಸಾಧಕರಿಗೆ ಸೇವೆಗೆ ಕಳುಹಿಸಿಕೊಡುವ ಸಮಯವಾಗಿದೆ.

ಈ ದೇಶದ ಡೊಡ್ಡ ಶಕ್ತಿ ಎಂದರೆ  ರೈತ ಶಕ್ತಿ. ನಮ್ಮ  ಸಮುದಾಯ ಮಕ್ಕಳು ದೇಶ ಸೇವೆ ಸಲ್ಲಿಸಲು ಸಜ್ಜಾಗಿದ್ದಾರೆ.

ಐ.ಎ.ಎಸ್.ಯಲ್ಲಿ ನಮ್ಮ ಸಮುದಾಯದ ಮೊದಲಿಗರು ಉಮಾಶಂಕರ್ ರವರು,  ಐ.ಪಿ.ಎಸ್.ಕಿಶೋರ್ ಚಂದ್ರ, ಐ.ಎಫ್.ಎಸ್ ಗಾ.ನಂ ಶ್ರೀಕಂಠಯ್ ಒಕ್ಕಲಿಗ ಸಮುದಾಯದಲ್ಲಿ ಮೊದಲಿಗ ಉನ್ನತಧಿಕಾರಿಗಳು. 

ಒಟ್ಟು ಕುಟುಂಬದಲ್ಲಿ ಬಾಳಬೇಕು, ಮನಸ್ಸಿನಲ್ಲಿ ಇಟ್ಟಕೊಂಡು ಇನ್ನೊಬ್ಬರ ಬಳಿ ಹೇಳುವದರಿಂದ ಸಂಸಾರಗಳು ಮೂರನೇಯ ವ್ಯಕ್ತಿ ಆಗಮನದಿಂದ ಕೆಟ್ಟುಹೋಗುತ್ತದೆ.

ಮಕ್ಕಳಿಗೆ ಕಷ್ಟದ ಕುರಿತು ಅರಿವು ಮೂಡಿಸಬೇಕು, ಮನೆಯ ಸಮಸ್ಯೆಗಳನ್ನು ತಿಳಿಸಬೇಕು ಆಗ ಮಕ್ಕಳು ಹಾಳಾಗುವುದಿಲ್ಲ.

ಬಾಲಗಂಗಾಧರನಾಥ ಸ್ವಾಮೀಜಿ ಅಪಾರ ಜ್ಞಾನಿಗಳು, ಜ್ಞಾನಪೀಠ ಪ್ರಶಸ್ತಿ ಮೊದಲಿಗೆ ಒಲಿದಿದ್ದು ನಮ್ಮ ಸಮುದಾಯಕ್ಕೆ.

ನಾಡಪ್ರಭು ಕೆಂಪೇಗೌಡರು ನಾಡು ಕಟ್ಟಿದರು. 10ನೇ ಶತಮಾನದಲ್ಲಿ ಗಂಗ ಸಾಮ್ರಾಜ್ಯ ಆಳಿದರು ನಂತರ ತಲಕಾಡಿಗೆ ಬಂದರು.

ಗಂಗರ ಪರಂಪರೆ ಬಂದವರು ನಾಡಪ್ರಭು ಕೆಂಪೇಗೌಡರು. ಸಮುದಾಯಗಳು ಎಲ್ಲ ಕಾಲದಲ್ಲಿಯೂ ಒಂದೇ ರೀತಿಯಲ್ಲಿ ಇರಲು ಸಾಧ್ಯವಿಲ್ಲ, ಏಳು, ಬೀಳುಗಳು ಎಲ್ಲ ಸಮುದಾಯದಲ್ಲಿ ಇರುತ್ತದೆ.

ಒಬ್ಬ ಪ್ರಧಾನಿ, ರಾಜ್ಯಕ್ಕೆ ನಾಲ್ಕು ಮುಖ್ಯಮಂತ್ರಿಗಳನ್ನ ಈ ದೇಶಕ್ಕೆ ಕೊಡುಗೆಯಾಗಿ ನೀಡಿದೆ.

ಶಾಸಕಾಂಗ, ಕಾರ್ಯಾಂಗ, ನ್ಯಾಯಂಗ, ಮಾಧ್ಯಮರಂಗದಲ್ಲಿ ನಮ್ಮ ಸಮುದಾಯದವರು ಮುಂದೆಬರಬೇಕು.

ಯು.ಪಿ.ಎಸ್.ಸಿ.ಸತತ ಪರಿಶ್ರಮ ಪಟ್ಟ ಉತ್ತಿರ್ಣರಾಗಿರುವ ನಮ್ಮ ಒಕ್ಕಲಿಗ ಸಮುದಾಯದ ಮಕ್ಕಳು ಪರಿಶ್ರಮಕ್ಕೆ ಅಭಿನಂದನೆಗಳು.

ದೇಶಕ್ಕೆ ಸೇವೆ ಮಾಡುವವರಿಗೆ ಸಂಬಳ ಮುಖ್ಯವಲ್ಲ, ಸಮಾಜ ಮುಖ್ಯ.

ಸಾಧನೆ ಮಾಡಲು ಪ್ರಯತ್ನ ಮಾಡುವವರಿಗೆ  ಸಮಾಜ ಸಹಕಾರ ನೀಡುತ್ತದೆ. ಸಮಾಜ ಕಟ್ಟಲು ಶ್ರಮಿಸುವ ವ್ಯಕ್ತಿಗಳಿಗೆ ಸಹಕಾರ ಕೊಡಬೇಕು ಎಂದು ಹೇಳಿದರು.

*ಸಚಿವರಾದ ಚಲುವರಾಯಸ್ವಾಮಿ* ರವರು ಮಾತನಾಡಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಪರಿಶ್ರಮ,ಕೊಡುಗೆಯಿಂದ ಒಕ್ಕಲಿಗರ ಮಠ ಅಭಿವೃದ್ದಿ ಪಥದತ್ತ ಸಾಗಿತು.

ಹಿಂದೆ ಐ.ಎ.ಎಸ್.ಕೆ.ಎಎಸ್.ಕೋಲಾರ ಜಿಲ್ಲೆಯನ್ನ ಪ್ರತಿನಿಧಿಸುತ್ತಿದ್ದರು , ಕಾಲನಂತರ ಮಂಡ್ಯ ಜಿಲ್ಲೆಯು ಸಹ ಉನ್ನತಧಿಕಾರಿಗಳ ಸ್ಥಾನ ಪಡೆಯುವಲ್ಲಿ ಯಶ್ವಸಿಯಾಗಿದ್ದಾರೆ.

ಒಕ್ಕಲಿಗರ ಸಮಾಜ ಯುವಕ, ಯುವತಿಯರು ನಾಗರಿಕ ಸೇವೆಗಳ ಉನ್ನತ ಸ್ಥಾನಕ್ಕೆ ಹೆಚ್ಚು ಬರಬೇಕು.

ಒಕ್ಕಲಿಗರ ಮಠ ಎಲ್ಲ ಸಮುದಾಯದ ಶ್ರೇಯೋಭಿವೃದ್ದಿ ಶ್ರಮಿಸುತ್ತಿದೆ, ನಗರ ಮತ್ತು  ಗ್ರಾಮೀಣ ಪ್ರದೇಶದಲ್ಲಿ  ಶಿಕ್ಷಣಕ್ಕೆ ಒತ್ತು ನೀಡುತ್ತಿದೆ.

ಕೆ.ಸಿ.ರೆಡ್ಡಿ, ಕೆಂಗಲ್ ಹನುಮಂತಯ್ಯ, ಎಸ್.ಎಂ.ಕೃಷ್ಣ, ಕಡಿದಾಳ್ ಮಂಜಪ್ಪರವರನ್ನು ಕಾಂಗ್ರೆಸ್ ಪಕ್ಷ ನಾಲ್ಕು ಮುಖ್ಯಮಂತ್ರಿಗಳನ್ನು ಕೊಟ್ಟ ಪಕ್ಷ.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ ಆಡಳಿತದಲ್ಲಿ ಒಕ್ಕಲಿಗರಿಗೆ ಉನ್ನತವಾದ ಸೂಕ್ತ ಸ್ಥಾನಮಾನ ನೀಡಲಾಗಿದೆ.

ಜಾತಿಗಣತಿ ಕ್ಯಾಬಿನೇಟ್ ನಲ್ಲಿ ಇಟ್ಟು  ಸಾಧಕ/ಭಾದಕಗಳನ್ನು ಚರ್ಚಿಸಲಾಗುವುದು.

ಡಿ.ಕೆ.ಶಿವಕುಮಾರ್ ರವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗುವುದು ಖಚಿತ.

ಅದಿಚುಂಚನಗಿರಿ ಕ್ಷೇತ್ರದಿಂದ ಲಕ್ಷಾಂತರ ಜನರಿಗೆ ಶಿಕ್ಷಣ ಸಿಗುತ್ತಿದೆ.

ಸಮಾಜ ತಿದ್ದುವ ಕೆಲಸ, ಧಾರ್ಮಿಕ ಕೆಲಸಗಳು ಸ್ವಾಮೀಜಿಗಳಿಂದ ಮಾತ್ರ ಸಾಧ್ಯ ಎಂದು ಹೇಳಿದರು.


*ಸಚಿವರಾದ ಡಾ.ಎಂ.ಸಿ.ಸುಧಾಕರ್ ರವರು* ಮಾತನಾಡಿ ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿದ್ದೇವೆ ಎಂದು ಹೇಳುವುದಕ್ಕೆ ಹೆಮ್ಮೆ ಪಡಬೇಕು, ನಮ್ಮ ಜನಾಂಗದಲ್ಲಿ ವ್ಯವಸಾಯ ನಂಬಿ ಮಾಡಿ ಜೀವನ ಸಾಗಿಸುವರು.

ರೈತ ಕುಟುಂಬ, ಶಿಕ್ಷಕರ ಕುಟುಂಬದಿಂದ ಮಕ್ಕಳು ಯು.ಪಿ.ಎಸ್.ಸಿ.ಆಯ್ಕೆಯಾಗಿದ್ದಾರೆ.

ಗೌರವಯುತ ಉದ್ಯೋಗ ಎಂದರೆ ಯು.ಪಿ.ಎಸ್.ಸಿ ಪಾಸ್ ಮಾಡುವುದು. 20ಗಂಟೆಗಳ ಕಾಲ ಸತತ ವಿದ್ಯಾಭ್ಯಾಸದಿಂದ ಮತ್ತು ಗುರಿ ಮತ್ತು ಗುರುಗಳ ಮಾರ್ಗದರ್ಶನದಿಂದ ಒಕ್ಕಲಿಗರ ಯುವತಿ, ಯುವತಿಯರು ಪಾಸ್ ಆಗಿದ್ದಾರೆ.  

ತಂದೆ,ತಾಯಿಯ ಪ್ರೋತ್ಸಹದ ಪ್ರತಿಫಲದಿಂದ ಯು.ಪಿ.ಎಸ್.ಸಿ. ಆಯ್ಕೆಯಾಗಿದ್ದಾರೆ.

ಒಕ್ಕಲಿಗರ ಸಮುದಾಯದ ಯುವಕ, ಯುವತಿಯರು ಯುಪಿಎಸ್.ಸಿ.ಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ, ಅವರಿಗೆ ಪ್ರೋತ್ಸಹ ನೀಡಲಾಗುವುದು.

ಕೆಲವು ಉನ್ನತಧಿಕಾರಿಗಳ ನಾಗರಿಕರ ಸ್ನೇಹಿ ಆಗಿರುವುದಿಲ್ಲ ಅದನ್ನ ಕಂಡರೆ ಬೇಸರವಾಗುತ್ತದೆ.

ಐ.ಎ.ಎಸ್.ಮತ್ತು ಐಪಿಎಸ್ ಅಧಿಕಾರಿಗಳು ಮಾನವೀಯತೆ ಮೌಲ್ಯಗಳು ಇರುವವರು ಇದ್ದಾರೆ ಎಂದು ಹೇಳಿದರು.


2024 ನೇ ಸಾಲಿನಲ್ಲಿ ಯು.ಪಿ.ಎಸ್.ಸಿ. ಪರೀಕ್ಷೆಗಳಲ್ಲಿ ಸಾಧನೆಗೈದ ಸಮುದಾಯದ  ಕು|| ರಮ್ಯ ಆರ್ .ನಾಗೇಂದ್ರ ಬಾಬು ಕುಮಾರ್, ಶಶಾಂತ್ ಎನ್.ಎಮ್

ಕು|| ಸುಮಾ ಹೆಚ್.ಕೆ, ಶ್ರೀಮತಿ ನವ್ಯ ಕೆ, ಚಂದನ್ ಬಿ.ಎಸ್, ಡಾ।।ವಿವೇಕ್ ರೆಡ್ಡಿ ಎನ್, ರಕ್ಷಿತ್ ಕೆ ಗೌಡ,ರಾಹುಲ್ ಗೌಡ ಆರ್.ರವರಿಗೆ ಅಭಿನಂದಿಸಿ, ಸನ್ಮಾನಿಸಲಾಯಿತು.

Post a Comment

0Comments

Post a Comment (0)