ನಾಡಪ್ರಭು ಕೆಂಪೇಗೌಡರ ಆಡಳಿತ ಶೈಲಿಯನ್ನು ರಾಜ್ಯ ಸರ್ಕಾರ ಆಡಳಿತದಲ್ಲಿ ಆಳವಡಿಸಿಕೊಳ್ಳಬೇಕು ಎಂದು- ಶ್ರೀ ಸೌಮ್ಯನಾಥ ಸ್ವಾಮಿಜಿ, ಎಸ್.ಸುರೇಸ್ ಕುಮಾರ್ ಕರೆ ನೀಡಿದರು.
ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಬಿಬಿಎಂಪಿ ವತಿಯಿಂದ ನಾಡಪ್ರಭು ಕೆಂಪೇಗೌಡರ 515ನೇ ಜನ್ಮ ದಿನಾಚರಣೆ ಸಮಾರಂಭ ಮತ್ತು ಬೃಹತ್ ರಥಯಾತ್ರೆ ಕಾರ್ಯಕ್ರಮ.
ಅದಿಚುಂಚನಗಿರಿ ಮಹಸಂಸ್ಥಾನದ ಶ್ರೀ ಸೌಮ್ಯನಾಥ ಸ್ವಾಮೀಜಿಗಳು, ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು, ಕಾರ್ಯಪಾಲಕ ಅಭಿಯಂತರಾದ ಗಂಗಾಧರ್, ಕಂದಾಯಧಿಕಾರಿ ಬಸವರಾಜ್ ರವರು, ಒಕ್ಕಲಿಗರ ವೇದಿಕೆ ಅಧ್ಯಕ್ಷರಾದ ರಾಜಣ್ಣರವರು ನಾಡಪ್ರಭು ಕೆಂಪೇಗೌಡರಿಗೆ ಮಾಲಾರ್ಪಣೆ ಮಾಡಿ , ಕೆಂಪೇಗೌಡರ ಪ್ರತಿಮೆ ಇರುವ ರಥವನ್ನು ಶಿವನಗರ ಬಸವೇಶ್ವರನಗರ ಮತ್ತು ಕಾಮಾಕ್ಷಿಪಾಳ್ಯ ವಾರ್ಡ್ ಭವ್ಯ ಮೆರವಣಿಗೆ ಸಾಗಿತು.
*ಶ್ರೀ ಸೌಮ್ಯನಾಥ ಸ್ವಾಮೀಜಿರವರು ಮಾತನಾಡಿ* ಎಲ್ಲ ವರ್ಗ, ಧರ್ಮದವರಿಗೆ ಸರಿಸಮಾನವಾಗಿ ಕಂಡ ಜಾತ್ಯತೀತ ಸಿದ್ದಾಂತದ ಪ್ರತಿಪಾದಕ ನಾಡಪ್ರಭು ಕೆಂಪೇಗೌಡರು.
ಬೆಂಗಳೂರುನಗರ ಜಾತ್ಯತೀತನಗರವಾಗಿದೆ, ನಗರ ವಾಸಿಗಳು ಬೆಳ್ಳಗ್ಗೆ ಎದ್ದು ಕೆಂಪೇಗೌಡರ ಸ್ಮರಣೆ ಮಾಡಬೇಕು.
ಬೆಂಗಳೂರು ನಗರ ಸೌಂದರ್ಯಕರಣ, ಪರಿಸರ ಪ್ರಕೃತಿಯನ್ನು ಕಟ್ಟಿಕೊಟ್ಟವರು ಕೆಂಪೇಗೌಡರು.
ರಾಜ್ಯ ಸರ್ಕಾರ ಮತ್ತು ಅಧಿಕಾರಿ, ಸಿಬ್ಬಂದಿಗಳು ಕೆಂಪೇಗೌಡ ಆಡಳಿತ ಸಿದ್ದಾಂತ ಅನುಕರಿಸಬೇಕು.
ಕೆರೆ, ಮರಗಳು ಇದ್ದರೆ ಬದುಕು ಬಂಗಾರವಾಗುತ್ತದೆ. ಗಿಡಮರ ಬೆಳಸಲು, ಸ್ವಚ್ಚತೆ ಕಾಪಾಡಲು ಸ್ವಯಂಪೇರಿತರಾಗಿ ನಾವು ಕೆಲಸ ಮಾಡಬೇಕು, ಸರ್ಕಾರ, ಬಿಬಿಎಂಪಿ ಮಾಡುತ್ತದೆ ಎಂದು ಕಾಯಬಾರದು.
ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರುನಗರ ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆದಿದೆ.
*ಎಸ್.ಸುರೇಶ್ ಕುಮಾರ್ ಮಾತನಾಡಿ* ಬೆಂಗಳೂರುನಗರದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಕೆಂಪೇಗೌಡರ ಋಣವಿದೆ.
ಕೋಟೆ, ಕೆರೆ ಕಟ್ಟೆ, ವ್ಯವಸ್ಥಿತ ನಗರ ನಿರ್ಮಾಣವನ್ನು
ನಾಡಪ್ರಭು ಕೆಂಪೇಗೌಡರು ಕಟ್ಟಿದರು.
1900ಕೆರೆಗಳನ್ನು ನಿರ್ಮಾಣ ಮಾಡಿದರು, ನಗರ ಎಷ್ಟು ಬೆಳೆಯಬೇಕು ಎಂಬುದು ಎಂದು ಗಡಿಗೋಪುರ ನಿರ್ಮಾಣ ಮಾಡಿದರು.
ಬೆಂಗಳೂರುನಗರ ತಂದೆ ನಾಡಪ್ರಭು ಕೆಂಪೇಗೌಡರು. ನಗರ ನಿವಾಸಿಗಳು ಬೆಂಗಳೂರುನ ಗರದ ಬಗ್ಗೆ ಪ್ರಿತಿ ಇರಬೇಕು, ನಮ್ಮ ನೆಲ, ಜಲ ಪರಿಸರ ಎಂಬ ಅಭಿಮಾನ ಬೆಳಸಿಕೊಳ್ಳಬೇಕು.
ಅಭಿವೃದ್ದಿಯಲ್ಲಿ ರಾಜಕೀಯ ಇರಬಾರದು, ರಾಜಕೀಯದಲ್ಲಿ ಅಭಿವ಼ದ್ದಿ ಇರಬೇಕು. ನಾಡಪ್ರಭು ಕೆಂಪೇಗೌಡರ ಆಡಳಿತ ಸಿದ್ದಾಂತವನ್ನು ಸರ್ಕಾರ ಆಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಮಾಜಿ ಉಪಮಹಾಪೌರರಾದ ರಂಗಣ್ಣ, ಮಾಜಿ ಪಾಲಿಕೆ ಸದಸ್ಯರುಗಳಾದ ಎಂ.ಮುನಿರಾಜು, ರಾಜಣ್ಣ, ಹೆಚ್.ಆರ್.ಕೃಷ್ಣಪ್ಪ, ಹೆಚ್.ವಿಜಯಕುಮಾರ್, ಸಹಕಂದಾಯಧಿಕಾರಿ ಕೃಷ್ಣ, ಬಿಬಿಎಂಪಿ ಆರೋಗ್ಯ ಇಲಾಖೆಯ ಆರೋಗ್ಯ ಮುಖ್ಯಧಿಕಾರಿ ಡಾ||ರಾಮು, ಆರೋಗ್ಯ ಮೇಲ್ವವಿಚಾರಕರು ಸುಬ್ರಮಣ್ಯ ಪದಕಿ, ರಾಜೇಶ್ವರಿ ಮತ್ತು ಸಿಬ್ಬಂದಿಗಳು ಶಾಲೆಯ ಸಾವಿರಾರು ಮಕ್ಕಳು ಭಾಗವಹಿಸಿದ್ದರು.