ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಹಬ್ಬದ ಪ್ರಯುಕ್ತ 2024ರ ನವಂಬರ್ 16ನೇ ತಾರೀಖು ಉತ್ತರಖಂಡ್ ರಾಜ್ಯದ ಹರಿದ್ವಾರ, ಗಂಗಾನದಿ ತೀರದಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಎ.ಅಮೃತ್ ರಾಜ್ ಅವರು ಮಾತನಾಡಿ, 2500ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ. ವಿಶ್ವದಲ್ಲಿ ಎಲ್ಲಕಡೆಯಲ್ಲಿ ಕನ್ನಡಿಗರು ನೆಲೆಸಿದ್ದಾರೆ.
ಮನೆ, ಮನಗಳಲ್ಲಿ ಕನ್ನಡ ಭಾಷೆ ಉಳಿಸಿ, ಬೆಳಸಬೇಕು ಎಂಬ ಉದ್ದೇಶದಿಂದ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಅಚರಿಸಿಕೊಂಡು ಬರಲಾಗುತ್ತಿದೆ.
ಉತ್ತರಪ್ರದೇಶ ಕಾಶಿಯಲ್ಲಿ ಮತ್ತು ನೇಪಾಳದಲ್ಲಿ ಅಂತರಾಷ್ಟ್ರೀಯ ಕನ್ನಡ ರಾಜ್ಯೋತ್ಸವ ಅಚರಿಸಲಾಗಿತ್ತು 2024ರ ನವಂಬರ್ 16ನೇ ತಾರೀಖು ಹರಿದ್ವಾರ, ಗಂಗಾನದಿ ತೀರದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಹರಿದ್ವಾರದಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವದಲ್ಲಿ ಭಾಗವಹಿಸುವ ಕನ್ನಡಾಭಿಮಾನಿಗಳು 15-8-2024ರ ಒಳಗೆ ಕಛೇರಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿ, ಬರಲು ವಿಮಾನ ಪ್ರಯಾಣ, ಊಟ, ವಸತಿ ಮತ್ತು ನಾಲ್ಕು ದಿನಗಳ ಪ್ರವಾಸವೆಚ್ಚ 25000ಸಾವಿರ ಪಾವತಿ ಮಾಡಬೇಕು.
15ನೇ ನವಂಬರ್ ಬೆಂಗಳೂರಿನಿಂದ ಹರಿದ್ವಾರಕ್ಕೆ ವಿಮಾನದಲ್ಲಿ ಪ್ರಯಾಣ 16ನೇ ತಾರೀಖು ಬೆಳಗ್ಗೆ ನಯನದೇವಿ, ಮಾನಸದೇವಿ ಗಂಗಾರತಿ ವೀಕ್ಷಣೆ ನಂತರ ಸಂಜೆ 6ಗಂಟೆಗೆ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಸಭಾ ಕಾರ್ಯಕ್ರಮ.
17ನೇ ತಾರೀಖು ಋಷಿಕೇಶ (ರಾಮ ಝೂಲಾ, ಲಕ್ಷಣ ಝೂಲಾ)ವೀಕ್ಷಣೆ ಕಾರ್ಯಕ್ರಮ.
ಕನ್ನಡ ನಾಡಿನ ಹೆಸರಾಂತ ಕಲಾವಿದರು ಮತ್ತು ಸಾಹಿತಿಗಳು ಗಣ್ಯಮಹನೀಯರುಗಳು ಭಾಗವಹಿಸಲಿದ್ದಾರೆ.
ಕನ್ನಡ ನಾಡಿಗೆ ಗಣನೀಯ ಸೇವೆ ಸಲ್ಲಿಸಿದ ಸಾಧಕ/ಸಾಧಕಿಯರಿಗೆ ಸನ್ಮಾನಿಸಲಾಗುತ್ತಿದೆ.