ಉನ್ನತ ತಂತ್ರಜ್ಞಾನ ಮತ್ತು ವೈಯಕ್ತಿಕ ಸೇವೆಗಳ ಮೂಲಕ ಗ್ರಾಹಕ ಅನುಭವವನ್ನು ಪರಿವರ್ತಿಸಲು ಮುಂದಾದ ಮಲ್ಟಿ ಬ್ರಾಂಡ್ ನ್ಯಾಚುರಲ್ಸ್ ಬಿಎಇ ಮಳಿಗೆಗಳು
ಬೆಂಗಳೂರು, ಜೂನ್ 18,2024: ಭಾರತದಲ್ಲಿ ಕೇಶ ಮತ್ತು ಸೌಂದರ್ಯ ಸಲೋನ್ಗಳ ಪೈಕಿ ಅತ್ಯಂತ ದೊಡ್ಡ ಸರಣಿಗಳಲ್ಲಿ ಒಂದಾದ ನ್ಯಾಚುರಲ್ಸ್ ಈಗ ಬಹುಬ್ರಾಂಡ್ ರೀಟೇಲ್ ಮಾರಾಟ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದು, ಸೌಂದರ್ಯ ಉತ್ಪನ್ನಗಳಿಗಾಗಿ ತಮ್ಮ ಮೊದಲ ಮಳಿಗೆಯಾದ - ನ್ಯಾಚುರಲ್ಸ್ ಬಿಎಇ(ಬ್ಯೂಟಿ ಎಂಡ್ ಎಕ್ಸ್ಪಿರಿಯನ್ಸಸ್) ಮಳಿಗೆಯನ್ನು ಬೆಂಗಳೂರಿನಲ್ಲಿ ಆರಂಭಿಸಿದೆ.
ಜನಪ್ರಿಯ ರೂಪದರ್ಶಿ ಮತ್ತು ನಟಿ ಸನ್ನಿ ಲಿಯೋನ್ ಅವರೊಂದಿಗೆ ನ್ಯಾಚುರಲ್ಸ್ನ ಸ್ಥಾಪಕರಾದ ವೀಣಾ ಕೆ. ಮತ್ತು ನ್ಯಾಚುರಲ್ಸ್ನ ಸಹ ಸ್ಥಾಪಕರು ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸಿ. ಕೆ. ಕುಮಾರವೇಲ್ ಅವರು ನಗರದಲ್ಲಿನ ಎಚ್ಆರ್ಬಿಆರ್ ಲೇಔಟ್ನಲ್ಲಿ ನ್ಯಾಚುರಲ್ಸ್ ಬಿಎಇನ ಪ್ರಮುಖ ಮಳಿಗೆಯನ್ನು ಉದ್ಘಾಟಿಸಿದರು.
“ಅತ್ಯಾಧುನಿಕ ತಂತ್ರಜ್ಞಾನವನ್ನು ವೈಯಕ್ತಿಕ ಸೇವೆಯೊಂದಿಗೆ ಸಂಯೋಜಿಸಿ ಒಂದೇ ತಾಣದಲ್ಲಿ ಎಲ್ಲ ಸೌಂದರ್ಯ ಉತ್ಪನ್ನಗಳನ್ನು ನ್ಯಾಚುರಲ್ಸ್ ಬಿಎಇ ಸಾದರಪಡಿಸಲಿದ್ದು, ಅದರೊಂದಿಗೆ ಸಾಟಿಯಿಲ್ಲದ ಶಾಪಿಂಗ್ ಅನುಭವವನ್ನು ದೊಡ್ಡ ಸಂಖ್ಯೆಯ ಗ್ರಾಹಕರಿಗೆ ಸಾದರಪಡಿಸಲಿದೆ” ಎಂದು ವೀಣಾ ಹೇಳುತ್ತಾರೆ.
ಮೇಕಪ್ಗಾಗಿ ಸ್ಮಾರ್ಟ್ ಮಿರ್ಸ್, ಡಿಐವೈ ಶೇಡ್ ಕ್ರಿಯೇಟರ್ಗಳು ಮತ್ತು ಪರಿಣತರಿಂದ ಚರ್ಮದ ಆರೈಕೆ ಕುರಿತ ಶಿಫಾರಸುಗಳ ಜೊತೆಗೆ ಪ್ರತಿ ಬಿಎಇ ಮಳಿಗೆ ಗ್ರಾಹಕರಿಗೆ ತಲ್ಲೀನಗೊಳಿಸುವ ಅನುಭವದ ಖಾತ್ರಿ ನೀಡುತ್ತದೆ.
ಸ್ಟಾರ್ ಸ್ಟçಕ್ ಶ್ರೇಣಿಯ ಸೌಂದರ್ಯ ಉತ್ಪನ್ನಗಳ ಮಾಲೀಕರಾಗಿರುವ ಸನ್ನಿ ಲಿಯೋನ್ ಅವರು ಈ ಸ್ಟೋರ್ ಉದ್ಘಾಟಿಸಿದ ಸಂದರ್ಭದಲ್ಲಿ ನ್ಯಾಚುರಲ್ಸ್ ಬಿಎಇ ಮಳಿಗೆಯಲ್ಲಿ ತಮ್ಮ ಪ್ರತ್ಯೇಕ ಶ್ರೇಣಿಯ ಸೌಂದರ್ಯ ಆರೈಕೆ ಉತ್ಪನ್ನಗಳನ್ನು ಪರಿಚಯಿಸುತ್ತಿರುವುದನ್ನು ಪ್ರಕಟಿಸಿದರು.
``ನ್ಯಾಚುರಲ್ಸ್ ಬಿಎಇನ ಭಾಗವಾಗಿರಲು ಸ್ಟಾರ್ಸ್ಟçಕ್ ಉತ್ತಮ ಸ್ಥಾನದಲ್ಲಿದೆ. ಯಾವುದೇ ಉತ್ಪನ್ನವನ್ನು ಆಳವಾಗಿ ಭಾರತೀಯ ಮಾರುಕಟ್ಟೆಯೊಳಕ್ಕೆ ಒಯ್ಯಲು ಅನನ್ಯವಾದ ಗ್ರಾಹಕರನ್ನು ನ್ಯಾಚುರಲ್ಸ್ ಬಿಎಇ ಹೊಂದಿದೆ’’ ಎಂದು ಸನ್ನಿ ಅವರು ಹೇಳಿದರು. ಸನ್ನಿ ಅವರು ಈಗಾಗಲೇ ನ್ಯಾಚುರಲ್ಸ್ ಬ್ಯೂಟಿ ಅಕಾಡೆಮಿ ಜೊತೆಗೆ ಸಹಯೋಗ ಹೊಂದಿದ್ದಾರೆ.