ಚುನಾವಣಾ ಪ್ರಚಾರ ವೇಳೆ ಶಾಸಕ ಉದಯ್‌ ಗನ್‌ಮ್ಯಾನ್‌ ಮೇಲೆ ಹಲ್ಲೆ ನಡೆಸಿತ್ತು ದರ್ಶನ್‌ ಗ್ಯಾಂಗ್‌!

VK NEWS
By -
0

 

ಮಂಡ್ಯ:  ಲೋಕಸಭಾ ಚುನಾವಣೆ  ಸಮಯದಲ್ಲಿ ದರ್ಶನ್ಅವರು ಕಾಂಗ್ರೆಸ್ಅಭ್ಯರ್ಥಿ ಸ್ಟಾರ್ಚಂದ್ರು   ಪರ ಪ್ರಚಾರಕ್ಕೆ ಮಂಡ್ಯಕ್ಕೆ  ಆಗಮಿಸಿದ್ದರು. ಏಪ್ರಿಲ್ 22 ರಂದು ಮದ್ದೂರು   ಕ್ಷೇತ್ರದಲ್ಲಿ ಸ್ಟಾರ್ ಚಂದ್ರು ಪರ ದರ್ಶನ್ ಪ್ರಚಾರ ನಡೆಸುತ್ತಿದ್ದಾಗ ಮದ್ದೂರು ಶಾಸಕ ಉದಯ್  ಅವರ ಗನ್ಮ್ಯಾನ್ಆಗಿದ್ದ ನಾಗೇಶ್  ಜೊತೆ ದರ್ಶನ್ ಪಟಾಲಂ ಗಲಾಟೆ ನಡೆಸಿತ್ತು.  ಈ ವಿಚಾರ ಈಗ ತಡವಾಗಿ ಬೆಳಕಿಗೆ ಬಂದಿದೆ.

ಮುಖಂಡರನ್ನ ಹತ್ತಿರಕ್ಕೆ ಬಿಟ್ಟುಕೊಳ್ಳುವ ವಿಚಾರದಲ್ಲಿ ಲಕ್ಷ್ಮಣ್, ನಾಗರಾಜು ಹಾಗೂ ಇತರರು ಡಿಎಆರ್ ಪೇದೆ ನಾಗೇಶ್ ಜೊತೆ ಜಗಳ ಮಾಡಿದ್ದರು. ಇದೇ ಜಗಳ ಮುಂದುವರಿಸಿ ಕದಲೂರು ಉದಯ್ ಮನೆ ಮುಂದೆ ಪೇದೆ ನಾಗೇಶ್ಅವರ ಮೇಲೆ ಹಲ್ಲೆ ಮಾಡಿತ್ತು.

ಪೊಲೀಸರು ನಮ್ಮನ್ನ ಏನು ಮಾಡಲು ಆಗಲ್ಲ. ನಮ್ಮ ಹತ್ತಿರ ಏನು ಕಿತ್ತುಕೊಳ್ಳಲು ಆಗಲ್ಲ ಎಂದು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿ ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿದವರ ವಿರುದ್ಧ ಕೆಸ್ತೂರು ಪೊಲೀಸ್ ಠಾಣೆಗೆ ನಾಗೇಶ್ಅವರು ದೂರು ನೀಡಲು ಹೋಗಿದ್ದರು. ಅಷ್ಟೇ ಅಲ್ಲದೇ ಮದ್ದೂರಿನ ತಾಲೂಕು ಆಸ್ಪತ್ರೆಯಲ್ಲಿ ನಾಗೇಶ್ಅವರಿಗೆ ಚಿಕಿತ್ಸೆ ಸಹ ನಡೆದಿತ್ತು.

 ವಿಚಾರ ದೊಡ್ಡದಾಗುತ್ತಿದ್ದಂತೆ ಶಾಸಕ ಉದಯ್ ಅವರು ರಾಜಿ ಸಂಧಾನ ಮಾಡಿ ನಾಗೇಶ್ಅವರನ್ನು ಮನವೊಲಿಸಿದ್ದರು. ನಂತರ ಉದಯ್ ಗನ್ಮ್ಯಾನ್ ಹುದ್ದೆಯಿಂದ ಹೊರಬಂದಿದ್ದ ನಾಗೇಶ್ ಅವರು ಈಗ ಡಿಎಆರ್ ತುಕಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Post a Comment

0Comments

Post a Comment (0)