ಜಯನಗರ:ಚಂದ್ರಗುಪ್ರ ಮೌರ್ಯ(ಶಾಲಿನಿ)ಆಟದ ಮೈದಾನದಲ್ಲಿ ರಕ್ಷಾ ಫೌಂಡೇಷನ್ (ರಿ)ವತಿಯಿಂದ ಸಾವಿರಾರು ಮಹಿಳೆಯರಿಂದ ಲಲಿತ ಸಹಸ್ರನಾಮ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ದಿವ್ಯ ಸಾನ್ನಿಧ್ಯ ಹರಿಹರಪುರದ ಪರಮಪೂಜ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳವರು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರರವರು, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರು,ಮೂರ್ತಿ ಫೌಂಡೇಷನ್ ಸಂಸ್ಥಾಪಕರು, ರಾಜ್ಯಸಭಾ ಸದಸ್ಯೆ ಶ್ರೀಮತಿ ಸುಧಾಮೂರ್ತಿ, ಲೋಕಸಭಾ ಸದಸ್ಯರಾದ ಡಾ||ಮಂಜುನಾಥ್ ರವರು, ಸಹ ಕಾರ್ಯವಾಹ, ರಾಷ್ಟ್ರೀಯ ಸ್ವಯಂ ಸೇವಾ ಸಂಘ ನಾ.ತಿಪ್ಪೇಸ್ವಾಮಿರವರು, ಶಾಸಕರು, ಬಿಜೆಪಿ ಜಿಲ್ಲಾಧ್ಯಕ್ಷರಾದ ಸಿ.ಕೆ. ರಾಮಮೂರ್ತಿರವರು,ಮಾಜಿ ಮಹಾಪೌರರಾದ ಎಸ್.ಕೆ.ನಟರಾಜ್, ನಗರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಮಾಜಿ ಬಿಬಿಎಂಪಿ ಸದಸ್ಯ ಕೆ.ಉಮೇಶ್ ಶೆಟ್ಟಿ,ಮಾಜಿ ಬಿಬಿಎಂಪಿ ಸದಸ್ಯ ಬಿ.ಸೋಮಶೇಖರ್, ಬಿಬಿಎಂಪಿ ಮಾಜಿ ಸದಸ್ಯೆ ಶ್ರೀಮತಿ ನಾಗರತ್ನ ರಾಮಮೂರ್ತಿರವರು ಚಾಲನೆ ನೀಡಿದರು.
ಶ್ರೀ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸ್ವಾಮೀಜಿರವರು ಮಾತನಾಡಿ ಭಾರತೀಯ ಸಂಸ್ಕೃತಿ ಅತ್ಯಂತ ಪ್ರಾಚೀನ ಸಂಸ್ಕೃತಿಯಾಗಿದೆ.ಸಾಮೂಹಿಕ ಪೂಜೆ ಮತ್ತು ಸಾಮೂಹಿಕ ಲಲಿತಾ ಸಹಸ್ರನಾಮ ಪಠನೆಯಿಂದ ದೇಶಕ್ಕೆ ಮತ್ತು ಸಮಾಜಕ್ಕೆ ಒಳ್ಳೆಯದಾಗುತ್ತದೆ.
ಮನುಷ್ಯ ಸಂಸ್ಕರವಂತರಾಗಿ 100ವರ್ಷ ಬದುಕು ಸಾಗಿಸಬೇಕು, ಬ್ರಿಟಿಷರು ಭಾರತಕ್ಕೆ ಒಡೆದ ಆಳುವ ನೀತಿಯಿಂದ ನಮ್ಮ ವಿಶಿಷ್ಟವಾದ ಸಂಸ್ಕೃತಿಯನ್ನು ಹಾಳು ಮಾಡಿದರು ಅವರು ದೇಶ ಬಿಟ್ಟು ಹೋಗುವ ಸಂದರ್ಭದಲ್ಲಿ ಒಡೆದು ಆಳುವ ನೀತಿಯನ್ನು ಇಲ್ಲಿ ಬಿಟ್ಚು ಹೋದರು ಅವಕಾಶವಾದಿಗಳು ಅದನ್ನ ಬಳಸಿಕೊಂಡು ಹೋಗುತ್ತಿದ್ದಾರೆ.
ನಾವೆಲ್ಲರು ಒಂದೇ ಕುಟುಂಬದಂತೆ ಸೇವಾ ಮನೋಭಾವನೆಯಿಂದ ಬದುಕಿದರೆ ಸಂಸ್ಕಾರವಂತೆ ಬಾಳಬಹುದು.
ಹಾಲಿನಿಂದ ಮೊಸರು, ಮೊಸರಿನಿಂದ ಬೆಣ್ಣೆ, ಬೆಣ್ಣೆಯಿಂದ ತುಪ್ಪ ಮಾಡಿದಂತೆ ಪ್ರತಿಯೊಬ್ಬರು ಸಂಸ್ಕಾರವಂತರಾದರೆ ದೇಶ ಉಳಿಯುತ್ತದೆ. ನಮ್ಮ ಅಚಾರ, ವಿಚಾರ ಸಂಸ್ಕೃತಿ ಸಂಪ್ರಾದಾಯವನ್ನು ಶ್ರದ್ದೆ ಭಕ್ತಿಯಿಂದ ಅಚರಿಸಬೇಕು, ಭೇದಬಾವ ಮಾಡದೇ ಅನ್ಯ ಧರ್ಮವನ್ನು ಗೌರವಿಸಬೇಕು ಎಂದು ಹೇಳಿದರು.
ಬಿ.ವೈ.ವಿಜಯೇಂದ್ರರವರು ಮಾತನಾಡಿ ತಾಯಿಯನ್ನ ಯಾರು ಪೂಜೆ ಮಾಡುತ್ತಾರೆ ಮತ್ತು ಮಹಿಳೆಯರಿಗೆ ಯಾರು ಗೌರವಿಸುತ್ತಾರೆ ಅವರು ಜೀವನದಲ್ಲಿ ಯಶ್ವಸಿ ಕಾಣುತ್ತಾರೆ.
ಹಿಂದೂ ಸಂಸ್ಕೃತಿ ಅಚಾರ, ವಿಚಾರ ಮುಂದಿನ ಪೀಳಿಗೆಗೆ ತಿಳಿಸಲು, ಅರಿವು ಮೂಡಿಸಲು ಇಂತಹ ಪೂಜಾ ಕಾರ್ಯಕ್ರಮ ಅವಶ್ಯಕತೆ ಇದೆ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರು ಮಾತನಾಡಿ ದೇವರು ನಂಬಬೇಕು, ಮನುಷ್ಯ ಮೋಸ ಮಾಡಬಹುದು ನಂಬಿದ ದೇವರು ಮೋಸ ಮಾಡವುದಿಲ್ಲ. ಹಿಂದೂ ಧರ್ಮ ಸಂಸ್ಕೃತಿ ಉಳಿಯಬೇಕು, ಧರ್ಮ ರಕ್ಷಿಸಿದರೆ, ನಮ್ಮನ್ನ ಧರ್ಮ ರಕ್ಷಿಸುತ್ತದೆ.
ಇಂದು ರಾಜ್ಯದಲ್ಲಿ ಬಾಂಬ್ ದಾಳಿ, ಜೈಶ್ರೀರಾಮ ಅಂದರೆ ಅವರ ಮೇಲೆ ದಾಳಿಯಾಗುತ್ತಿದೆ ವಿಚ್ಚಿದ್ರಕಾರಿ ಶಕ್ತಿಗಳ ವಿರುದ್ದ ಹೋರಾಟ ಮಾಡಲು ನಾವೆಲ್ಲರು ಹಿಂದು ಧರ್ಮ ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.
ಶಾಸಕರಾದ ಸಿ.ಕೆ.ರಾಮಮೂರ್ತಿ ರವರು ಮಾತನಾಡಿ ರಕ್ಷಾ ಫೌಂಡೇಷನ್ ವತಿಯಿಂದ ಲೋಕಕಲ್ಯಾರ್ಥಕ್ಕಾಗಿ ಲಲಿತಾ ಸಹಸ್ರನಾಮ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಡಿನ ಜನರ ಜೀವನದಲ್ಲಿ ಸುಖ, ಶಾಂತಿ ನೆಮ್ಮದ್ದಿ ಲಭಿಸಲಿ ಮತ್ತು ಸಕಾಲಕ್ಕೆ ಮಳೆ, ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಮಾಜಿ ಬಿಬಿಎಂಪಿ ಸದಸ್ಯರುಗಳಾದ ಚಂದ್ರಶೇಖರ್ ರಾಜು, ಗೋವಿಂದನಾಯ್ಡು,ಶ್ರೀಮತಿ ಲಕ್ಷ್ಮಿನಟರಾಜ್, ಶ್ರೀಮತಿ ಮಾಲತಿ ಸೋಮಶೇಖರ್ ಶ್ರೀಮತಿ ದೀಪಿಕಾ ಎಲ್.ಮಂಜುನಾಥರೆಡ್ಡಿರವರು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷರಾದ ಮಂಜುಳರವರು, ಉಪಾಧ್ಯಕ್ಷೆ ಶ್ರೀಮತಿ ಭಾಗ್ಯವತಿ ಅಮರೇಶ್ ರವರು ಉಪಸ್ಥಿತರಿದ್ದರು.