ಬೆಂಗಳೂರು:ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ (ಕೆಯುಡಬ್ಲೂೃಜೆ) ಅಗಲಿದ ಹಿರಿಯ ಪತ್ರಕರ್ತರಾದ ಪದ್ಮ ವಿಭೂಷಣ ಪುರಸ್ಕೃತರಾದ ರಾಮೋಜಿ ರಾವ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮತ್ತಿಹಳ್ಳಿ ಮದನ ಮೋಹನ್ ಅವರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕೆಯುಡಬ್ಲೂೃಜೆ ಸಭಾಂಗಣದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ನುಡಿನಮನ ಕಾರ್ಯಕ್ರಮದಲ್ಲಿ ಅವಧಿ ಸಂಪಾದಕ ಜಿ.ಎನ್.ಮೋಹನ್, ನ್ಯೂಸ್ ಫಸ್ಟ್ ಎಂಡಿ ಮತ್ತು ಸಿಇಒ ಎಸ್.ರವಿಕುಮಾರ್, ದ ಫೆಡರಲ್ ಕನ್ನಡ ಮುಖ್ಯಸ್ಥ ಮುರಳೀಧರ ಖಜಾನೆ, ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿದರು.
ಹಿರಿಯ ಪತ್ರಕರ್ತರಾದ ಎಸ್ ಕೆ ಶೇಷಚಂದ್ರಕಾ, ಸುಬ್ರಹ್ಮಣ್ಯ, ಕೆಯುಡಬ್ಲ್ಯೂಜೆ ಪದಾಧಿಕಾರಿಗಳಾದ ಜಿ.ಸಿ.ಲೋಕೇಶ್, ವಾಸುದೇವ ಹೊಳ್ಳ, ಗಣಪತಿ ಗಂಗೊಳ್ಳಿ, ಎನ್.ರವಿಕುಮಾರ್ ಮತ್ತಿತರರು ಹಾಜರಿದ್ದರು.