ಬೆಂಗಳೂರು : ಶ್ರೀ ಮಹೇಶ್ವರಿ ದೇವಸ್ಥಾನ (ಟ್ರಸ್ಟ್), ವತಿಯಿಂದ ಜೂನ್ 21 ರಿಂದ ಜುಲೈ 3ರ ವರೆಗೆ ಶ್ರೀ ಮಹೇಶ್ವರಿ ಅಮ್ಮನವರ 112ನೇ ವರ್ಧಂತ್ಯೋತ್ಸವ ಮತ್ತು ಮಲ್ಲೇಶ್ವರಂ ಊರ ಹಬ್ಬದ ಪ್ರಯುಕ್ತ ಮಲ್ಲೇಶ್ವರಂ ಸಂಪಿಗೆ ರಸ್ತೆ, 8ನೇ ಅಡ್ಡರಸ್ತೆಯ ತಿರುವುನಲ್ಲಿರುವ ಅಮ್ಮನವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದು, ಅವುಗಳ ವಿವರಗಳು ಈ ರೀತಿ ಇವೆ :
ಜೂನ್ 21, ಶುಕ್ರವಾರ ಸಂಜೆ 6-30ಕ್ಕೆ ಪ್ರಥಮ ತಳಿಗೆ, ಜೂನ್ 25, ಮಂಗಳವಾರ ಸಂಜೆ 6-30ಕ್ಕೆ ದ್ವಿತೀಯ ತಳಿಗೆ, ಜೂನ್ 28, ಶುಕ್ರವಾರ ಸಂಜೆ 6-30ಕ್ಕೆ ತೃತೀಯ ತಳಿಗೆ, ಜೂನ್ 29, ಶನಿವಾರ ಬೆಳಗ್ಗೆ 8ಕ್ಕೆ ಕಳಶ ಸ್ಥಾಪನೆ, ಹೋಮಾದಿಗಳು, ಸಂಜೆ 4-30ಕ್ಕೆ ಸುಮಂಗಲಿಯರ ಪೂಜೆ, 6ಕ್ಕೆ ಚಂಡಿಕಾ ಪಾರಾಯಣ, ಜೂನ್ 30, ಭಾನುವಾರ ಬೆಳಿಗ್ಗೆ 8ಕ್ಕೆ ಚಂಡಿಕಾ ಹೋಮ, ಜುಲೈ 1, ಸೋಮವಾರ ಬೆಳಗ್ಗೆ 9ಕ್ಕೆ ಬಸವಣ್ಣ ದೇವರಿಗೆ ಮತ್ತು ಮಹೇಶ್ವರಿ ಅಮ್ಮನವರಿಗೆ ಬೆಲ್ಲದ ಆರತಿ, 12ಕ್ಕೆ ಅನ್ನ ಸಂತರ್ಪಣೆ, ಜುಲೈ 2, ಮಂಗಳವಾರ ಬೆಳಗ್ಗೆ 8-30ಕ್ಕೆ ದೊಡ್ಡಮ್ಮ, ಚಪಲಮ್ಮ ಮತ್ತು ಮುನೇಶ್ವರ ಸ್ವಾಮಿ ದೇವರುಗಳಿಗೆ ತಂಬಿಟ್ಟು ಆರತಿ, ಜುಲೈ 3, ಬುಧವಾರ ಸಂಜೆ 6-30ಕ್ಕೆ ಪಲ್ಲಕ್ಕಿ ಉತ್ಸವ ಜರುಗಲಿದ್ದು, ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಪದಾಧಿಕಾರಿಗಳು ವಿನಂತಿಸಿದ್ದಾರೆ.