ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಎಸ್.ರಘುನಾಥ್ ರವರಿಗೆ ಬ್ರಾಹ್ಮಣ ಸಮುದಾಯದ ಮುಖಂಡರು, ಸಂಘಟನೆಗಳ ಬೆಂಬಲ
ಬೆಂಗಳೂರು: ಬಬ್ಬೂರುಕಮ್ಮೆ ಸಂಘದ ಸಭಾಂಗಣದಲ್ಲಿ ವಿಪ್ರ ಸ್ನೇಹ ಮಿಲನ ಮತ್ತ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಥಿಸುತ್ತಿರುವ ಎಸ್.ರಘುನಾಥ್ ರವರನ್ನು ಬೆಂಬಲಿಸಿ ಬ್ರಾಹ್ಮಣ ಸಂಘಟನೆಗಳು ಮತ್ತು ಮುಖಂಡರು ಸಭೆ.
ಆದ್ಯಾತ್ಮ ಚಿಂತಕ ಪಾವಗಡ ಪ್ರಕಾಶ್ ರಾವ್, ವಿದ್ಯಾವಾಚಸ್ಪತಿ ಅರುಳು ಮಲ್ಲಿಗೆ ಪಾರ್ಥಸಾರಥಿ,ವೇದಬ್ರಹ್ಮ ಶ್ರೀ ರಾಮಸ್ವಾಮಿ ಅಯ್ಯಂಗಾರ್, ಬಬ್ಬೂರುಕೆಮ್ಮ ಸಂಘದ ಅಧ್ಯಕ್ಷರಾದ ಡಾ||ಎ.ವಿ.ಪ್ರಸನ್ನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನಿಕಟಪೂರ್ವ ಹಿರಿಯ ಉಪಾಧ್ಯಕ್ಷರಾದ ಆರ್.ಲಕ್ಷ್ಮಿಕಾಂತ್ , ವಿಶ್ವವಿಪ್ತತ್ರೇಯ ಅಧ್ಯಕ್ಷರಾದ ಎಸ್.ರಘುನಾಥ್ ರವರು, ಬ್ರಾಹ್ಮಣ ಸಮುದಾಯದ ಮುಖಂಡರುಗಳಾದ ಗೋಪಿನಾಥ್, ಎನ್.ಆರ್, ಕುಲರ್ಕಣಿ, ಜಿ.ಹೆಚ್.ಕುಲರ್ಕಣಿ, ಅಖಿಲಾ ಕರ್ನಾಟಕ ಮದ್ವ ಮಹಾಸಭಾ ಮಹಿಳಾ ಅಧ್ಯಕ್ಷೆ ಮಾಲಿನಿ ಎನ್. ವಿಪ್ರ ಮಹಿಳಾ ಮುಖಂಡರಾದ ಶುಭಲಕ್ಷ್ಮಿರವರು ಭಾಗವಹಿಸಿದ್ದರು.
*ಆರ್.ಲಕ್ಷ್ಮಿಕಾಂತ್* ರವರು ಮಾತನಾಡಿ ಸಮಾನ ಮನಸ್ಕ ಹಾಗೂ ವಿಪ್ರ ಸಮುದಾಯದ ಅಭಿವದ್ದಿಗಾಗಿ ಶ್ರಮಿಸುತ್ತಿರುವವವರನ್ನ ಒಗ್ಗೂಡಿಸಿ ಬ್ರಾಹ್ಮಣ ಸಮುದಾಯದವನ್ನು ಅಭಿವೃದ್ದಿ ಪಡಿಸುವುದು ನಮ್ಮ ಉದ್ದೇಶ.
ಬ್ರಾಹ್ಮಣ ಮಹಾಸಭಾದಲ್ಲಿ ಕಳೆದ 35ವರ್ಷಗಳ ಕಾಲ ವಿವಿಧ ಸ್ಥಾನಗಳಲ್ಲಿ ಅಲಂಕಾರಿಸಿ, ಸಮುದಾಯ ಸಂಘಟನೆ ಶ್ರಮಿಸಿದ್ದೇನೆ.
ಅಧ್ಯಕ್ಷ ಸ್ಥಾನ ಎಂದರೆ ಸಮಾಜವನ್ನು ಮುನ್ನೇಡಸಲು, ಅಭಿವೃದ್ದಿಗೆ ಶ್ರಮಿಸಬೇಕು ಅದರೆ ಸರ್ವಧಿಕಾರತ್ವ ಧೋರಣೆ ಸರಿಯಲ್ಲ.
ಸಿ.ವಿ.ಎಲ್.ಶಾಸ್ತ್ರಿ ಮತ್ತು ಬಿ.ಎನ್.ಸುಬ್ರಮಣ್ಯರವರು ಚುನಾವಣೆ ಮುಗಿದು ಯಾರ ಜೊತೆಯಲ್ಲಿ ಭೇದಬಾವ ಮಾಡದೇ ಎಲ್ಲರನ್ನು ಒಗ್ಗೂಡಿಸಿ ತೆಗೆದುಕೊಂಡು ಹೋಗುತ್ತಿದ್ದರು.
ಸಂಘದಲ್ಲಿ ಸೇವಾ ಮನೋಭಾವನೆ ಕೆಲಸ ಮಾಡುವವರಿಗೆ ಬೆಂಬಲ, ಸಹಕಾರ ನೀಡಬೇಕು.
ಪರಿವರ್ತನ ಸಮಯ ಬಂದಿದೆ, ಬ್ರಾಹ್ಮಣ ಮಹಾಸಭಾದ ಸದಸ್ಯರು ಚಿಂತನೆ ಮಾಡಬೇಕು.
ಬ್ರಾಹ್ಮಣ ಸಮುದಾಯದ ಅಭಿವೃದ್ದಿ ಚಿಂತನೆ ಮಾಡುವ ಮತ್ತು ಗುಂಪುಗಾರಿಕೆ ತೂಲಗಿಸಿ, ಎಲ್ಲರನ್ನು ಸಹೋದರತ್ವದಲ್ಲಿ ಸಂಘಟನೆ ಮಾಡಲು ನಿರ್ಧಾರ ಮಾಡಲಾಗಿದೆ.
ಬ್ರಾಹ್ಮಣ ಸಮುದಾಯದ ಅಭಿವೃದ್ದಿಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ.
ಈ ಬಾರಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಎಸ್.ರಘುನಾಥ್ ರವರು ಸ್ಪರ್ಧೆ ಮಾಡುತ್ತಿದ್ದು ನನ್ನ ಸಂಪೂರ್ಣ ಬೆಂಬಲ ಸಹಕಾರ ನೀಡುತ್ತೇನೆ ನಿಮ್ಮ ಸಹಕಾರ ವಿರಲಿ ಎಂದು ಹೇಳಿದರು.
*ಎಸ್.ರಘುನಾಥ್ ರವರು* ಮಾತನಾಡಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಡಿಸೆಂಬರ್ ನಲ್ಲಿ ನಡೆಯುವ ಸಂಭವವಿದೆ.
ರಾಜ್ಯದಲ್ಲಿ ಇರುವ ಬ್ರಾಹ್ಮಣ ಸಮುದಾಯದ ಮತದಾರರ ಭೇಟಿ ಮಾಡಿ , ಬ್ರಾಹ್ಮಣ ಸಮುದಾಯದ ಅಭಿವೃದ್ದಿಗಾಗಿ ಚುನಾವಣೆ ಪ್ರಣಾಳಿಕೆಯನ್ನು ಘೋಷಣೆ ಮಾಡಿ ಪ್ರತಿ ಸದಸ್ಯರನ್ನ ಭೇಟಿ ಮಾಡಲಾಗುವುದು.
ಅಧ್ಯಕ್ಷ ಸ್ಥಾನದ ಜೊತೆಯಲ್ಲಿ ಜಿಲ್ಲಾ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತದಾನ ಮಾಡಬೇಕು.
ಬ್ರಾಹ್ಮಣ ಮಹಾಸಭಾದಲ್ಲಿ ಪ್ರಜಾಪ್ರಭುತ್ವದ ಕೊರತೆ ಇದೆ, ಮಹಾಸಭಾದಲ್ಲಿ ಬದಲಾವಣೆ ತರಬೇಕು.
ಬೈಲಾ ತಿದ್ದುಪಡಿ ಮಾಡಬೇಕಾಗಿತ್ತು ಅದು ಆಗಲ್ಲಿಲ.
ನಿಮ್ಮೆಲ್ಲರ ಸಹಕಾರ ಬೆಂಬಲದಿಂದ ಈಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದೇನೆ ನಿಮ್ಮ ಸಹಕಾರ, ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ರಾಜ್ಯದ ಹಲವಾರು ಜಿಲ್ಲೆಗಳಿಂದ ವಿಪ್ರ ಮುಖಂಡರು ಆಗಮಿಸಿದ್ದರು.