ಜೀವಮಾನದಲ್ಲಿನ ಭವ್ಯ ಭವಿಷ್ಯದ ಸಾಧನೆಗೆ ಮೊದಲ ಘಟ್ಟವೆನ್ನಲಾಗುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ, ತಾಯಿ ತಂದೆ ಮತ್ತು ಪೋಷಕರ ಸಹಕಾರ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಯಶಸ್ಸು ಗಳಿಸಿರುವ ಮತ್ತೀಕೆರೆಯ ವಿದ್ಯಾ ವ್ಯಭವ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು, ಕಳೆದ ಮೂರು ವರ್ಷಗಳ ಶೇ. 100 ರ ಫಲಿತಾಂಶದ ಸಂಪ್ರದಾಯವನ್ನು ಈ ಬಾರಿಯೂ ಮುಂದುವರೆಸಿ, ವರ್ಷದಿಂದ ವರ್ಷಕ್ಕೆ ತಮ್ಮ ಶಾಲೆಯ ಸಾಧನೆಯ ಗುಣಮಟ್ಟದಲ್ಲೂ ಉನ್ನತಿಯನ್ನು ಗಳಿಸುವಲ್ಲಿ ಸಫಲರಾಗಿದ್ದಾರೆ. ಈ ಸಾಲಿನಲ್ಲಿ, 32 ವಿದ್ಯಾರ್ಥಿಗಳ ಪೈಕಿ 9 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಶೇ. 90% ಕ್ಕೂ ಹೆಚ್ಚಿನ ಅಂಕಗಳನ್ನು, 13 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಶೇ. 80-85 ರಷ್ಟು ಅಂಕಗಳನ್ನು ಹಾಗೂ ಉಳಿದ 10 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಶೇ. 60 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುತ್ತಾರೆ.
ವಿದ್ಯಾರ್ಥಿಗಳಾದ ಮಹಿತ, ಮನ್ವಿತಾ, ಭೂಮಿಕಾ, ನಿತಿನ್ ರೆಡ್ಡಿ, ದಿವ್ಯ ಶ್ರೀ, ಸಿಂಚನ, ತ್ರಿಶಿಕ, ಕೀರ್ತನ್, ನೃತ್ತ, ಸಹಿಲ್ ಹಾಗೂ ಇತರೆ ಎಲ್ಲಾ ವಿದ್ಯಾರ್ಥಿಗಳ ಸಾಧನೆಯ ಹಿಂದೆ ಶಾಲೆಯ ಅಧ್ಯಕ್ಷರಾದ ಶ್ರೀ ಕಿರಣ್ ಪ್ರಸಾದ್ ಹಾಗೂ ಶ್ರೀಮತಿ ಶುಭ ಪ್ರಸಾದ್ ರವರ ಮಾರ್ಗದರ್ಶನದಲ್ಲಿ ಶಾಲೆಯ ಶಿಕ್ಷಕರ ಸಂಕಲ್ಪ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳ ಪೋಷಕರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿರುವ ಆಡಳಿತ ಮಂಡಳಿಯು, ಎಲ್ಲರಿಗೂ ಈ ಸಂದರ್ಭದಲ್ಲಿ ಅಭಿನಂದನೆಗಳನ್ನು ವ್ಯಕ್ತಪಡಿಸಿರುತ್ತದೆ.