ನಮ್ಮ ವಿರುದ್ಧ ಶತ್ರು ಭೈರವಿ ಯಾಗ ಮಾಡಲಾಗುತ್ತಿದೆ: ಡಿಸಿಎಂ ಡಿಕೆಶಿ

VK NEWS
By -
0


ಬೆಂಗಳೂರು: ದೆಹಲಿಯಿಂದ ವಾಪಸ್​ ಆದ ಬಳಿಕ ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, 'ರಾಜ್ಯದ ರಾಜಕೀಯ ಮುಖಂಡರೊಬ್ಬರು ನನ್ನ ಹಾಗೂ ಸಿಎಂ ವಿರುದ್ಧ ಕೇರಳದಲ್ಲಿ ಶತ್ರು ಭೈರವಿ ಯಾಗ ಮಾಡುತ್ತಿದ್ದಾರೆ. ಕೇರಳದಲ್ಲಿ ನನ್ನ ಹಾಗೂ ಸಿಎಂ ವಿರುದ್ಧ ದೊಡ್ಡ ಪೂಜೆ ನಡೆಯುತ್ತಿದೆ. ಶತ್ರು ಭೈರವಿ ಯಾಗ ಮಾಡುವ ಮೂಲಕ ಪಂಚ ಬಲಿ ಕೊಟ್ಟಿದ್ದಾರೆ. ಶತ್ರು ಸಂಹಾರಕ್ಕಾಗಿ ಮಾಡುತ್ತಿರುವ ಶತ್ರು ಭೈರವಿ ಯಾಗವಾಗಿದೆ.  ಇದನ್ನು ಯಾರು ಮಾಡಿಸಿದ್ದಾರೆ, ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ. ಇದರಲ್ಲಿ ಪಾಲ್ಗೊಂಡವರು ನಮಗೆ ಮಾಹಿತಿ ನೀಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಸದ್ಯ ಕೇರಳದಲ್ಲಿ ಈ ಯಾಗ ನಡೆಯುತ್ತಿದೆ. ಮೇಕೆ 21, ಎಮ್ಮೆ 3, ಕುರಿ 21 ಬಲಿ ಕೊಡುತ್ತಿದ್ದಾರೆ. ಅಘೋರಿಗಳ ಮೂಲಕ ಯಾಗ ಮಾಡುತ್ತಿದ್ದಾರೆ. ಅವರ ಪ್ರಯತ್ನ ನಡೀತಾ ಇದೆ. ಯಾರು ಮಾಡಿಸುತ್ತಿದ್ದಾರೆ ಅಂತ ಗೊತ್ತಿದೆ. ನಮ್ಮ ಮೇಲೆ ಅವರು ಏನೇ ಪ್ರಯೋಗ ಮಾಡಿದರೂ, ನಮ್ಮ ನಂಬಿದ ಶಕ್ತಿ ನಮ್ಮನ್ನು ಕಾಪಾಡುತ್ತದೆ. ದೃಷ್ಟಿ ಆಗುತ್ತದೆ ಎಂದು ನನ್ನ ಕೈಗೆ ಖಡ್ಗ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಕೇರಳದ ರಾಜರಾಜೇಶ್ವರ ದೇವಸ್ಥಾನದ ಆಸು - ಪಾಸು ಚೆಕ್ ಮಾಡಿ. ನಿಮಗೇ ಗೊತ್ತಾಗುತ್ತೆ. ಮಾರಣ, ಮೋಹನ, ಸ್ಥಂಬನ. ರಾಜ ಕಂಟಕ ಯಾಗ. ಇದಕ್ಕೆ ಪ್ರತಿಯಾಗಿ ನಾನು ಯಾವುದೇ ಪೂಜೆ ಮಾಡಲ್ಲ. ನಾನು ಮನೆ ಬಿಡುವಾಗ ಪ್ರತಿ ದಿನ ಒಂದು ನಿಮಿಷ ದೇವರಿಗೆ ಕೈ ಮುಗಿಯುತ್ತೇನೆ ಎಂದು ಇದೇ ವೇಳೆ ತಿಳಿಸಿದರು.

Post a Comment

0Comments

Post a Comment (0)