ಬೆಂಗಳೂರು, ಮೇ 03 (ಕರ್ನಾಟಕ ವಾರ್ತೆ): ಎಸ್.ಜೆ. ಯೇಸುರಾಜ್ ಅವರು 17 ನೇ ಜನವರಿ 2005 ರಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯಲ್ಲಿ ನೌಕರರಾಗಿ ಆಯ್ಕೆಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದು, ಇವರ ಶಾಲಾ ದಾಖಲಾತಿ ಹಾಗೂ ನೇಮಕಾತಿ ಸಂದರ್ಭದಲ್ಲಿ ಹಾಜರು ಪಡಿಸಿರುವ ದಾಖಲಾತಿಗಳಂತೆ ಇವರು ಹಿಂದೂ ಧರ್ಮಕ್ಕೆ ಸೇರಿದವರಾಗಿರುತ್ತಾರೆ.
ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಇವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು ಎಂದು ಬಿತ್ತರಿಸಲಾಗುತ್ತಿದ್ದು, ಇವರು ಹಿಂದೂ ಧರ್ಮಕ್ಕೆ ಸೇರಿದವರೆಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.