ಕೊಟ್ಟಿಗೆಹಾರ : ಮೆಸ್ಕಾಂ ಲಾರಿ- ಓಮಿನಿ ನಡುವೆ ಮುಖಾಮುಖಿ ಡಿಕ್ಕಿ ಯಾಗಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಬಣಕಲ್-ಕೊಟ್ಟಿಗೆಗಾರ ಮಧ್ಯೆ ಸರಣಿ ಅಪಘಾತ ಸಂಭವಿಸಿದೆ.
ಮೆಸ್ಕಾಂ ಲಾರಿ, ಓಮ್ನಿ, ಆಲ್ಟೋ ನಡುವೆ ಡಿಕ್ಕಿ ಆಗಿರುವುದಾಗಿ ವರದಿಯಾಗಿದೆ.
ಧರ್ಮಸ್ಥಳದಿಂದ ಚಿತ್ರದುರ್ಗಕ್ಕೆ ಹೋಗುತ್ತಿದ್ದ ಓಮಿನಿ - ಹಾಗೂ ಮೂಡಿಗೆರೆಯಿಂದ ಕೊಟ್ಟಿಗೆಹಾರಕ್ಕೆ ಮೆಸ್ಕಾಂ ಲಾರಿ ಹೋಗುತ್ತಿತ್ತು ಎನ್ನಲಾಗಿದೆ. ಮೂರು ಜನ ಸ್ಥಳದಲ್ಲೇ ಸಾವು, ಓರ್ವ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಸಾವನ್ನಪ್ಪಿರುವುದಾಗಿ ವರದಿಗಳು ತಿಳಿಸಿವೆ. ಹೆಚ್ಚಿನ ವಿವರಗಳು ಬರಬೇಕಿದೆ.