ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಭಾರೀ ಅವಾಂತರವಾಗಿವೆ.ಯಾದಗಿರಿ ನಗರ ಹಾಗೂ ದೇವಾಪುರ ಗ್ರಾಮದಲ್ಲಿ ಮಳೆ ಅವಾಂತರ ಘಟನೆಗಳು ಜರುಗಿದ್ದಾವೆ.ಯಾದಗಿರಿ ನಗರದಲ್ಲಿ ನೂರಾರು ಬೃಹತ್ ಮರಗಳು ಧರೆಗುರುಳಿವೆ.ಅದೆ ರೀತಿಯ 35 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿವೆ.ಮಾತಾಮಾಣೀಕೇಶ್ವರಿ ನಗರದಲ್ಲಿ ಮನೆಯ ಪತ್ರಾಸ್ ಗಳು ಹಾರಿ ಹೋಗಿವೆ.
ಭಾರಿ ಮಳೆಯಿಂದ ಪಿಡಬ್ಲೂಡಿ ಕಚೇರಿ ಆವರಣೊಳಗೆ ನೀರು ನುಗ್ಗಿದ್ದಾವೆ.ವಿದ್ಯುತ್ ಕಂಬಗಳು ವಿದ್ಯುತ್ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತ ಮಾಡಿದ ಹಿನ್ನಲೆ ಯಾದಗಿರಿ ನಗರದಲ್ಲಿ ಕತ್ತಲು ಆವರಿಸಿದೆ.ಘಟನಾ ಸ್ಥಳಕ್ಕೆ ಯಾದಗಿರಿ ನಗರಸಭೆ ಪೌರಾಯುಕ್ತ ಲಕ್ಷ್ಮಿಕಾಂತ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಅದೆ ರೀತಿ ಜೇಸ್ಕಾಂ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರ ಕಚೇರಿ ಆವರಣ ಹಾಗೂ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಅವರ ನಿವಾಸದ ಮುಂದೆ ಮರಗಳು ಧರೆಗುರುಳಿವೆ.ಅದೆ ರೀತಿಯ ಸುರಪುರ ತಾಲೂಕಿನ ದೇವಾಪುರ ಗ್ರಾಮದಲ್ಲಿ 20 ಕ್ಕೂ ಹೆಚ್ಚು ಮನೆಗಳ ಪತ್ರಾಸ್ ಹಾರಿ ಹೋಗಿವೆ.