ಕತ್ತೆಯ ಮುಂಗಾಲುಗಳನ್ನು ಕಟ್ಟಿ ಮೀಡಿಯನ್ ನಲ್ಲಿ ಬೆಳದ ಹುಲ್ಲು ಮೇಯಲು ಬಿಟ್ಟವನಾರು?

VK NEWS
By -
0

 ಅರಮನೆ ರಸ್ತೆಯಲ್ಲಿ ಕತ್ತೆಯ ಮುಂಗಾಲುಗಳನ್ನು ಕಟ್ಟಿ ಮೀಡಿಯನ್ ನಲ್ಲಿ ಬೆಳದ ಹುಲ್ಲು ಮೇಯಲು ಬಿಟ್ಟವನಾರು? 

ಈ ಅರಮನೆ ರಸ್ತೆಯಂತೂ ಹುಚ್ಚು ಹೊಳೆಯಂತೆ! ಇದ್ದಕ್ಕಿದ್ದ ಹಾಗೆ ವಾಹನಗಳ ದಟ್ಟಣೆ ಕಾಣಬರುತ್ತಿರುವ ಹಾಗೆಯೇ, ಏಕಾಏಕಿ ಖಾಲಿ ಖಾಲಿ ಎನಿಸುವ ಹಾಗೆ ವಾಹನಗಳ ಓಡಾಟ ತೀರಾ ವಿರಳವೇನೋ ಈ ರಸ್ತೆಯಲ್ಲಿ ಎಂಬಂತೆ ಸನ್ನಿವೇಶ ಬದಲಿಸಿಕೊಳ್ಳುವ ರಸ್ತೆ ಇದು! 


ಇಂತಹ ರಸ್ತೆಯಲ್ಲಿ ಮೂಕ ಪ್ರಾಣಿಯ ಹೊಟ್ಟೆಗೆ ಮೇವು ಹಾಕಲಾರದೇ ಅದರ ಮುಂಗಾಲುಗಳಿಗೆ (ಎರಡೂ ಕಾಲುಗಳನ್ನು ಒಗ್ಗೂಡಿಸಿ) ಹಗ್ಗವನ್ನು  ಬಿಗಿದು, ಅದು ಮುಂಗಾಲುಗಳೆರಡನ್ನೂ ಒಮ್ಮೆಲೆಗೆ ಎತ್ತಿ ಇಡುತ್ತಾ ಪ್ರಾಯಾಸದಿಂದ ಮುಂದಕ್ಕೆ ಸಾಗುವಂತೆ ಮಾಡಿರುವ ಆ ಕಠಿಣಾತ್ಮನದು ಎಂತಹ ವಿಕೃತ ಮನೋಸ್ಥಿತಿ ಹೊಂದಿರುವ ಮನುಷ್ಯ ಎಂಬುದನ್ನು ನೆನೆಸಿಕೊಂಡರೆ.... 

ಆ ದೈನ್ಯ ಮೂಕ ಪ್ರಾಣಿಗೆ ಹಿಂಸೆ ಕೊಟ್ಟ ಆ ದುರುಳನ ಮೇಲೆ ಸಂಬಂಧಪಟ್ಟ ಪ್ರಾಣಿಗಳ ಹಿತರಕ್ಷಣ ಇಲಾಖೆ ಕಠಿಣ ಕ್ರಮ ಜರುಗಿಸಿ, ಪ್ರಾಣಿಗಳನ್ನು ಹಿಂಸಿಸುವವರಿಗೆ ಒಂದು ಎಚ್ಚರಿಕೆಯ ಸಂದೇಶ ನೀಡಬೇಕಿದೆ, ಅಲ್ಲವೇ???

Post a Comment

0Comments

Post a Comment (0)