ಹಾಸನ: ಕಾಂಗ್ರೆಸ್ ಅಭ್ಯರ್ಥಿ ಹಿರಿಯ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಜಿ ಪುಟ್ಟಸ್ವಾಮಿಗೌಡ ಮತ್ತು ಶ್ರೀಕಂಠಯ್ಯನವರ ಅಭಿವೃದ್ಧಿ ಕಾರ್ಯ ಸ್ಮರಿಸದ ಬಗ್ಗೆ, ಜಿಲ್ಲಾ ಕಾಂಗ್ರೆಸ್ ಮುಖಂಡರಿಂದಲೇ ಆಕ್ಷೇಪ

VK NEWS
By -
0

 ಬೆಂಗಳೂರು : ಚುನಾವಣೆ ಕಾವು ಈಗಾಗಲೇ ಹಲವು ರೂಪಗಳನ್ನು ತಾಳುತ್ತಿದೆ. ಪ್ರಥಮ ಹಂತ ಚುನಾವಣೆ ಈಗಾಗಲೇ ಮುಗಿದಿದ್ದು, ದ್ವಿತೀಯ ಹಂತದ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇತ್ತ ಕರ್ನಾಟಕದಲ್ಲಿ ಪ್ರಥಮ ಹಂತದ ಮತದಾನಕ್ಕೆ ದಿನಗಳು ಹತ್ತಿರ ಬಂದಿದೆ. ಅಭ್ಯರ್ಥಿಗಳು ಈಗಾಗಲೇ ಹಲವು ರೀತಿಯ ಆಶ್ವಾಸನೆಗಳನ್ನು ನಿಡುತ್ತಾ ಬಂದಿರುತ್ತಾರೆ. ಎದುರಾಳಿಗಳು ಅದಕ್ಕೆ ತಕ್ಕಂತೆ ಆರೋಪ ಪ್ರತ್ಯಾರೋಪ ನಡೆಸುತ್ತಿದ್ದಾರೆ. 

ಇಡೀ ರಾಜ್ಯದ ಜನತೆಗೆ ಪ್ರಮುಖವಾಗಿ ಮಂಡ್ಯ ಮತ್ತು ಹಾಸನದ ಚುನಾವಣಾ ಕಣದ ಫಲಿತಾಂಶದ ಮೇಲೆ ಕಣ್ಣಿಟ್ಟಿದ್ದಾರೆ. ಈ ನಡುವೆ, ಪುಟ್ಟಸ್ವಾಮಿಗೌಡರ ಮೊಮ್ಮಗ ಚುನಾವಣಾ ಕಣದಲ್ಲಿದ್ದು, ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಸ್ಪರ್ಧಿಸಿರುತ್ತಾರೆ. 

ಅವರ ಭಾಷಣದ ಕೆಲವು ತುಣುಕುಗಳನ್ನು ಸ್ವತಃ ಪುಟ್ಟಸ್ವಾಮಿಗೌಡರ ಮಗಳೇ ಟೀಕಿಸಿರುವುದು ಕಂಡುಬ0ದಿದೆ. ಪುಟ್ಟಸ್ವಾಮಿಗೌಡರ ಮೊಮ್ಮಗನಾಗಿ ಎಲ್ಲಿಯೂ ಪುಟ್ಟಸ್ವಾಮಿಗೌಡರ ಅಭಿವೃದ್ಧಿ ಕಾರ್ಯಗಳ ಬಗ್ಗೆಯಾಗಲೀ ಮತ್ತು ಅವರ ಜನ ಆಧಾರಿತ ಕೆಲಸಗಳನ್ನು ಕೇಳಿಕೊಳ್ಲದೇ ಜನತೆಗೆ ಯಾವ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆಂದು ತಿಳಿಸದೆಯೇ, ಕೇವಲ, ನಾನು ಅನಾಥ, ತಂದೆ ಇಲ್ಲದ ತಬ್ಬಲಿ ಈ ರೀತಿಯ ಮತಯಾಚನೆ ಮಾಡುತ್ತಿರುವುದನ್ನು ಸ್ವತಹ ಪುಟ್ಟಸ್ವಾಮಿಗೌಡರ ಮಗಳೇ ಖಂಡಿಸಿರುತ್ತಾರೆ. 

ಪುಟ್ಟಸ್ವಾಮಿಗೌಡರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೇಳಿಕೊಂಡು ಮತ ಯಾಚಿಸಿದರೆ ನಾನೇ ಪುಟ್ಟಸ್ವಾಮಿಗೌಡರ ಮತ್ತು ಶ್ರೀಕಂಠಯ್ಯನವರು ಮಾಡಿರುವ ಜನಸೇವೆ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೇಳಿಕೊಂಡು ಮತ ಯಾಚಿಸಿದರೆ ಒಳ್ಳೆಯದಲ್ಲವೇ...? 

ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತ ಯಾಚನೆ ಮಾಡಿದಲ್ಲಿ ನನ್ನ ಸಂಪೂರ್ಣ ಸಹಕಾರ ಇದೆ ಆದರೆ, ನಮ್ಮ ತಂದೆಯವರ ಪ್ರಖ್ಯಾತಿಯ ಕೆಲಸಕ್ಕೆ ಮಸಿ ಬಳಿಯುವ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ನನ್ನ ವಿಷಾದವಿದೆ ಎಂದು ಫೇಸ್‌ಬುಕ್‌ನಲ್ಲಿ / ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಹೊಳೆ ನರಸಿಪುರದ ಜಿ.ಪುಟ್ಟಸ್ವಾಮಿಗೌಡರ ಮಗಳಾದ ಪಿ ರಾಜೇಶ್ವರಿ ಅವರು ತಮ್ಮ ಸ್ಟೇಟಸ್ ನಲ್ಲಿ ಹಾಕಿಕೊಂಡಿರುವ ಒಂದು ಮನವಿ ಮಾಡಿರುತ್ತಾರೆ. ಅದರ ಪ್ರತಿಯನ್ನು ಲಗತ್ತಿಸಲಾಗಿದೆ.





Tags:

Post a Comment

0Comments

Post a Comment (0)