ಶಾಂತಿಯುತ ಮತದಾನಕ್ಕೆ ಸೂಕ್ತ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ -ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್

VK NEWS
By -
0

 *ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ:ಮತದಾನ ಜಾಗೃತಿ ಮೂಡಿಸಲು ಕಾಲ್ನಡಿಗೆ ಜಾಥಾ 

ಬೆಂಗಳೂರು: ಕಬ್ಬನ್ ಪಾರ್ಕ್,ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ  ಸಾರ್ವಜನಿಕರಿಗೆ ಮತದಾನ ಜಾಗೃತಿ ಮೂಡಿಸಲು ಕಾಲ್ನಡಿಗೆ ಜಾಥ ಕಾರ್ಯಕ್ರಮ.  

ಮತದಾನ ಜಾಗೃತಿ ಜಾಥಾವನ್ನು  ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ್, ಮತ್ತು ಅಪರ ಜಿಲ್ಲಾ ಚುನಾವಣಾಧಿಕಾರಿ, ಉತ್ತರ ಲೋಕಸಭಾ ಕ್ಷೇತ್ರ ಶ್ರೀಮತಿ ಸ್ನೇಹಾಲ್, ಬೆಂಗಳೂರು ಕೇಂದ್ರ ಚುನಾವಣಾಧಿಕಾರಿ ಡಾ||ಹರೀಶ್ ಕೆ. ಮತ್ತು ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಅಧಿಕಾರಿ ವರ್ಗದವರು ಮತದಾನ ಜಾಗೃತಿ ಜಾಥಗೆ ಚಾಲನೆ ನೀಡಿದರು.



*ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ್  ಮಾತನಾಡಿ, ಸಾರ್ವಜನಕರಿಗೆ ಮತದಾನದ ಹಕ್ಕನ್ನು ಕುರಿತು ಅರಿವು ಮೂಡಿಸಲು ಮತದಾನ ಜಾಗೃತಿ ಜಾಥ ಸಹಕಾರಿಯಾಗಿದೆ ಎಂದರು

ಬೆಂಗಳೂರುನಗರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದೆ, ಕಾರಣ ಹಲವಾರು ಇದೆ.

ಮತದಾನ ಮಾಡಲು ಏನೇ ಕಾರಣವಿದ್ದರು, ಮತಗಟ್ಟೆಗೆ ಬಂದು  ಕಡ್ಡಾಯವಾಗಿ ಮತದಾನವನ್ನು ಚಲಾಯಿಸಿ. ಈ ಬಾರಿ ಇತಿಹಾಸ ನಿರ್ಮಾಣದತ್ತಮತದಾನವಾಗಬೇಕು.

ಬೆಂಗಳೂರು ನಗರದಲ್ಲಿ ಮತದಾರರು ಮತಗಟ್ಟೆಯಲ್ಲಿ ಮತದಾನ ಮಾಡಲು ಸೂಕ್ತ ಬಂದೋಬಸ್ತು, ಸುರಕ್ಷತೆಯನ್ನು ಪೊಲೀಸ್ ಇಲಾಖೆ ವ್ಯವಸ್ಥೆ ಮಾಡಿದೆ ಎಂದು ಹೇಳಿದರು.

*ಶ್ರೀಮತಿ ಸ್ನೇಹಾಲ್* ಎಲ್ಲರ ಜೀವನ ಮುಟ್ಟುವಂತಹ ಕೆಲಸ ಬಿಬಿಎಂಪಿ ಮಾಡುತ್ತಿದೆ.

ಏಪ್ರಿಲ್ 26ರ ಮಹತ್ವದ ದಿನ.

ಪ್ರಜಾಪ್ರಭುತ್ವದ ಡೊಡ್ಡ ಹಬ್ಬ ಅಚರಿಸಲಾಗುತ್ತಿದೆ, ಸಾರ್ವಜನಿಕರ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಿ.

ಐದು ವರ್ಷದ ಭವಿಷ್ಯಕ್ಕಾಗಿ ಮತದಾನ ಮಾಡಿ ಎಂದು ಹೇಳಿದರು.



ಮತದಾರ ಜಾಗೃತಿ ಕಾಲ್ನಿಡಿಗೆ ಜಾಥ ಕಾರ್ಯಕ್ರಮ ಕಬ್ಬನ್ ಪಾರ್ಕ್ ಮುಖ್ಯ ದ್ವಾರದಿಂದ ಅವರಣದಿಂದ ಆರಂಭವಾಗಿ ಕಸ್ತೂರಬಾ ರಸ್ತೆ ,ಕಂಠೀರವ ಒಳಾಂಗಣ ರಸ್ತೆ ಮೂಲಕ ರಾಜ್ ರಾಮ್ ಮೋಹನ್ ರಾಯ್ ರಸ್ತೆಯಿಂದ ಬಿಬಿಎಂಪಿ ಸಹಕಾರ ಸಂಘದ ಬಳಿ ಮುಕ್ತಾಯವಾಯಿತು.

ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಎ.ಜಿ.ಬಾಬಣ್ಣ, ಮಂಜುನಾಥ್ (ಎಮ್.ಎಲ್.ಎ.)ಹೆಚ್.ಬಿ.ಹರೀಶ್ ಕೆ.ನರಸಿಂಹ, , ರೇಣುಕಾಂಬ, ಕೆ.ಮಂಜೇಗೌಡ, ಡಾ.ಶೋಭಾ,ಮಂಜುನಾಥ್(ಮಾರ್ಕಟ್), ಸಂತೋಷ್ ಕುಮಾರ್ ನಾಯ್ಕ್ ಉಪಸ್ಥಿತರಿದ್ದರು.

Post a Comment

0Comments

Post a Comment (0)