ಬೆಂಗಳೂರು :- ಅಕ್ಷಯ ವಿಪ್ರ ಮಹಾಸಭಾದ ವತಿಯಿಂದ ವಿದ್ಯಾವಾರಿಧಿ ಡಾ, ಡಿ. ಪಿ. ಅನಂತ್ ಅವರಿಗೆ ಅಭಿನಂದಿಸಿ ಸನ್ಮಾನಿಸಲಾಯಿತು .
ಸಂಘದ ಕಚೇರಿಯಲ್ಲಿ ನಡೆದ ಒಂಬತ್ತನೇ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಅನಂತ್ ಅವರನ್ನು ಸಂಘದ ಹಿರಿಯ ಸದಸ್ಯರಾದ ಎನ್ ಕೆ ರಾಮಚಂದ್ರ ರಾವ್, ಡಾ, ರಘುನಾಥ ರಾವ್, ಅಧ್ಯಕ್ಷ ರಾಘವೇಂದ್ರ ರಾವ್ ಪ್ರಧಾನ ಕಾರ್ಯದರ್ಶಿ ಎನ್. ಎಸ್.ಸುಧೀಂದ್ರ ರಾವ್ ಅವರು ಶಾಲೂ ಹೊದಿಸಿ ಮೈಸೂರು ಪೇಟ ತೊಡಿಸಿ ಫಲ ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು,
ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯವು ಅನಂತ್ ಅವರು ಟಿಟಿಡಿ ಯ ಬಗ್ಗೆ ಮಂಡಿಸಿದ್ದ ಪ್ರಭಂದಕ್ಕೆ ವಿದ್ಯಾವಾರಿಧಿ (ಡಾಕ್ಟಾರೆಟ್ /ಪದವಿ)ಪ್ರದಾನ ಮಾಡಿದ್ದು ಅದಕ್ಕಾಗಿ ಈ ಸನ್ಮಾನವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಡಾ, ಕಿರಣ್ ಸುಂದರ ಮೂರ್ತಿ, ಜೈಪ್ರಕಾಶ್, ಖಜಾಂಚಿ ರಾಘವೇಂದ್ರ, ಸಹ ಕಾರ್ಯದರ್ಶಿ ಲಕ್ಷ್ಮೀಶ, ಪ್ರಾಣೇಶ್ ರಾವ್, ಮಹೇಶ್ ಸೇರಿದಂತೆ ಕಾರ್ಯಕಾರಿ ಸಮಿತಿಯ ಸದಸ್ಯರು ಹಿರಿಯ ಸದಸ್ಯರು ಮಹಿಳಾ ಸದಸ್ಯರು ಸಂಘದ ಪದಾಧಿಕಾರಿಗಳು ಮತ್ತು ವಿಶೇಷ ಆಹ್ವಾನಿತರಾದ ಅಖಿಲ ಕರ್ನಾಟಕ ಮಾಧ್ವ ಮಹಾಸಭಾದ ಮಹಿಳಾ ಅಧ್ಯಕ್ಷೆ ಎನ್, ಮಾಲಿನಿ. ಉಪಾಧ್ಯಕ್ಷ ಅಶ್ವತ್ ನಾರಾಯಣ, ಖಜಾಂಚಿ ರಾಮಚಂದ್ರ ಸೇರಿದಂತೆ ಮತ್ತಿತರರು ಹಾಜರಿದ್ದರು.