ವಾರ್ತಾಜಾಲ,ಶಿಡ್ಲಘಟ್ಟ
ಮಾಜಿ ಮುಖ್ಯಮಂತ್ರಿ ಕುಮಾರಣ್ಣ ಮಂಡ್ಯದಲ್ಲಿ ಹೆಚ್ಚಿನ ಮತಗಳಿಂದ ಗೆದ್ದು ಕೇಂದ್ರದಲ್ಲಿ ಮಂತ್ರಿಯಾಗುತ್ತಾರೆ ಅವರ ಕೈಕಾಲು ಹಿಡಿದು ಕೇಂದ್ರದಿಂದ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ನಾನು ಏನಾದರೂ ಅಭಿವೃದ್ಧಿ ಮಾಡಿಲ್ಲ ಅಂದರೆ ಮುಂದೆ ನಾನು ರಾಜಕಾರಣಕ್ಕೆ ಬರುವುದಿಲ್ಲ ಎಂದು ಶಾಸಕ ಬಿಎನ್ ರವಿಕುಮಾರ್ ಸವಾಲ್ ಎಸೆದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಏನಿಗದೆಲೆ ಹಾಗೂ ದಿಬ್ಬೂರಹಳ್ಳಿಯಲ್ಲಿ ಮಾರುತಿ ಚಿತ್ರಮಂದಿರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ದೇಶಕ್ಕ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೇಸ್ ಪಕ್ಷ 60 ವರ್ಷ ಸಂಸದರು ಆಡಳಿತ ನಡೆಸಿದ್ದಾರೆ. ಎರಡುಬಾರಿಮಾತ್ರ ಇತರೆ ಪಕ್ಷಗಳು ಗೆದ್ದಿವೆ. ಕಾಂಗ್ರೆಸ್ ಸರ್ಕಾರದ ಸಾಧನೆ ಅಂದರೆ ಬಯಲು ಸೀಮೆಯ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಒಂದು ನದಿ ನೀರು ತರದೇ ಇರುವುದೇ ದೊಡ್ಡ ಸಾಧನೆ. ಕೋಲಾರ ಲೋಕಸಭಾ ಕ್ಷೇತ್ರಕ್ಕೆ ನೀರಾವರಿ ಯೋಜನೆಯನ್ನು ತರಬೇಕಾದರೆ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಅವರನ್ನು ಗೆಲ್ಲಿಸಿ ಅವರನ್ನು ಲೋಕಸಭೆಗೆ ಕಳಿಸಿದಾಗ ಈ ಕೆಲಸ ಆಗುತ್ತದೆ. ಈ ಕ್ಷೆರತ್ರದಲ್ಲಿ 16 ವಿಧಾನಸಭಾ ಚುನಾವಣೆ ನಡೆದಿದೆ. 11 ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಜನ ಅಧಿಕಾರ ಕೊಟ್ಟಿದ್ದಾರೆ. ಚಿಲಕಲನೇರ್ಪು ಹೋಬಳಿಯಲ್ಲಿ ಸುಮಾರು 72 ಕಿ.ಮೀ ರಸ್ತೆಗಳು ತುಂಬಾ ಹದಗೆಟ್ಟು ಹೋಗಿದೆ. ನಾನು ಶತ ಪ್ರಯತ್ನ ಮಾಡಿದರು ಸಹ. 2 ಕಿ.ಮೀ ರಸ್ತೆ ಹಾಕಿಸುವುದಕ್ಕೆ ಆಗುತ್ತಿಲ್ಲ. ನಾವೇನಾದರೂ ಹೋಗಿ ಅನುದಾನವನ್ನು ಕೇಳಿದರೆ ಕಾಂಗ್ರೆಸ್ ಗೆ ಸೇರ್ಪಡೆಯಾಗಿ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಕೋಲಾರ ಲೋಕಸಭಾ ಕ್ಷೇತ್ರದ ಎನ್.ಡಿ.ಎ ಮೈತ್ರಿ ಅಭ್ಯರ್ಥಿಯಾಗಿ ಮಲ್ಲೇಶ್ ಬಾಬು ಅವರನ್ನ ಬೂತ್ ಮಟ್ಟದಲ್ಲಿ ಹೆಚ್ಚು ಮತಗಳು ಕೊಡಬೇಕು. ಮಲ್ಲೇಶ್ ಬಾಬು ಅವರು ಅತ್ಯಧಿಕ ಮತಗಳಿಂದ ಗೆಲ್ಲಬೇಕು ರಾಜ್ಯದಲ್ಲಿ ನನಗೂ ಗೌರವ ಬರುತ್ತದೆ ಎಂದು ತಿಳಿಸಿದರು.
ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಮಾತನಾಡಿ, ರಾಜಕೀಯವಾಗಿ ನಾನು ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಕೆಲವೇ ಮತಗಳ ಅಂತರದಿಂದ ಸೋತಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಧೈರ್ಯ ನನಗೆ ಇರಲಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರು ಹಾಗೂ ಕ್ಷೇತ್ರದ ಶಾಸಕ ಬಿ.ಎನ್ ರವಿಕುಮಾರ್ ಹಾಗೂ ಬಿಜೆಪಿ ಮುಖಂಡರ ಸಹಕಾರದಿಂದ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ನಿಮ್ಮ ಸೇವೆ ಮಾಡಲು ಮೋದಿಯವರ ಕೈ ಬಲಪಡಿಸಲು ಈ ಬಾರಿ ನನಗೆ ಅವಕಾಶ ಕಲ್ಪಿಸಿಕೊಡಿ ಎಂದು ಮತಯಾಚಿಸಿದರು.
ಸೀಕಲ್ ರಾಮಚಂದ್ರ ಗೌಡ ಮಾತನಾಡಿ, ದೇಶದಲ್ಲೇ ಮತ್ತೊಮ್ಮೆ ಮೋದಿ ಎಂದು ಭಾರತದ ಜನತೆ ಹೇಳುತ್ತಿದ್ದಾರೆ. ಮತ ಹಾಕುವಾಗ ಯೋಚಿಸಿ ಮತ ಹಾಕದಿದ್ದರೆ ಕಳೆದ ಬಾರಿ ಮತಗಳಿಗೋಸ್ಕರ ಕಾಂಗ್ರೇಸ್ ನವರು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಇಬ್ಬರೂ ಎರಡು ಮೂರು ವರ್ಷಗಳು ಕಾರ್ಯಗಾರ ಮಾಡಿ ಮಕ್ಕಲ್ ಟೋಪಿ ಹಾಕಿದ್ದಾರೆ. ಮತ್ತೆ ಗ್ಯಾರಂಟಿಗಳ ಹೆಸರಿನಲ್ಲಿ ಮಕ್ಮಲ್ ಟೋಪಿ ಹಾಕುತ್ತಿದ್ದಾರೆ ಎಂದು ಕಾಂಗ್ರೇಸ್ ಪಕ್ಷಕ್ಕೆ ಚಾಟಿ ಬೀಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಗೋವಿಂದರಾಜು,ಬಂಕ್ ಮುನಿಯಪ್ಪ,ಡಿ.ಬಿ ವೆಂಕಟೇಶ್,ತಾದೂರು ರಘು, ಸೀಕಲ್ ಆನಂದ್ ಗೌಡ, ಸುರೇಂದ್ರಗೌಡ, ಕನಕಪ್ರಸಾದ್, ಮೇಲೂರು ಉಮೇಶ್, ಲಕ್ಷ್ಮೀನಾರಾಯಣರೆಡ್ಡಿ, ನಂದನವನ ಶ್ರೀರಾಮರೆಡ್ಡಿ, ದಿಬ್ಬೂರಹಳ್ಳಿ ರಾಜಣ್ಣ, ಡಾ.ಧನಂಜಯರೆಡ್ಡಿ, ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.