ಬೆಂಗಳೂರು, ಏಪ್ರಿಲ್ 13 (ಕರ್ನಾಟಕ ವಾರ್ತೆ):
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 15ನೇ ಏಪ್ರಿಲ್ 2024, 4ನೇ ಮೇ 2024, 12 ನೇ ಮೇ 2024 ಮತ್ತು 18ನೇ ಮೇ 2024 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್-2024 ರ ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಾರಿಗೆ ಸೌಲಭ್ಯ ಕಲ್ಪಿಸಿದೆ.
ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಮಾರ್ಗಸಂಖ್ಯೆ ಎಸ್.ಬಿ.ಎಸ್-1 ರಿಂದ ಕಾಡಗೋಡಿ ಬಸ್ ನಿಲ್ದಾಣ (ಹೆಚ್.ಎ.ಎಲ್ ರಸ್ತೆ), ಎಸ್.ಬಿ.ಎಸ್-13 ಮಾರ್ಗದಿಂದ ಕಾಡಗೋಡಿ ಬಸ್ ನಿಲ್ದಾಣ (ಹೂಡಿ ರಸ್ತೆ), ಜಿ-2 ಮಾರ್ಗದಿಂದ ಸರ್ಜಾಪುರ, ಜಿ-3 ಮಾರ್ಗದಿಂದ ಎಲೆಕ್ಟ್ರಾನಿಕ ಸಿಟಿ (ಹೊಸೂರು ರಸ್ತೆ). ಜಿ-4 ಮಾರ್ಗದಿಂದ ಬನ್ನೇರುಘಟ್ಟ ಮೃಗಾಲಯ, ಜಿ-6 ಮಾರ್ಗದಿಂದ ಕೆಂಗೇರಿ ಕೆ.ಹೆಚ್.ಬಿ ಕ್ವಾಟ್ರಸ್ (ಎಂ.ಸಿ.ಟಿ.ಸಿ ನಾಯಂಡಹಳ್ಳಿ), ಜಿ-7 ಮಾರ್ಗದಿಂದ ಜನಪ್ರಿಯ ಟೌನ್‍ಷಿಪ್ (ಮಾಗಡಿ ರಸ್ತೆ), ಜಿ-8 ಮಾರ್ಗದಿಂದ ನೆಲಮಂಗಲ, ಜಿ-9 ಮಾರ್ಗದಿಂದ ಯಲಯಂಕ 5ನೇ ಹಂತ, ಜಿ-10 ಮಾರ್ಗದಿಂದ ಆರ್.ಕೆ. ಹೆಗಡೆ ನಗರ (ನಾಗವಾರ, ಟ್ಯಾನರಿ ರಸ್ತೆ), ಜಿ-11 ಮಾರ್ಗದಿಂದ ಬಾಗಲೂರು (ಹೆಣ್ಣೂರು ರಸ್ತೆ), ಕೆ.ಬಿ.ಎಸ್ 12 ಹೆಚ್.ಕೆ. ಮಾರ್ಗದಿಂದ ಹೊಸಕೋಟೆಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ