ಮಲ್ಲೇಶ್ವರಂ: ಜಿ.ಎಂ.ರಿಜಾಯ್ಸ್ ಮುಂಭಾಗದಲ್ಲಿ ಉತ್ತರ ಲೋಕಸಭಾ ಕ್ಷೇತ್ರದ ಪ್ರಚಾರ ವಾಹನಗಳ ಚಾಲನೆಯ ಉದ್ಘಾಟನೆ ಸಮಾರಂಭ.
ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಮಾರಿ ಶೋಭಾ ಕರಂದ್ಲಾಜೆರವರು, ಮಾಜಿ ಉಪಮಹಾಪೌರರು, ಜಿಲ್ಲಾಧ್ಯಕ್ಷರಾದ ಎಸ್.ಹರೀಶ್, ವಿಧಾನಪರಿಷತ್ ಸದಸ್ಯರಾದ ಗೋಪಿನಾಥ್ ರೆಡ್ಡಿ, ವಕ್ತಾರೆ, ಚಲನಚಿತ್ರ ನಟಿ ಮಾಳವಿಕ ಅವಿನಾಶ್, ಬಿಜೆಪಿ ಮುಖಂಡ ಸಚ್ಚಿನಂದಮೂರ್ತಿರವರು ಬಿಜೆಪಿ ಬಾವುಟ ನಿಶಾನೆ ತೋರುವ ಮೂಲಕ ಪ್ರಚಾರ ವಾಹನಗಳಿಗೆ ಚಾಲನೆ ನೀಡಿದರು.
ಶೋಭ ಕರಂದ್ಲಾಜೆರವರು ಮಾತನಾಡಿ ಪ್ರಧಾನಿ ನರೇಂದ್ರಮೋದಿರವರ ಪಾರದರ್ಶಕ ಆಡಳಿತದಿಂದ ವಿಶ್ವದ ಬಲಿಷ್ಠ ರಾಷ್ಟವಾಗಿ ದೇಶ ನಿಂತಿದೆ. ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಎಲ್ಲ ಜಾತಿ, ಧರ್ಮದವರು ಜಿಜೆಪಿ ಜೊತೆಯಲ್ಲಿ ಇದ್ದಾರೆ.
ಯಶವಂತಪುರ, ದಾಸರಹಳ್ಳಿ ಮಹಾಲಕ್ಷಿ÷್ಮಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯವಿದೆ, ಯಶವಂತಪುರ ವಿಧಾನಸಭಾ ಚುನಾವಣೆ ಜೆಡಿಎಸ್ ಪಕ್ಷ 1ಲಕ್ಷ 56ಮತಗಳು ಪಡೆದಿದೆ.
ಪ್ರಧಾನಿ ನರೇಂದ್ರಮೋದಿರವರ ನೇತೃತ್ವ ಮತ್ತು ಪ್ರಧಾನಿ ಹೆಚ್.ಡಿ.ದೇವೇಗೌಡರವರ ಮಾರ್ಗದರ್ಶನದಲ್ಲಿ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಸದೃಢವಾಗಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷರಾದ ಎಸ್.ಹರೀಶ್ ರವರು ಮಾತನಾಡಿ ಪ್ರಧಾನಿ ನರೇಂದ್ರಮೋದಿರವರ ಕೇಂದ್ರ ಸರ್ಕಾರದ ಜನಧನ್, ಮುದ್ರ ಯೋಜನೆ ಮತ್ತು ಪಿ.ಎಂ.ವಿಶ್ವಕರ್ಮ ಯೋಜನೆಗಳು ಆರ್ಥಿಕವಾಗಿ ಹಿಂದುಳಿದ ಕೊಟ್ಯಂತರ ಜನರಿಗೆ ಆರ್ಥಿಕ ಸಹಾಯ ಲಭಿಸಿದೆ.
ಆಯುಷ್ಮಾನ್ ಭಾರತ್, ಜನೌಷಧಿ ಕೇಂದ್ರದಿAದ ಆರೋಗ್ಯ ಕ್ಷೇತ್ರದಲ್ಲಿ ಮಹತ್ವಪೂರ್ಣ ಕ್ರಾಂತಿ ತಂದಿದೆ. 25ಕೋಟಿ ಜನರು ಬಡತನ ರೇಖೆಯಿಂದ ಮುಕ್ತರಾಗಿ ಆರ್ಥಿಕವಾಗಿ ಸಬಲರಾಗಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರ ಸಾಧನೆಗಳು ಪ್ರಧಾನಿ ನರೇಂದ್ರಮೋದಿರವರ ಗ್ಯಾರಂಟಿ ಯೋಜನೆಗಳು ದೇಶ ಜನರಿಗೆ ತಲುಪಿದೆ. ಈ ಬಾರಿ 400ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಿ, ಮೂರನೇಯ ಬಾರಿಗೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಚುಕ್ಕಾಣಿ ಹಿಡಿಯುವುದು ಖಚಿತ ಎಂದು ಹೇಳಿದರು.