ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಪ್ರಚಾರಕ್ಕೆ ಆಗಮಿಸಿದ್ದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ಮಾಡಿದ ವ್ಯಕ್ತಿಗಳ ಹಿನ್ನೆಲೆಯೇ ವಿಶೇಷವಾಗಿತ್ತು.
ವೃತ್ತಿಯಲ್ಲಿ ಮರಗೆಲಸಗಾರರಾಗಿರುವ ಶ್ರೀ ಲಕ್ಷ್ಮಣ ನಾಯ್ಕ ಡೊಂಬೆ ಅವರು ಅಯೋಧ್ಯಾ ಕರಸೇವಕರೂ ಹೌದು. ರಾಮಮಂದಿರ ನಿರ್ಮಾಣ ಆಗುವವರೆಗೂ ಕ್ಷೌರ ಮಾಡಿಸಲಾರೆ ಎಂದು ಪಣತೊಟ್ಟಿದ್ದರು, ಇವರಿಗೆ ಪ್ರಧಾನಿ ಮೋದಿ ನಮಿಸಿದರು.
ಶಿರಸಿಯ ಶ್ರೀಮತಿ ರಾಧಾ ಹರಿಜನ ಅವರು ನಿವೃತ್ತ ಪೌರ ಕಾರ್ಮಿಕರು. ಸ್ವಚ್ಛತೆಯಲ್ಲಿ ದೇವರನ್ನು ಕಾಣುವ ಇವರಿಗೆ ದೇಶ ಸೇವಕ ಮೋದಿ ನಮಿಸಿದರು.
ಕಾಡು ಹಣ್ಣುಗಳನ್ನು ತಂದು ಅಂಕೋಲಾದ ಬಸ್ ನಿಲ್ದಾಣದಲ್ಲಿ ಮಾರಾಟ ಮಾಡಿ ಜೀವನ ನಿರ್ವಹಿಸುವ ಶ್ರೀಮತಿ ಮೋಹಿನಿ ಗೌಡ ಹಾಲಕ್ಕಿ ಅವರು ತಮ್ಮ ಬಿಡುವಿನ ಸಮಯದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೇ ಬಸ್ ನಿಲ್ದಾಣವನ್ನು ಸ್ವಚ್ಚಗೊಳಿಸುತ್ತಾರೆ, ಇವರಿಗೆ ನಮ್ಮ ರಾಷ್ಟ್ರ ಸೇವಕ ವಂದಿಸಿದರು.
ಅಂಕೋಲಾದಲ್ಲಿ ಕ್ಷೌರದಂಗಡಿ ಹೊಂದಿರುವ ಶ್ರೀ ನಾಗೇಶ ಮಹಾಲೆ ಅವರು ಬಿಜೆಪಿಯ ಕಟ್ಟಾ ಬೆಂಬಲಿಗರು, ಮೋದಿಯವರ ಅಪ್ಪಟ ಅಭಿಮಾನಿ ಆಗಿದ್ದಾರೆ. ಯಾವುದೇ ಚುನಾವಣೆಯಲ್ಲಿ ಬಿಜೆಪಿ ಗೆದ್ದರೂ ಆ ದಿನವಿಡೀ ಉಚಿತ ಕ್ಷೌರ ಸೇವೆ ನೀಡುವ ಇವರಿಗೆ ಪ್ರಧಾನ ಸೇವಕ ಮೋದಿ ನಮಿಸಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೇಶದ ಪ್ರಧಾನಿ ನಮಿಸುತ್ತಾರೆ ಎಂದಾದರೆ ಅದೊಂದು ಭಾಗ್ಯವಲ್ಲದೆ ಮತ್ತೇನು...!