ಬೆಂಗಳೂರು : ಶ್ರೀ ರಾಮಾನುಜ ಗುರುಕುಲ, ಜ್ಯೋತಿಷ್ಯ ಸಾಮುದ್ರಿಕಾ ಸಂಶೋಧನಾ ಕೇಮದ್ರ, ನಮ. 35, 3ನೇ ಅಡ್ಡ ರಸ್ತೆ, ಶ್ರೀ ವೇಣುಗೊಪಾಲಸ್ವಾಮಿ ದೇವಸ್ಥಾನ ಸಮೀಪ, ದ್ವಾರಕಾನಗರ, ಬನಶಂಕರಿ 3ನೇಹಂತ., ಬೆಂ -85. ಇವರ ವತಿಯಿಂದ ಇದೇ ದಿನಾಂಕ : 1-5-2024ರ ಬುಧವಾರದಂದು ಕಾರ್ಮಿಕ ದಿನಾಚರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಮಹನೀಯರುಗಳಿಗೆ ಸನ್ಮಾನ ಸಮಾರಂಭ ಹಮ್ಮಿಕೊಂಡಿದೆ.
ಶ್ರೀ ರಾಮಾನುಜ ಗುರುಕುಲ ಹಾಗೂ ವಿಶ್ವವೇಧ ವಿದ್ಯಾಪೀಠ ವತಿಯಿಂದ ರಾಜ್ಯಮಟ್ಟದ ಜ್ಯೋತಿಷ್ಯ ಸಮ್ಮೇಳನವನ್ನು ಆಯೋಜಿಸಿದ್ದು, ಚಾಮರಾಜಪೇಟೆಯ ಉದಯಭಾನು ಕಲಾ ಸಂಘದಲ್ಲಿ ಕಾರ್ಯಕ್ರಮವನ್ನು ಜರುಗಲಿದೆ.
ವೇದಾಂಗ ಜ್ಯೋತಿಷ್ಯ ದಲ್ಲಿನ ಕೇಂದ್ರಗಳಾದ ಲಗ್ನ, ಚತುರ್ಥ, ಸಪ್ತಮ ಹಾಗೂ ದಶಮ ಭಾವಗಳನ್ನು ವಿಚಾರ ಸಂಕಿರಣವನ್ನು ಅವಧಾನ ರೂಪದಲ್ಲಿ ಚರ್ಚಿಸಲಾಗುವುದು ಎಂದು ಮುಖ್ಯ ಆಯೋಜಕರಾದ ಶ್ರೀ ಅರುಳಾಲನ್ ಹಾಗೂ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಡಾ. ಬದರೀನಾಥ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.