ಹಾಸನದ ಸಂಸದರಾದ ಪ್ರಜ್ವಲ್ ರೇವಣ್ಣನವರ ಪೆನ್ ಡ್ರೈವ್ ನ ಕರ್ಮಕಾಂಡದ ವಿರುದ್ಧ ನಾಳೆ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಆವರಣದಲ್ಲಿ ವಿಶ್ವವಿದ್ಯಾಲಯವನ್ನು ತರಗತಿಗಳನ್ನು ಬಹಿಷ್ಕರಿಸಿ ,ಪ್ರತಿಭಟನೆ ನಡೆಸಿದರು
ಎಂ.ಎಸ್.ಯು.ಐ ರಾಜ್ಯಾದ್ಯಕ್ಷರು ದೇವರಾಜ್ ಅರಸು ನಿಗಮದ ಅಧ್ಯಕ್ಷರಾದ ಕೀರ್ತಿಗಣೇಶ್ ರವರ ನೇತೃತ್ವದಲ್ಲಿ ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರು, ವಿದ್ಯಾರ್ಥಿ ಕಾಂಗ್ರೆಸ್ ಕಾರ್ಯಕರ್ತರು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಿಶ್ವದ ಅತಿಡೊಡ್ಡ ಲೈಂಗಿಕ ಹಗರಣ, ಅಧಿಕಾರ, ಹಣ, ದುರಂಹಕಾರವನ್ನು ಬತ್ತಳಿಕೆ ಮಾಡಿಕೊಂಡ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಜೀವನದಲ್ಲಿ ಚಲ್ಲಾಟವಾಡಿದ್ದಾನೆ.
ಪ್ರಜ್ವಲ್ ರೇವಣ್ಣನಾ ದೌರ್ಜನ್ಯಕ್ಕೆ ನರಳಿದ ಮಹಿಳೆಯರು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವುದರಿಂದ ಮಹಿಳೆಯರು ಗೌರವಯುತವಾಗಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ.
ಇಡಿ ರಾಜ್ಯದ ಗೌರವವನ್ನ ಮಣ್ಣು ಪಾಲು ಮಾಡುತ್ತಿದ್ದಾನೆ. ನೊಂದ ಮಹಿಳೆಯರಿಗೆ ಈಗಾಗಲೇ ಸರ್ಕಾರ ಸೂಕ್ತ ರಕ್ಷಣೆ ಮಾಡಿದೆ, ಅವರ ಜೀವನೋಪಾಯಕ್ಕೆ ಸೂಕ್ತ ಪರಿಹಾರ ನೀಡಬೇಕು.
ಬಿಜೆಪಿ ಕೇಂದ್ರ ಸರ್ಕಾರ ಸಹಕಾರದಿಂದ ವಿದೇಶಕ್ಕೆ ಹೋಗಿರುವ ಪ್ರಜ್ವಲ್ ರೇವಣ್ಣರವರನ್ನು ಬಂಧಿಸಿ ,ಉಗ್ರಶಿಕ್ಷೆ ನೀಡಬೇಕು ಎಂದು ಕೀರ್ತಿ ಗಣೇಶ್ ರವರು ಒತ್ತಾಯಿಸಿದರು.