ರಾಜಾಜಿನಗರ: ದಯಾನಂದನಗರ ವಾರ್ಡ್ ಮಾಜಿ ಬಿಬಿಎಂಪಿ ಸದಸ್ಯರಾದ ಎಂ.ಮುನಿರಾಜುರವರ ನಿವಾಸದಲ್ಲಿ ಶಬರಿಮಲೆ ಸ್ವಾಮಿ ಶರಣಂ ಅಯ್ಯಪ್ಪ ಸ್ವಾಮಿಯ ಜನ್ಮದಿನಾಚರಣೆ ಅಂಗವಾಗಿ ವಿಶೇಷ ಪೂಜೆ ಸಮಾರಂಭ.
ಅಯ್ಯಪ್ಪ ದೇವಸ್ಥಾನ 21ಮೆಟ್ಟಲುಗಳಿಂದ ಅಲಂಕೃತಾ ಮಾಡಿ, ದೀಪಗಳನ್ನು ಬೆಳಗಿಸಿ ಪುಷ್ಪ ಅಲಂಕಾರದಿಂದ ವೈಭವಯುತವಾಗಿ ಅಚರಿಸಲಾಯಿತು.
ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಎಂ.ಮುನಿರಾಜುರವರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
ನೂರಾರು ಅಯ್ಯಪ್ಪ ಭಕ್ತರುಗಳು ಆಗಮಿಸಿ, ಪ್ರಸಾದ ಸ್ವೀಕರಿಸಿದರು ಮತ್ತು ಅಯ್ಯಪ್ಪ ದೇವರ ಕುರಿತು ಭಕ್ತಿಗೀತೆಗಳನ್ನು ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸ್ವಾಮಿ ಶರಣಂ ಅಯ್ಯಪ್ಪ ಸಕಲ ಸಂಕಷ್ಟ ನಿವಾರಕ ಮತ್ತು ಬೇಡಿದ ವರ ಕೊಡುವ ಕಲ್ಪವೃಕ್ಷ . ಪ್ರತಿ ವರ್ಷ ನಮ್ಮ ಮನೆಯಲ್ಲಿ ಅಯ್ಯಪ್ಪ ಸ್ವಾಮಿಯ ವಿಶೇಷ ಪೂಜೆ ಆಯೋಜಿಸಿಕೊಂಡು ಬರಲಾಗುತ್ತಿದೆ. ಸರ್ವರಿಗೂ ಒಳಿತು ಮಾಡಲಿ , ಸರ್ವರಿಗೂ ಸಂಕಷ್ಟಗಳು ನಿವಾರಣೆಯಾಗಲಿ ಮತ್ತು ಸುಖ, ಶಾಂತಿ ನೆಮ್ಮದ್ದಿ ಲಭಿಸಲು ಅಯ್ಯಪ್ಪ ಸ್ವಾಮಿಯಲ್ಲಿ ಪ್ರಾರ್ಥಿಸಲಾಯಿತು.
ಮಹಾನಗರ ಪಾಲಿಕೆಮಾಜಿ ಸದಸ್ಯೆ ಶ್ರೀಮತಿ ಶಕೀಲ ಮುನಿರಾಜು, ಮಂಡಲ ಬಿಜೆಪಿ ಮಾಜಿ ಅಧ್ಯಕ್ಷರಾದ ರಾಘವೇಂದ್ರರಾವ್, ಬಿಜೆಪಿ ಮುಖಂಡರಾದ ಗಿರೀಶ್ ಗೌಡ, ಉಮೇಶ್ ,ಯುವ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಸಂಜಯ್ ರವರು ಭಾಗವಹಿಸಿದ್ದರು.