ಬೆಂಗಳೂರು ಸೇಂಟ್ ಪ್ಯಾಟ್ರಿಕ್ಸ್ ಚರ್ಚ್ ಸಭಾಂಗಣದಲ್ಲಿ :ಪೋರಮ್ ಆಫ್ ಇಂಡಿಯನ್ ಕ್ರಿಶಿಯನ್ ಅಸೋಸಿಯೇಷನ್ ವತಿಯಿಂದ ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಬೊರ್ತಲೋಮ್ ರವರು ಮಾಧ್ಯಮಗೋಷ್ಟಿ ಏರ್ಪಡಿಸಿದರು.
ಕರ್ನಾಟಕ 224ವಿಧಾನಸಭಾ ಕ್ಷೇತ್ರದಲ್ಲಿ ಕ್ತೃೆಸ್ತ ಸಮುದಾಯದವರು ಎಲ್ಲ ಕ್ಷೇತ್ರದಲ್ಲಿ ಮತದಾರರು ಇದ್ದಾರೆ. ಕಳೆದ ವಿಧಾನಸಭಾ ಚುನಾವಣೆ ನಮ್ಮ ಸಮುದಾಯದವರು ಶೇಕಡ 100ರಷ್ಟು ಮತಗಳು ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದಾರೆ.
ಇದೀಗ ಲೋಕಸಭಾ ಚುನಾವಣೆ ಘೋಷಣೆಯಾಗಿದೆ 28ಲೋಕಸಭಾ ಕ್ಷೇತ್ರದಲ್ಲಿ ಒಬ್ಬ ಕ್ತೃೆಸ್ತ ಸಮುದಾಯದ ಅಭ್ಯರ್ಥಿ ಇಲ್ಲದಿರುವುದು ಇಡಿ ನಮ್ಮ ಸಮುದಾಯಕ್ಕೆ ಬೇಸರ ತರುವ ಸಂಗತಿಯಾಗಿದೆ.
ಬೆಂಗಳೂರುನಗರ ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಜನಸಂಖ್ಯೆ ವಾಸವಿದ್ದಾರೆ.
ನಾನು ಕಳೆದ ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದೇನೆ.
ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನನ್ನನು ಪರಿಗಣಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಗಾಂಧಿ ರವರು ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಅದರೆ ಕಾಂಗ್ರೆಸ್ ಪಕ್ಷದವರು ಕ್ರಿಶಿಯನ್ ಸಮುದಾಯದವರನ್ನು ಕಡೆಗಣಿಸಿದ್ದಾರೆ ಅದ್ದರಿಂದ ನಾನು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಥಿಸುತ್ತಿದ್ದೇನೆ. ನನ್ನ ಹೋರಾಟಕ್ಕೆ ಎಲ್ಲ ಜಾತಿ, ಧರ್ಮದವರು ಬೆಂಬಲ ಸಹಕಾರ ನೀಡುತ್ತಿದ್ದಾರೆ .
ಚುನಾವಣೆಯಲ್ಲಿ ಕ್ತೃೆಸ್ತ ಸಮುದಾಯ ಅಭಿವೃದ್ದಿ ಮತ್ತು ಎಲ್ಲರನ್ನ ಒಗ್ಗೂಡಿಸಿ ಸಹೋದರತ್ವದಲ್ಲಿ ಅಭಿವೃದ್ದಿ ಪಥದತ್ತ ಸಾಗುವುದು ನನ್ನ ಗುರಿ ಎಂದು ಹೇಳಿದರು.
ಕರ್ನಾಟಕ ಕ್ತೃೆಸ್ತ ಸಂಘ ಸಂಸ್ಥೆಗಳ ಒಕ್ಕೂಟ, ಕರ್ನಾಟಕ ಕ್ತೃೆಸ್ತರ ಬಲಿಗರ ಸಂಘ, ಕರ್ನಾಟಕ ಕ್ತೃೆಸ್ತರ ತಿಗಳರ ಸಂಘ ಮತ್ತು ಅಖಿಲ ಕರ್ನಾಟಕ ಕ್ತೃೆಸ್ತರ ಕನ್ನಡ ಸಂಘ , ದಲಿತ ಸಂಘರ್ಷ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್,ಸ್ನೇಹ ಅಭಿವೃದ್ದಿ ಸಂಘ,ಜಾಗೃತಿ ಹಾಗೂ ವಿವಿಧ ಕ್ತೃೆಸ್ತ ಸಂಘಟನೆಗಳು ಬೆಂಬಲ ನೀಡಿದರು.