ಬೆಂಗಳೂರು: ಕರ್ನಾಟಕದ ಗವರ್ನರ್ ಥಾವರ್ಚಂದ್ ಗೆಹ್ಲೋಟ್, ತಮಿಳುನಾಡಿನ ರಾಮೇಶ್ವರನಲ್ಲಿ ಅಬ್ದುಲ್ ಕಲಾಂ ಮೆಮೋರಿಯಲ್ ಸೇರಿದಂತೆ ವಿವಿಧ ಇತಿಹಾಸಿಕ ಸ್ಥಳಗಳಿಗೆ ಭೇಟಿ
ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಮೊಮ್ಮಗ ನವೀನ್ ಗೆಹ್ಲೋಟ್ ಅವರೊಂದಿಗೆ ತಮಿಳುನಾಡಿನ ಐತಿಹಾಸಿಕ ನಗರವಾದ ರಾಮೇಶ್ವರಂಗೆ ಶುಕ್ರವಾರ ಭೇಟಿ ನೀಡಿದರು.ಪೂಜ್ಯ ಭಾರತ ರತ್ನ ಅಬ್ದುಲ್ ಕಲಾಂ ಸ್ಮಾರಕಕ್ಕೆ ಗೌರವ ಸಲ್ಲಿಸುವುದರ ಜೊತೆಗೆ ಮಾಜಿ ರಾಷ್ಟ್ರಪತಿಗಳ ನಿವಾಸಕ್ಕೆ ಭೇಟಿ ನೀಡಿದ ಅವರು, ಡಾ. ಅಬ್ದುಲ್ ಕಲಾಂ ಅವರ ಗೌರವಾನ್ವಿತ ಸಹೋದರ ಮತ್ತು ಸಹೋದರಿಯ ಕುಶಲೋಪರಿ ವಿಚಾರಿಸಿದರು.
ತಮ್ಮ ಪ್ರವಾಸವನ್ನು ಮುಂದುವರೆಸುತ್ತಾ, ಗವರ್ನರ್ ಗೆಹ್ಲೋಟ್ ಐತಿಹಾಸಿಕ ಪಟ್ಟಣವಾದ ಧನುಷ್ಕೋಡಿಗೆ ಭೇಟಿ ನೀಡಿದರು.
ತದ ನಂತರ ಅವರು ಪವಿತ್ರ ರಾಮೇಶ್ವರಂ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.