Big News ಆಫ್ಘಾನಿಸ್ತಾನದಲ್ಲಿ ಭೂಕಂಪ

VK NEWS
By -
0

ಫ್ಘಾನಿಸ್ತಾನದಲ್ಲಿ  ಇಂದು ಭಾನುವಾರ ಸಂಜೆ 07:59ರ  ಸುಮಾರಿಗೆ   ಭೂಕಂಪನದ  ಅನುಭವವಾಗಿದೆ. ರಿಕ್ಟರ್​ಮಾಪಕದಲ್ಲಿ 4.5 ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.



ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದಲ್ಲಿದೆ. ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ತಜಕಿಸ್ತಾನದ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪದ ತೀವ್ರತೆ 4.5 ಆಗಿದ್ದರಿಂದ ಜನರು ಭಯಭೀತರಾಗಿದ್ದರು. ಏಕಾಏಕಿ ಭೂಮಿ ಕಂಪಿಸಿದ ಕಾರಣ ಜನರು ಮನೆಯಿಂದ ಹೊರಗೆ ಓಡಲಾರಂಭಿಸಿದರು. ಅಲ್ಲದೇ ಮತ್ತೆ ಭೂಕಂಪನದ ಭೀತಿಯ ನಡುವೆಯೇ ಜನರು ರಸ್ತೆಯಲ್ಲಿ ಬಹಳ ಹೊತ್ತು ತಿರುಗಾಡುತ್ತಿರುವುದು ಕಂಡು ಬಂತು ಎಂದು ವರದಿಗಳು ತಿಳಿಸಿವೆ.
ಕಳೆದ ಅಕ್ಟೋಬರ್‌ನಲ್ಲಿಯೂ ಅಫ್ಘಾನಿಸ್ತಾನದಲ್ಲಿ ಭೂಕಂಪನ ಉಂಟಾಗಿತ್ತು. ಈ ವೇಳೆ ಸಾವು-ನೋವುಗಳು ಸಂಭವಿಸಿತ್ತು. 
ಹಾಗೂ  ಅಂದಾಜು 2,000 ಮಂದಿ ಸಾವನ್ನಪ್ಪಿದ್ದರು. ವಿಶ್ವ ಆರೋಗ್ಯ ಸಂಸ್ಥೆ ಲೆಕ್ಕಾಚಾರಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿ ಸುಮಾರು 600 ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. ಹೆರಾತ್ ಪ್ರಾಂತ್ಯವೊಂದರಲ್ಲೇ 12 ಗ್ರಾಮಗಳು ನಾಮಾವಶೇಷವಾಗಿವೆ. ಈ ಗ್ರಾಮಗಳಲ್ಲಿ ಇದ್ದ 4,200 ಮಂದಿ ನಿರಾಶ್ರಿತರಾಗಿದ್ದದ್ದನ್ನು ಇಲ್ಲಿ ಗಮನಿಸಬಹುದು.

Post a Comment

0Comments

Post a Comment (0)