ನವದೆಹಲಿ : ನಾವೆಲ್ಲ 17 ವರ್ಷಗಳಿಂದ ಯಾವ ದಿನಕ್ಕಾಗಿ ಕಾಯುತ್ತಾ ಇದ್ದೆವೋ, ಆ ದಿನ ಇಂದು ಬಂದೇ ಬಿಟ್ಟಿದೆ. ನಮ್ಮ ಆರ್‌ಸಿಬಿ (Royal Challengers Bengaluru) ತಂಡ ಕಪ್ ಗೆದ್ದೇ ಬಿಟ್ಟಿದೆ....
ಬೆಂಗಳೂರು ಕ್ರಿಕೆಟ್ ಅಭಿಮಾನಿಗಳು ಇಂದು ಹೆಮ್ಮೆಯಿಂದ ಆರ್‌ಸಿಬಿ ಬಾವುಟ ಹಿಡಿದು, ಜೋರಾಗಿ ಆರ್‌ಸಿಬಿ ಎಂದು ಘರ್ಜಿಸುವ ಅವಕಾಶ ಕೊಟ್ಟಿದ್ದಾರೆ. 2024ರ ಸಾಲಿನ ವುಮೆನ್ಸ್ ಪ್ರಿಮಿಯರ್ ಲೀಗ್ ಅಂದ್ರೆ ಡಬ್ಲ್ಯೂಪಿಎಲ್ (WPL) ಟೂರ್ನಿ ಗೆದ್ದು ಬೀಗಿ ಆರ್‌ಸಿಬಿ ತಂಡಕ್ಕೆ ಮೊಟ್ಟ ಮೊದಲ ಕಪ್ ತಂದುಕೊಟ್ಟಿದ್ದಾರೆ. ಇದುವರೆಗೆ ಹುಡುಗರ ತಂಡ ಐಪಿಎಲ್ (IPL) ಟೂರ್ನಿಯಲ್ಲಿ ಮಾಡದ ಸಾಧನೆಯನ್ನು, ನಮ್ಮ ಆರ್‌ಸಿಬಿ ಹುಡುಗಿಯರು ಸಾಧಿಸಿ ತೋರಿಸಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ತಂಡ ಹೀನಾಯವಾಗಿ ಸೋಲಿಸಿ ಆರ್‌ಸಿಬಿ ಬೆಂಗಳೂರು ತಂಡ ಈಗ ಕಪ್ ಗೆದ್ದು ಅದಕ್ಕೆ ಮುತ್ತಿಕ್ಕುವಂತೆ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ
ಒಟ್ಟಾರೆ 17 ವರ್ಷಗಳ ನಂತರ ಆರ್‌ಸಿಬಿ ತಂಡ ಕಪ್ ಗೆದ್ದಿದೆ. ಅದೂ ಬೆಂಗಳೂರು ಟೀಂ ಹುಡುಗಿಯರು ವೀರ ವನಿತೆಯರು ಈ ಸಾಧನೆ ಮಾಡಿರುವುದು ಹೆಮ್ಮೆಯನ್ನು ಮತ್ತಷ್ಟು ಮಗದಷ್ಟು ಹೆಚ್ಚಿಸಿದೆ.