*ಭಜನ* - *ಪ್ರವಚನ* - *ಸಂಕೀರ್ತನ*

VK NEWS
By -
0

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ  ವಿಜಯನಗರದ ಮಧ್ವ ಸಂಘದಲ್ಲಿ ಮಾರ್ಚ್ 19 ರಿಂದ 22ರ ವರೆಗೆ (ಪ್ರತಿದಿನ ಸಂಜೆ 6-00 ರಿಂದ 8-00) ಧಾರ್ಮಿಕ / ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ.

 *ಭಜನಾಮೃತ* : ಪ್ರತಿದಿನ ಸಂಜೆ (6 ರಿಂದ 7). ಮಾರ್ಚ್ 19, ಮಂಗಳವಾರ : ಪವಿತ್ರ ಗಾನ ವೃಂದ, ಮಾರ್ಚ್ 20, ಬುಧವಾರ : ಶ್ರೀ ಶ್ರೀಪಾದರಾಜ ಭಜನಾ ಮಂಡಳಿ, ಮಾರ್ಚ್ 21, ಗುರುವಾರ : ವಾಸವಿ ಭಜನಾ ಮಂಡಳಿ.


 *ಧಾರ್ಮಿಕ* *ಪ್ರವಚನ* : ಮಾರ್ಚ್ 19 ರಿಂದ 21ರ ವರೆಗೆ ಪ್ರತಿದಿನ ಸಂಜೆ 7 ರಿಂದ 8ರ ವರೆಗೆ ಮ||ಶಾ||ಸಂ|| ಶ್ರೀ ಕಲ್ಲಾಪುರ ಪವಮಾನಾಚಾರ್ ರವರಿಂದ ಶ್ರೀ ವಾದಿರಾಜತೀರ್ಥರ ವಿರಚಿತ "ದಶಾವತಾರ ಸ್ತುತಿ" ಧಾರ್ಮಿಕ ಪ್ರವಚನ

 *ಹರಿನಾಮ* *ಸಂಕೀರ್ತನೆ* : ಮಾರ್ಚ್ 22, ಶುಕ್ರವಾರ ಸಂಜೆ 6-30 "ಹರಿನಾಮ ಸಂಕೀರ್ತನೆ". ಗಾಯನ : ಶ್ರೀಮತಿ ಐಶ್ವರ್ಯ ಶ್ರೀನಿಧಿ ಕುಲಕರ್ಣಿ, ಹಾರ್ಮೋನಿಯಂ : ಕು|| ಸೃಷ್ಟಿ ದೇಸಾಯಿ, ತಬಲಾ : ಚಿ|| ಋತುಪರ್ಣ ದೇಸಾಯಿ.

 *ಕಾರ್ಯಕ್ರಮ* *ನಡೆಯುವ* *ಸ್ಥಳ* *:* ಶ್ರೀ ವಿಜಯ ಮಧ್ವ ಸಂಘ, #37/2, 2ನೇ ಮುಖ್ಯರಸ್ತೆ, ಗಂಗಾಧರ ಬಡಾವಣೆ, ವಿಜಯನಗರ, ಬೆಂಗಳೂರು-560040

Post a Comment

0Comments

Post a Comment (0)