ಉಚ್ಚ ನ್ಯಾಯಾಲಯದ ನ್ಯಾ. ಶ್ರೀಮತಿ ಅನು ಸಿವರಾಮನ್ ಅವರಿಗೆ ವಕೀಲರ ಪರಿಷತ್ ಅಧ್ಯಕ್ಷರಿಂದ ಸ್ವಾಗತ

VK NEWS
By -
0

ಬೆಂಗಳೂರು, ಮಾರ್ಚ್ 22 (ಕರ್ನಾಟಕ ವಾರ್ತೆ) : ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀಮತಿ ಅನು ಸಿವರಾಮನ್ ಅವರಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್‍ನ ಅಧ್ಯಕ್ಷರಾದ ಹೆಚ್.ಎಲ್. ವಿಶಾಲ್ ರಘು ಅವರು ಹೃತ್ಪೂರ್ವಕವಾಗಿ ಸ್ವಾಗತ ಕೋರಿದರು.

ಇಂದು ಕರ್ನಾಟಕ ಉಚ್ಛ ನ್ಯಾಯಾಲಯದ ಕೋರ್ಟ್ ಹಾಲ್ ಸಂಖ್ಯೆ 1 ರಲ್ಲಿ ಗೌರವಾನ್ವಿತ ನ್ಯಾಯಧೀರಾದ ಶ್ರೀಮತಿ ಅನು ಸಿವರಾಮನ್ ಅವರನ್ನು ಸ್ವಾಗತಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ಗೌರವಾನ್ವಿತ ನ್ಯಾಯಾಧೀಶರು ಕೇರಳ  ಉಚ್ಚ ನ್ಯಾಯಾಲಯದಿಂದ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದಾರೆ. ಗೌರವಾನ್ವಿತ ನ್ಯಾಯಾಧೀಶರು 25ನೇ ಮೇ 1966 ರಂದು ಎರ್ನಾಕುಲಂನಲ್ಲಿ ಜನಿಸಿದ್ದು, ಶಿಕ್ಷಣವನ್ನು ಸೇಂಟ್ ತೆರೇಸಾ ಕಾನ್ವೆಂಟ್ ಗಲ್ರ್ಸ್ ಹೈಸ್ಕೂಲ್, ಸೇಂಟ್ ತೆರೇಸಾ ಕಾಲೇಜು ಮತ್ತು ಎರ್ನಾಕುಲಂನ ಮಹಾರಾಜ ಕಾಲೇಜುಗಳಲ್ಲಿ ಪೂರೈಸಿದ್ದಾರೆ. 1986 ರಲ್ಲಿ ಇಂಗ್ಲೀμï ಸಾಹಿತ್ಯದಲ್ಲಿ ಪದವಿ ಪಡೆದಿದ್ದು, 1987 ರಲ್ಲಿ ಕೇರಳ ಪ್ರೆಸ್ ಅಕಾಡೆಮಿಯಿಂದ ಪತ್ರಿಕೋದ್ಯಮದಲ್ಲಿ ಡಿಪೆÇ್ಲಮಾವನ್ನು ಪೂರ್ಣಗೊಳಿಸಿದ್ದಾರೆ. ಎರ್ನಾಕುಲಂನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ.


ವಕೀಲರಾಗಿ 9ನೇ ಮಾರ್ಚ್ 1991 ರಂದು ಸೇವೆ ಪ್ರಾರಂಭಿಸಿದ್ದು, 2001 ರಿಂದ 2010 ರವರೆಗೆ ಕೊಚ್ಚಿನ್ ಕಾಪೆರ್Çರೇಷನ್‍ಗೆ ಸ್ಥಾಯಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಜನವರಿ 2007 ರಿಂದ ಸರ್ಕಾರಿ ವಕೀಲರಾಗಿ 2010 ಮತ್ತು 2011 ರ ಅವಧಿಯಲ್ಲಿ ವಿಶೇಷ ಸರ್ಕಾರಿ ಪ್ಲೀಡರ್ (ಸಹಕಾರ) ಆಗಿ ಸೇವೆ ಸಲ್ಲಿಸಿದ್ದಾರೆ. 10ನೇ ಏಪ್ರಿಲ್ 2015 ರಂದು ಕೇರಳದ ಹೈಕೋರ್ಟ್‍ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. 5ನೇ ಏಪ್ರಿಲ್ 2017 ರಿಂದ ಖಾಯಂ ನ್ಯಾಯಾಧೀಶರಾಗಿ ನೇಮಕವಾಗಿದ್ದು, ಇಂದು ಕರ್ನಾಟಕ ಉಚ್ಚನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾಗಿದ್ದಾರೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ನಿಲಯ್ ವಿ. ಅಂಜಾರಿಯಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಅರವಿಂದ್ ಕಾಮತ್, ಕರ್ನಾಟಕದ   ಲರ್ನಡ್ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರುಗಳು, ವಕೀಲರುಗಳು ಉಪಸ್ಥಿತರಿದ್ದರು.

Post a Comment

0Comments

Post a Comment (0)