Big News ಭಕ್ತನ ಪ್ರಾರ್ಥನೆಯನ್ನು ಪೂರೈಸಿದ ಜಯನಗರದ ಶ್ರೀ ಶ್ರೀರಾಘವೇಂದ್ರ ಸ್ವಾಮಿಗಳು

VK NEWS
By -
0

 ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಸನ್ನಿಧಾನಕ್ಕೆ ಆಗಮಿಸಿದ ಸಂತೋಷ್ ಎಂಬ  ಭಕ್ತರೊಬ್ಬರು ಇತ್ತೀಚೆಗೆ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದರು. 

ಈ ಸಂದರ್ಭದಲ್ಲಿ ಅವರ ಸಂಕಲ್ಪದಲ್ಲಿ "ನನ್ನ ಇಷ್ಟಾರ್ಥ" ನೆರವೇರಿದರೆ  ಜಯನಗರದ 5 ನೇ ಬಡಾವಣೆಯ ರಾಘವೇಂದ್ರ ಸ್ವಾಮಿಗಳ ಸನ್ನಿಧಾನದಿಂದ (ಮಠದಿಂದ)ಮಂತ್ರಾಲಯಕ್ಷೇತ್ರ ಶ್ರೀ ರಾಘವೇಂದ್ರ ಸ್ವಾಮಿಗಳ (ಸನ್ನಿಧಾನದ)ಮಠದವರೆಗೂ ನಾನು "ಪಾದಯಾತ್ರೆ"ಯನ್ನು  ಮಾಡುತ್ತೇನೆ ಎಂದು ಸಂಕಲ್ಪ ಮಾಡಿದ್ದರು. ಆ ಸಂಕಲ್ಪದಂತೆ  ಶ್ರೀ ರಾಘವೇಂದ್ರ ಸ್ವಾಮಿಗಳು ಅವರ ಭಕ್ತಿಯ ಪ್ರಾರ್ಥನೆಯ  ಕೋರಿಕೆಯ ಇಷ್ಟಾರ್ಥವನ್ನು ಕೆಲವೇ ಕೆಲವು ದಿನಗಳಲ್ಲಿ ನೆರವೇರಿಸಿ ಅನುಗ್ರಹಿಸಿದರು. ಇದಾದ ನಂತರ ಆ ಭಕ್ತರು ಜಯನಗರದ ಐದನೇ ಬಡಾವಣೆಯ  ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಾನಕ್ಕೆ ಆಗಮಿಸಿ ಈ ಎಲ್ಲಾ ತಮಗಾದ ಅನುಭವದ ಮಾಹಿತಿಯನ್ನು ವ್ಯವಸ್ಥಾಪಕರಾದ ಆರ್.ಕೆ. ವಾದಿಂದ್ರ ಆಚಾರ್ಯರಲ್ಲಿ ತಿಳಿಸಿ, ಈ ದಿನ ಶ್ರೀ ಹರಿ ದಿನ "ಏಕಾದಶಿ" ದಿನದಂದು ಶ್ರೀ ಮಠಕ್ಕೆ ಆಗಮಿಸಿ ಗುರುರಾಯರ ದರ್ಶನ ಪಡೆದು ನಂತರದಲ್ಲಿ ಆಚಾರ್ಯರು ಭಕ್ತರೊಂದಿಗೆ ಮಾತನಾಡುತ್ತಾ ನೀವು ಗುರುರಾಯರ ಪೂರ್ಣ  ಅನುಗ್ರಹಕ್ಕೆ ಪಾತ್ರರಾಗಿದ್ದೀರಿ. ನಂಬಿ ಬಂದ ಭಕ್ತರನ್ನು ಯಾವತ್ತೂ ಕೈ ಬಿಡಲಾರರು ಶ್ರೀ ಗುರು ರಾಯರು. ನಿಮ್ಮ ಭಕ್ತಿಗೆ ಶ್ರೀ ಗುರುರಾಯರು  ಪೂರ್ಣ ಅನುಗ್ರಹಿಸಿದ್ದಾರೆ ಎಂದು ತಿಳಿಸುತ್ತಾ  ನಿಮ್ಮ ಪಾದಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಿ ಆಶೀರ್ವದಿಸಿ, ಅವರ ರಕ್ಷಣೆಗಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನದ ಮುಂಭಾಗದಲ್ಲಿ ದೀಪಗಳನ್ನು ಪ್ರಜ್ವಲಿಸಿ ಶ್ರೀ ಗುರು ರಾಯರ ಭಾವಚಿತ್ರವನ್ನು ಮತ್ತು ತುಳಸಿ ಮಾಲೆಯನ್ನು  ನೀಡಿ  ನಿಮ್ಮ ಈ ಪಾದಯಾತ್ರೆಯೂ ಸುಖಕರವಾಗಿರಲಿ ಆ ಗುರುರಾಯರ ಅನುಗ್ರಹವೆಂಬ ದೀಪದ ಬೆಳಕಿನಲ್ಲಿ ತಾವು ಮುಂದೆ ನಡೆದು ಶ್ರೀ ಗುರುರಾಯರ ಬೃಂದಾವನವನ್ನು ದರ್ಶಿಸಿ, ಪರಮಪೂಜ್ಯ ಶ್ರೀ108 ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಂದ "ಫಲ ಮಂತ್ರಾಕ್ಷತೆ"ಯನ್ನು ಸ್ವೀಕರಿಸಿ, ತೀರ್ಥ ಪ್ರಸಾದವನ್ನು ಸ್ವೀಕರಿಸಿ, ಕೃತಾರ್ಥರಾಗಿ ಎಂದು ತಿಳಿಸಿ ಅವರನ್ನು ಶ್ರೀಮಠದಿಂದ  ಪಾದಯಾತ್ರೆಗಾಗಿ  ಅವರನ್ನು ಬೀಳ್ಕೊಟ್ಟರು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ತದನಂತರ ಆ ಸಂತೋಷ್ ಎಂಬ ಭಕ್ತರು ಮಾತನಾಡುತ್ತಾ ಇದೆಲ್ಲವೂ ನನ್ನ ಜೀವ "ಆರಾಧ್ಯ ದೈವ"ಶ್ರೀ ಗುರುರಾಯರ   ಅನುಗ್ರಹದ ಪವಾಡವೇ ಎಂದು ತಿಳಿಸಿ ವ್ಯವಸ್ಥಾಪಕರನ್ನು ಅಭಿನಂದಿಸಿ ನಮಸ್ಕರಿಸಿ, ನೆರೆದಿದ್ದ ಭಕ್ತರಿಗೂ ತಿಳಿಸುತ್ತಾ "ರಾಯರಿದ್ದಾರೆ" ಗುರು ರಾಯರನ್ನು ನಂಬಿ ಎಲ್ಲರಿಗೂ ಒಳ್ಳೆಯದಾಗುತ್ತದೆ  ರಾಯರ ಅನುಗ್ರಹಕ್ಕೆ  ನಾನೇ ಸಾಕ್ಷಿ ಎಂದು ತಿಳಿಸಿದರು.

 ಈ ಶುಭದಿನ 21-3-2024 ಗುರುವಾರದಂದು ಅಂದಾಜು ಸಮಯ  ರಾತ್ರಿ 8 ಗಂಟೆ 25 ನಿಮಿಷಕ್ಕೆ ಶ್ರೀ ಜಯನಗರದ 5ನೇ ಬಡಾವಣೆ ಶ್ರೀ ಗುರುರಾಯರ ಮಠದಿಂದ ತಮ್ಮ ಪಾದಯಾತ್ರೆಗೆ ಪ್ರಯಾಣ ಬೆಳೆಸಿದ ಸಂತೋಷ್ ಎಂಬ ಈ ಅಪರೂಪದ ವ್ಯಕ್ತಿ ರಾಯರ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾದವರು.

"ನಂಬಿ ಕೆಟ್ಟವರಿಲ್ಲವೋ ಶ್ರೀ ಗುರು ಶ್ರೀ ರಾಘವೇಂದ್ರ ಸ್ವಾಮಿಗಳನ್ನು"

Post a Comment

0Comments

Post a Comment (0)