ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಅಭ್ಯರ್ಥಿ ರಾಜೀವ್ ಗೌಡರವರ ಪರ ಕಾಂಗ್ರೆಸ್ ಕಾರ್ಯಕರ್ತರ ಚುನಾವಣೆ ಸಭೆ.
ಸಚಿವರಾದ ಕೃಷ್ಣಬೈರೇಗೌಡ, ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜೀವ್ ಗೌಡರವರು, ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ವಾಜಿದ್, ಯುವ ಕಾಂಗ್ರೆಸ್ ರಾಜ್ಯ ಕಾರ್ಯಾಧ್ಯಕ್ಷರಾದ ಹೆಚ್.ಎಸ್. ಮಂಜುನಾಥಗೌಡ, , ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಎಸ್.ಕೇಶವಮೂರ್ತಿ, ಆಡಳಿತ ಪಕ್ಷದ ಮಾಜಿ ನಾಯಕರಾದ ಎಮ್.ಶಿವರಾಜುರವರು,ಉತ್ತರ ಜಿಲ್ಲಾ ಇಂಟಕ್ ಅಧ್ಯಕ್ಷರಾದ ಶ್ರೀಧರ್ , ಬೆಂಗಳೂರು ಗ್ಯಾರಂಟಿ ಯೋಜನೆ ಉಪಾಧ್ಯಕ್ಷರಾದ ಜನಾರ್ಧನ್ ರವರು ದೀಪ ಬೆಳಗಿಸಿ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿದರು.
*ಸಚಿವರಾದ ಕೃಷ್ಣಬೈರೇಗೌಡರವರು* ಮಾತನಾಡಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವುದು ಖಚಿತ.
ಬಿಜೆಪಿ ಕರ್ನಾಟಕದಲ್ಲಿ ಒಡೆದ ಮನೆ , ಇಡಿ ಒಂದು ಕುಟುಂಬಕ್ಕಾಗಿ ರಾಜಕೀಯ ನಡೆಯುತ್ತಿದೆ.
ಶೋಭಾ ಕರಂದ್ಲಾಜೆಗೆ ಬಿಎಸ್.ವೈ ಋಷಿಪಡಿಸಲು ಟಿಕೇಟು ನೀಡಿದ್ದಾರೆ.
ಚಿಕ್ಕಮಗಳೂರುನಿಂದ ಜನರು ಬೇಡ ಎಂದು ಹೋರ ತಳ್ಳಿದ್ದಾರೆ. ಎಲ್ಲ ಕಡೆ ತಿರಸ್ಕಾರ ಆಗಿರುವ ಕ್ಯಾಂಡಿಡೇಟ್ ಶೋಭಾ ಕರಂದ್ಲಾಜೆ.
ದೇಶ ಸಾಕುತ್ತಿರುವುದು ಬೆಂಗಳೂರುನ ನಾಗರಿಕರು, ಬೆಂಗಳೂರು ಮೂಲ ನಿವಾಸಿಗಳಾದ ರಾಜೀವ್ ಗೌಡರು ಕಾಂಗ್ರೆಸ್ ಪಕ್ಷ ಕಳುಹಿಸಿಕೊಟ್ಟಿದೆ.
10ವರ್ಷಗಳಿಂದ ಬಿಜೆಪಿ ಸರ್ಕಾರ ಅವಧಿಯಲ್ಲಿ ಆಹಾರ ಪದಾರ್ಥ ಮತ್ತು ಪೆಟ್ರೋಲ್ , ಆಡುಗೆ ಆನಿಲ ಬೆಲೆ ಹೆಚ್ಚಳವಾಗಿದೆ ಜನಸಾಮಾನ್ಯರು ದುಡಿದು ದುಡ್ಡು ಖರ್ಚುಗುತ್ತಿದೆ.
ಅಂಬಾನಿ, ಅದಾನಿ ಮಾತ್ರ ಶ್ರೀಮಂತರಾಗುತ್ತಾರೆ. ಅಂಬಾನಿ ಮಗನ ಮದುವೆ 500ಕೋಟಿ ಖರ್ಚು ಮಾಡಿದ್ದಾರೆ, ಸರ್ಕಾರ ವಿಮಾನ ನಿಲ್ದಾಣವನ್ನು ಅಂಬಾನಿ ಕುಟುಂಬದ ಆಹ್ವಾನಿತರಿಗೆ ಬಿಟ್ಟುಕೊಟ್ಟಿತು.
ಶ್ರೀಮಂತರಿಗೆ 10ವರ್ಷದ ಅವಧಿಯಲ್ಲಿ 20ಲಕ್ಷ ಕೋಟಿ ಸಾಲಮನ್ನ ಮಾಡಿದ್ದಾರೆ.
ದೇಶದಲ್ಲಿ ರೈತರ ಪರಿಸ್ಥಿತಿ ಅದೋಗತಿಗೆ ಇಳಿದಿದೆ.
ಜನಧನ್ ಅಕೌಂಟ್ 15ಲಕ್ಷ ಬಂದಿಲ್ಲ, ಅದರೆ ಕಾಂಗ್ರೆಸ್ ಗ್ಯಾರಂಟಿ ಹಣ ಹೋಗುತ್ತಿದೆ.
ಪ್ರತಿ ತಿಂಗಳು 8000ರೂಪಾಯಿ 1ಲಕ್ಷ ರೂಪಾಯಿ ಮಹಿಳೆಯರಿಗೆ ಸಹಾಯಧನ ಇಂಡಿಯ ಮೈತ್ರಿಕೂಟ ಕಾಂಗ್ರೆಸ್ ಸರ್ಕಾರ ಬಂದರೆ ಕೊಡಲಾಗುತ್ತದೆ.
ಬರಗಾಲಕ್ಕೆ ಪರಿಹಾರ ಕೊಟ್ಟಿಲ್ಲ ಕೇಂದ್ರ ಸರ್ಕಾರ ನಯಾಪೈಸೆ ಕೊಟ್ಟಿಲ್ಲ. ರೈತರ ಮರಣಹೋಮವಾಗುತ್ತಿದೆ.
27ಲೋಕಸಭಾ ಸದಸ್ಯರು ಓಳು ಕರ್ನಾಟಕದ ಪಾಲಿಗೆ ಗೋಳು ಎಂದು ಹೇಳಿದರು.
*ಜಿ.ಸಿ.ಚಂದ್ರಶೇಖರ್ ರವರು* ಮಾತನಾಡಿ ದೇಶದಲ್ಲಿ ಪ್ರಜಾಪ್ರಭುತ್ವದ ಡೊಡ್ಡ ಹಬ್ಬ ಲೋಕಸಭಾ ಚುನಾವಣೆ ನಡೆಯುತ್ತಿದೆ..
ಕಾಂಗ್ರೆಸ್ ಸರ್ಕಾರ 5ಗ್ಯಾರಂಟಿ ಯೋಜನೆಯನ್ನ 8ತಿಂಗಳ ಅವಧಿಯಲ್ಲಿ ಪೂರೈಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೋಡೆತ್ತಿನ ಸರ್ಕಾರ.
ಬಿಜೆಪಿ ಪಕ್ಷದಲ್ಲಿ ಬಿ.ಎಸ್.ವೈ. ಕುಟುಂಬ ರಾಜಕಾರಣದಿಂದ ಎಲ್ಲ ಬಿಜೆಪಿ ಮುಖಂಡರು, ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ.
ಬಿಜೆಪಿ ಜೆಡಿಎಸ್ ಬುದ್ದಿಬಂದಿಲ್ಲ ಈಗಾಗಲೆ ರಾಜ್ಯಸಭಾ ಚುನಾವಣೆಯಲ್ಲಿ ಸೋಲಿನ ಕಹಿ ಉಂಡಿದ್ದಾರೆ ಎಂದು ಹೇಳಿದರು.
*ರಾಜೀವ್ ಗೌಡರವರು* ಮಾತನಾಡಿ ವರ್ಲ್ಡ್ ಕ್ಲಾಸ್ ಸಿಟಿಗೆ ವರ್ಲ್ಡ್ ಕ್ಲಾಸ್ ಅಭ್ಯರ್ಥಿಯನ್ನ ಉತ್ತರ ಲೋಕಸಭಾ ಕ್ಷೇತ್ರಕ್ಕೆ ನೀಡಿದ್ದಾರೆ.
ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಹವಮಾನ ಕುರಿತು ಯೋಜನೆ ರೂಪಿಸಲಾಗಿದೆ.
ಅಪಾರ್ಟ್ ಮೆಂಟ್ ನಿವಾಸಿಗಳ ಸಮಸ್ಯೆ ನಿವಾರಣೆ ಕಾಂಗ್ರೆಸ್ ಪಕ್ಷದಲ್ಲಿ ವಿಭಾಗ ಸ್ಥಾಪನೆಯಾಗಿದೆ.
ಬಿಜೆಪಿ ಪಕ್ಷ 10ವರ್ಷ ಸಾಧನೆ ಶೂನ್ಯ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳಾದ ಸುಧೀಂದ್ರ, ನಟರಾಜ್, ಪರಿಸರ ರಾಮಕೃಷ್ಣ, ಮಹಿಳಾ ಅಧ್ಯಕ್ಷರುಗಳಾದ ಭವ್ಯ, ಸುನೀತಾಬಾಯಿ, ಮಂಜುಳರವರು ಭಾಗವಹಿಸಿದ್ದರು.