ಶಿಕ್ಷಣ ರತ್ನ ಶ್ರೀ.ಜಿ ಕೆ ಮಂಜುನಾಥ್ !

VK NEWS
By -
0

ಆರು ತಿಂಗಳ ಹಿಂದೆ ಒಂದು ದಿನ ನನ್ನ ಮಗಳ ಜೊತೆ ಅವಳು ಪದವಿಪೂರ್ವ ಶಿಕ್ಷಣ ಪಡೆದ ಶೇಷಾದ್ರಿಪುರಂ ಕಾಂಪೋಸಿಟ್ ಪಿ ಯೂ ಕಾಲೇಜಿಗೆ ಭೇಟಿ ನೀಡಿ ಅವಳು ತನಗೆ ಪಾಠ ಮಾಡಿದ ಉಪನ್ಯಾಸಕರನ್ನೆಲ್ಲಾ ಭೇಟಿ ಮಾಡಿದ ನಂತರ ಪ್ರಾಂಶುಪಾಲರಾದ ಶ್ರೀ. ಜಿ ಕೆ ಮಂಜುನಾಥ್ ಅವರನ್ನು ಭೇಟಿ ಮಾಡಿದ್ದೆವು.ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳ ಬಗ್ಗೆ ಅವರು ಇಟ್ಟುಕೊಂಡಿರುವ ಅಭಿಮಾನ ದೊಡ್ಡದು.ಏನೆಲ್ಲಾ ಕೊಟ್ಟಿದೆ ನಮ್ಮ ಸಂಸ್ಥೆ.ನಾನು ಪಿ ಯೂ ಸಿ ಮತ್ತು ಡಿಗ್ರಿ ಎರಡೂ ಓದುತ್ತಿದ್ದಾಗ ನನಗೆ ಸಿಕ್ಕ ಪ್ರಸಿದ್ಧ ಉಪನ್ಯಾಸಕರ ಮಾರ್ಗದರ್ಶನ,ನಾನು ಇಲ್ಲಿ ಪಾಠ ಮಾಡಲು ಉಪನ್ಯಾಸಕನಾಗಿ ನೀಡಿದ ಕೆಲಸ,ನಂತರ ನನ್ನ ಹೆಂಡತಿಗೂ ನಮ್ಮ ಕಾಲೇಜಿನಲ್ಲೇ ಕೆಲಸ,ನನ್ನ ಮಗನಿಗೆ ಸೀಟು,ನಮ್ಮ ಕುಟುಂಬದ ನಿರ್ವಹಣೆಗೆ ಬೇಕಾಗುವ ವರಮಾನ ಏನೆಲ್ಲಾ ಕೊಟ್ಟಿದೆ.ನಾವೆಲ್ಲರೂ ಬಹಳ ಕೃತಜ್ಞರಾಗಿದ್ದೇವೆ ಅಂದರು.ಶೇಷಾದ್ರಿಪುರಂ ಕಾಂಪೋಸಿಟ್ ಪಿ ಯೂ ಕಾಲೇಜಿನಲ್ಲಿ ಸುದೀರ್ಘ ಅವಧಿಗೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಮುಂದಿನ ವರ್ಷ ನಿವೃತ್ತಿಯಾಗುವವರಿದ್ದರೂ ಇವರ ನಾಯಕತ್ವ ಮತ್ತು ಸಂಸ್ಥೆಗೆ ನೀಡುತ್ತಿರುವ ಸೇವೆ ನೋಡಿ ಅವರ ಅವಧಿ ವಿಸ್ತರಣೆಯಾಗಲೂ ಬಹುದು.

ಶೇಷಾದ್ರಿಪುರಂ ಸಮೂಹ ವಿದ್ಯಾ ಸಂಸ್ಥೆಗಳಲ್ಲಿ ವಾಣಿಜ್ಯ ಶಿಕ್ಷಣ  ಹೆಸರುವಾಸಿ.ನಾನು ಓದಿದ್ದು ಶೇಷಾದ್ರಿಪುರಂ ಪದವಿಪೂರ್ವ ಕಾಲೇಜು ಮತ್ತು ಪದವಿ ಶಿಕ್ಷಣಕ್ಕೆ ಶೇಷಾದ್ರಿಪುರಂ ಮುಖ್ಯ ಕಾಲೇಜು. ನನ್ನ ಮಗಳು ಪ್ರೌಢಶಾಲೆಯನ್ನು ಐ ಸಿ ಎಸ್ ಇ ವ್ಯಾಸಂಗದಲ್ಲಿ ಮಲ್ಲೇಶ್ವರದ ಕ್ಲೂನಿ ಕಾನ್ವೆಂಟಿನಲ್ಲಿ ಓದಿ ಪದವಿಪೂರ್ವ ಶಿಕ್ಷಣಕ್ಕೆ ವಾಣಿಜ್ಯ ಆಯ್ಕೆ ಮಾಡಿಕೊಂಡಾಗ ನಾನು ಮತ್ತು ನನ್ನ ಪತ್ನಿ ಓದಿದ ಕಾಲೇಜಿನಲ್ಲಿ ಮಗಳೂ ಓದಲಿ ಎಂದುಕೊಂಡು ನಂತರ  ಸಮೂಹ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಶೇಷಾದ್ರಿಪುರಂ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಸೇರಿಸಿದ್ದೆವು.ಅದು ಅವಳ ಶೈಕ್ಷಣಿಕ ಜೀವನದ ಟರ್ನಿಂಗ್ ಪಾಯಿಂಟ್ ಆಯಿತು.ಅವಳು ಎರಡನೇ ಪಿ ಯೂ ಸಿ ಓದುತ್ತಿದ್ದಾಗ ಮಗಳ ಕಾಲೇಜಿಗೆ ಶೇಷಾದ್ರಿಪುರಂ ಮುಖ್ಯ ಪದವಿ ಕಾಲೇಜಿನವರು ಪದವಿ ಶಿಕ್ಷಣದ ಬಗ್ಗೆ ವಿವರಿಸಲು ಬಂದಿದ್ದಾಗ ಮಗಳ ಪರವಾಗಿ ನಾನೇ ವಿದ್ಯಾರ್ಥಿಗಳ ಸಾಲಿನಲ್ಲಿ ಕುಳಿತಿದ್ದೆ.ಮಗಳು ಮೊದಲ ಪಿ ಯೂ ಸಿ ಓದುವಾಗ ವಿವೇಕಾನಂದರ ಜನ್ಮ ದಿನ ಮತ್ತು ಪೇರೆಂಟ್ಸ್ ಟೀಚರ್ ಮೀಟಿಂಗ್ ನಡೆದಾಗ ಪೋಷಕರ ಪರವಾಗಿ ನಾನು ಕೂಡಾ ಮಾತನಾಡಿದ್ದೆ.ಜಿ ಕೆ ಎಂ ಸರ್ ಮತ್ತು ಅನೇಕ ಉಪನ್ಯಾಸಕರು ಅಂದಿನಿಂದ ನನ್ನ ಸಂಪರ್ಕಕ್ಕೆ ಬಂದು ಅಭಿಮಾನ ಇರಿಸಿಕೊಂಡಿದ್ದಾರೆ. 

ಶೇಷಾದ್ರಿಪುರಂ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ಜಿ ಕೆ ಮಂಜುನಾಥ್ ಕೂಡಾ ನನ್ನಂತೆಯೇ ನಮ್ಮ ಶೇಷಾದ್ರಿಪುರಂ ಪದವಿಪೂರ್ವ ಹಾಗೂ ಪದವಿ ಮುಖ್ಯ ಕಾಲೇಜಿನ ಹಳೆಯ ವಿದ್ಯಾರ್ಥಿ ಎನ್ನುವುದೇ ನನಗೆ ಆ ದಿನಗಳ ಹೆಮ್ಮೆಯಾಗಿತ್ತು. ಶೇಷಾದ್ರಿಪುರಂ ಮುಖ್ಯ ಪದವಿ ಕಾಲೇಜಿನಲ್ಲಿ ಆಗ ಪ್ರಾಂಶುಪಾಲರಾಗಿದ್ದ  ಡಾ.ಹೆಚ್ ಎನ್ ಮೀರಾ.ವಾಣಿಜ್ಯ ವಿಭಾಗದ ಡಾ.ಚಿತ್ರಾ ಮತ್ತು ಪ್ರೊ.ರಾಘವೇಂದ್ರ ಅವರು ಬಂದು ಹೊಸದಾಗಿ ಆರಂಭಿಸುತ್ತಿರುವ ಬಿ.ಕಾಂ ಆನರ್ಸ್ ಮಾಡುವುದರ ಪ್ರಯೋಜನಗಳನ್ನು ತಿಳಿಸಿಕೊಟ್ಟಿದ್ದರು.ನಮ್ಮ ಕಾಲೇಜಿಗೇ ಬಂದು ಸೇರಿ ಅಂತ ಹೇಳುವುದಿಲ್ಲ.ಎಲ್ಲಿ ಬೇಕಾದರೂ ಸೇರಿಕೊಳ್ಳಿ ನಮ್ಮ ಕಾಲೇಜಿನ ಬಿ.ಕಾಂ ಸೇರಲು ಪಿ ಯೂ ಸಿ  89% - 90% ಬರಬೇಕು.ಬಿ.ಕಾಂ ಆನರ್ಸ್ ಸೇರಲು 92% ಬಂದಿರಬೇಕು. ಅರವತ್ತು ಜನ ವಿದ್ಯಾರ್ಥಿಗಳಿಗೆ ಅವಕಾಶ ಎಂದು ಹೇಳಿ ಮುಗಿಸಿದ್ದರು.ನನ್ನ ಮಗಳು ಬಯಸಿದ ಪದವಿ ಕೋರ್ಸ್ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿದ್ದ ಕಾರಣ ಪದವಿಗೆ ಅಲ್ಲಿ ಸೇರಿದ್ದಳು. 


ಮನೆಗೆ ಬಂದು ಫೋಟೋ ತೋರಿಸಿದ ತಕ್ಷಣ ಮಗಳು ಸಂಭ್ರಮದಲ್ಲಿ ಹೇಳಿದ್ದು ಮೀರಾ ಆಂಟಿ ಅಂತ.ನನ್ನ ಮಗಳ ಬಾಲ್ಯ ಸ್ನೇಹಿತೆ ಕು.ಧನ್ಯಾಳ ಅಮ್ಮ ಡಾ.ಹೆಚ್ ಎನ್  ಮೀರಾ ಅವರು ಆಗ ಶೇಷಾದ್ರಿಪುರಂ ಮುಖ್ಯ ಪದವಿ ಕಾಲೇಜಿನ ಆಗಿನ ಪ್ರಾಂಶುಪಾಲರು ಮತ್ತು ಮಗಳು ಜಾನಕಿ ಧಾರವಾಹಿಯಲ್ಲೂ ಅಭಿನಯಿಸುತ್ತಿದ್ದವರು ಎಂದು ಕೇಳಿ ಸಂತಸವಾಗಿತ್ತು.ಇದಾದ ನಂತರ ಮತ್ತೊಬ್ಬ ಸ್ನೇಹಿತರ ಮನೆಗೆ ಹೋಗಿದ್ದೆ.ಅವರ ಮಗಳೂ ತಿಳಿಸಿದ್ದು ಈಗ ಪಿ ಯೂ ಸಿ ಅಥವಾ ಪದವಿ ಸೇರಬೇಕಾದರೆ ವಿಜ್ಞಾನ ಆಯ್ದುಕೊಳ್ಳಲು ಕಟ್ ಆಫ್ ಅಷ್ಟೊಂದು ಸಮಸ್ಯೆ ಇಲ್ಲ.ಆದರೆ ಕಾಮರ್ಸ್ ಸೇರಬೇಕಾದರೆ ಸೀಟು ಸಿಗುವುದು ಕಷ್ಟ.ನಮ್ಮ ಕಾಲೇಜಿನಲ್ಲಿ ಕಾಮರ್ಸ್ ಸೇರಬೇಕಾದರೆ ಕನಿಷ್ಟ 95% ಬಂದಿರಬೇಕು ಅಂದಿದ್ದಳು. ನಾನಂತೂ ಅಷ್ಟೊಂದು ಬುದ್ಧಿವಂತನೂ ಆಗಿರಲಿಲ್ಲ. ಈಗಲೂ ಅಷ್ಟೊಂದೆಲ್ಲಾ ಬುದ್ಧಿವಂತ ಎಂಬ ಸೀನೂ ಇಲ್ಲ.ನನಗೆ ಬಿ ಕಾಂ ಎಂದರೆ just be calm ಅಂತ ಅಷ್ಟೇ.ಆದರೆ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ವಾಣಿಜ್ಯ ವಿಭಾಗದಲ್ಲಿ ನೀಡಿರುವ ಕೊಡುಗೆ ಅಪ್ರತಿಮ. ವಿಜ್ಞಾನ ಕಲೆ ವಿಭಾಗದಲ್ಲೂ ಕಡಿಮೆ ಏನಿಲ್ಲ. 

ಶ್ರೀ.ಜಿ ಕೆ ಮಂಜುನಾಥ್ ಅವರು ಸರಳ ವಿರಳ ಸಜ್ಜನ.ಕೋಲಾರದ ಸಮೀಪದ ದೇವರಾಯ ಸಮುದ್ರದ ಪಕ್ಕದ ಗ್ರಾಮ ಇವರ ಮೂಲವಾದರೂ ಇವರು ಹುಟ್ಟಿದ್ದು ನಮ್ಮ ಶ್ರೀರಾಂಪುರ ಫೋಲಿಸ್ ಠಾಣೆಯ ಪಕ್ಕದ ಹೆರಿಗೆ ಆಸ್ಪತ್ರೆಯಲ್ಲಿಯೇ.ಇವರು ನಮ್ಮ ದೇವಯ್ಯ ಪಾರ್ಕಿನ ಪಕ್ಕದ ಸರ್ವೋದಯ ಪ್ರೌಢಶಾಲೆಯಲ್ಲಿ ಕಲಿತು ನಂತರ ತಮ್ಮ ಪದವಿ ಶೇಷಾದ್ರಿಪುರಂ ಕಾಲೇಜಿನಲ್ಲಿ ಓದಿ ಎಂ ಕಾಂ ಪಡೆದ ನಂತರ ಸರ್ವೋದಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ ನಂತರ ಶೇಷಾದ್ರಿಪುರಂ ಕಾಂಪೋಸಿಟ್ ಪಿ ಯೂ ಕಾಲೇಜಿಗೆ ಅವರ ಆಗಮನ ಅತ್ಯಂತ ಆರೋಗ್ಯಕರ ಸಂಚಲನವನ್ನು ತಂದವರು.ಉಪನ್ಯಾಸಕನಾಗಿ ಸೇವೆ ಸಲ್ಲಿಸಬೇಕು ಅಂದುಕೊಂಡಿದ್ದವರಲ್ಲ.ಯಾವುದೋ ಸಣ್ಣ ಸಂಸ್ಥೆಯಲ್ಲಿ ಅಕೌಂಟ್ಸ್ ಕೆಲಸಕ್ಕೆ ಸೇರಿದ್ದರೂ ದೇವಿ ಸರಸ್ವತಿ ಅವರಿರಬೇಕಾದ ಕ್ಷೇತ್ರಕ್ಕೆ ಅವರನ್ನು ತಲುಪಿಸಿ ವಿದ್ಯಾರ್ಥಿಗಳ ಪಾಲಿಗೆ ಮಾರ್ಗದರ್ಶಕರಾಗಿ ನಿಲ್ಲಿಸಿದ್ದು ದೇವಿಯ ಅನುಗ್ರಹ.ಹರಿಶ್ಚಂದ್ರ ಘಾಟಿಗೂ ಮರಿಯಪ್ಪನ ಪಾಳ್ಯದ ನಡುವೆ ಇದ್ದ ಮನೆಯಿಂದ ತಾವು ಓದುವಾಗ ಕಾಲೇಜಿಗೆ ನಡೆದೇ ಬಂದು ವಾಪಸ್ಸಾಗುವಾಗ ಸೆಂಟ್ರಲ್ ಇಂದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ ಎಂದಾಗ ನನ್ನ ಕಾಲೇಜು ದಿನಗಳು ನೆನಪಾಯಿತು.ನನ್ನ ಬದುಕಿನ ಮೊದಲ ನಿಲ್ದಾಣ ದೇವಯ್ಯ ಪಾರ್ಕ್ ! ಮಿತಭಾಷಿಯಾದ ಶ್ರೀ.ಜಿ ಕೆ ಮಂಜುನಾಥ್ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳ ಆಸ್ತಿ.ಅವರು ಹೇಳಿದ್ದು ನಮ್ಮ ವಿದ್ಯಾರ್ಥಿಗಳೇ ನಮ್ಮ ಶಿಕ್ಷಣ ಸಂಸ್ಥೆಯ ಆಸ್ತಿ.ಅವರ ಪ್ರೀತಿಯ ಮಾತುಗಳು.ತೋರಿದ ಉಪಚಾರ ಸಜ್ಜನಿಕೆ ಬಹಳ ದೊಡ್ಡದು.ವರ್ಷ 2018ರಲ್ಲಿ  ಶೇಷಾದ್ರಿಪುರದ ಶೇಷಾದ್ರಿಪುರಂ ಕಾಂಪೋಸಿಟ್ ಪಿ ಯು ಕಾಲೇಜಿನಲ್ಲಿ ಆಕಸ್ಮಿಕವಾಗಿ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗುವ ಅವಕಾಶವೂ ಮತ್ತು ಅವಿಸ್ಮರಣೀಯವಾಗಿ ಹತ್ತೇ ಹತ್ತು ನಿಮಿಷಗಳು ಮಾತನಾಡುವ ಅವಕಾಶ ನನಗೆ ಸಿಕ್ಕಿತ್ತು.ಗಾಂಧಿ ಮತ್ತು ಶಾಸ್ತ್ರಿ ಜಯಂತಿ ಸಂಪನ್ನವಾಗಿತ್ತು.

ಸಿ ಎನ್ ರಮೇಶ್

9844295260

Post a Comment

0Comments

Post a Comment (0)