ರಾಜಾಜಿನಗರದ ಶ್ರೀರಾಮ ಮಂದಿರದಲ್ಲಿ ಮಾರ್ಚ್ 30, ಶನಿವಾರ ಸಂಜೆ ಏರ್ಪಡಿಸಿದ್ದ "ಹರಿದಾಸ ನಮನ" ಕಾರ್ಯಕ್ರಮದಲ್ಲಿ ಶ್ರೀಮತಿ ರಮ್ಯಾ ಸುಧೀರ್ ಮತ್ತು ಶ್ರೀಮತಿ ರಂಜಿತಾ ವಿನಯ್ ಇವರುಗಳು ತಮ್ಮದೇ ಆದ ಗಾನ ಸುಧಾ ಸಂಗೀತ ಶಾಲೆಯ ವಿದ್ಯಾರ್ಥಿಗಳೊಂದಿಗೆ ಅಪರೋಕ್ಷ ಜ್ಞಾನಿಗಳಿಂದ ರಚಿಸಲ್ಪಟ್ಟ ದಾಸರ ಪದಗಳನ್ನೂ ಹಾಗೂ ಭಕ್ತಗೀತೆಗಳನ್ನು ಪ್ರಸ್ತುತ ಪಡಿಸಿದರು.
ಇವರ ಗಾಯನಕ್ಕೆ ಶ್ರೀ ಅಮಿತ್ ಶರ್ಮಾ ಕೀ-ಬೋಡ್೯ ವಾದನದಲ್ಲಿ ಮತ್ತು ಶ್ರೀ ಸರ್ವೋತ್ತಮ ತಬಲಾ ವಾದನದಲ್ಲಿ ಸಾಥ್ ನೀಡಿದರು. ನಂತರ ಶ್ರೀರಾಮ ಮಂದಿರದ ಪದಾಧಿಕಾರಿಗಳು ವಿದ್ಯಾರ್ಥಿಗಳಿಗೆ ಪೆನ್ನಿನ ಸೆಟ್ ಗಳನ್ನು ನೀಡಿದರು. ನಂತರ ಎಲ್ಲಾ ಕಲಾವಿದರಿಗೂ ಪ್ರಸಾದ ವಿತರಿಸಿದರು.