ಬೆಂಗಳೂರು: ನಾಮಪತ್ರ ಸಲ್ಲಿಕೆ ಕಾರ್ಯಕ್ರಮವೇ ಮತದಾರರಿಗೆ ಒಂದು ಸ್ಪಷ್ಟ ಸಂದೇಶ ಕೊಡಬೇಕು. ಅದು ವಿಜಯದ ನಾಮಪತ್ರವಾಗಿ ಪರಿವರ್ತನೆ ಆಗಬೇಕೆಂಬ ಪರಿಕಲ್ಪನೆ ನಮ್ಮದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ವಿ.ಸುನೀಲ್ ಕುಮಾರ್ ಅವರು ತಿಳಿಸಿದರು.
ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರ ಹೋಟೆಲ್ ಜಿ.ಎಂ.ರಿಜಾಯ್ಸ್ ನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 14 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ಹಲವು ಜನ ಹಿರಿಯರ ತಂಡ, ಜೆಡಿಎಸ್ ಪ್ರಮುಖರ ತಂಡ ಭಾಗವಹಿಸಲಿದೆ. ಅದಕ್ಕಾಗಿ ಬೇರೆ ಬೇರೆ ತಂಡಗಳನ್ನು ಆಯೋಜನೆ ಮಾಡಿ, 2 ಪಕ್ಷಗಳ ತಂಡವನ್ನು ಕಳಿಸಲಾಗುತ್ತಿದೆ ಎಂದು ವಿವರಿಸಿದರು.
ಏಪ್ರಿಲ್ 1ರಂದು ಬೆಂಗಳೂರು ಕೇಂದ್ರ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಮೋಹನ್ ನಾಮಪತ್ರ ಸಲ್ಲಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಹಿರಿಯರು- ಮುಖಂಡರಾದ ಬಿ.ಎಸ್.ಯಡಿಯೂರಪ್ಪ, ಪ್ರಲ್ಹಾದ್ ಜೋಶಿ, ಡಿ.ವಿ.ಸದಾನಂದ ಗೌಡ, ಆರ್.ಅಶೋಕ್, ಬಸವರಾಜ ಬೊಮ್ಮಾಯಿ, ಸಿ.ಟಿ.ರವಿ, ಅರವಿಂದ ಲಿಂಬಾವಳಿ, ಸುರೇಶ್‍ಕುಮಾರ್, ಜನಾರ್ದನ ರೆಡ್ಡಿ, ಎಸ್.ರಘು, ತಾರಾ ಅನುರಾಧ ಸೇರಿದಂತೆ ಅನೇಕ ಮುಖಂಡರು ಭಾಗವಹಿಸುವರು. ಬನ್ನಪ್ಪ ಪಾರ್ಕಿನಿಂದ ಬಿಬಿಎಂಪಿ ತನಕ ರೋಡ್ ಷೋ ನಡೆಯಲಿದೆ ಎಂದರು.
ಏ.3ರಂದು ಮೈಸೂರು ಕ್ಷೇತ್ರದ ಅಭ್ಯರ್ಥಿ ಯದುವೀರ ಕೃಷ್ಣರಾಜ ಒಡೆಯರ್ ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಮುಖಂಡರಾದ ಪ್ರತಾಪಸಿಂಹ, ಎಂ.ಟಿ.ಬಿ.ನಾಗರಾಜ್, ಮಾಜಿ ಶಾಸಕ ಎನ್.ಮಹೇಶ್, ಮಾಳವಿಕಾ ಅವರು ಪಾಲ್ಗೊಳ್ಳುತ್ತಾರೆ ಎಂದು ವಿವರ ನೀಡಿದರು.
ಅದೇದಿನ ಚಾಮರಾಜನಗರದ ನಮ್ಮ ಅಭ್ಯರ್ಥಿ ಎಸ್.ಬಾಲರಾಜ್ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಬಿ.ವೈ.ವಿಜಯೇಂದ್ರ, ಶ್ರೀನಿವಾಸಪ್ರಸಾದ್, ಎ.ನಾರಾಯಣಸ್ವಾಮಿ, ಡಿ.ವಿ.ಸದಾನಂದಗೌಡ, ಅರವಿಂದ ಲಿಂಬಾವಳಿ, ಶ್ರೀಮತಿ ಶ್ರುತಿ ಅವರು ಉಪಸ್ಥಿತರಿರುವರು. ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸಪೂಜಾರಿ ಅವರು ಕೂಡ 3ರಂದು ಉಡುಪಿಯಲ್ಲಿ ನಾಮಪತ್ರ ಸಲ್ಲಿಸುತ್ತಾರೆ. ಸನ್ಮಾನ್ಯ ವಿ.ಸುನೀಲ್‍ಕುಮಾರ್, ಸಿ.ಟಿ.ರವಿ, ಜೆ.ಸಿ.ಮಾಧುಸ್ವಾಮಿ, ಬಸನಗೌಡ ಪಾಟೀಲ ಯತ್ನಾಳ್, ತೇಜಸ್ವಿ ಸೂರ್ಯ ಅವರು ಭಾಗವಹಿಸುತ್ತಾರೆ ಎಂದರು.
3ರಂದು ತುಮಕೂರಿನ ನಮ್ಮ ಅಭ್ಯರ್ಥಿ ಸೋಮಣ್ಣ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್, ಜನಾರ್ದನ ರೆಡ್ಡಿ, ಶ್ರೀರಾಮುಲು, ಬೈರತಿ ಬಸವರಾಜು, ಜೆ.ಸಿ.ಮಾಧುಸ್ವಾಮಿ, ಜಗ್ಗೇಶ್, ಕುಡಚಿ ರಾಜೀವ್, ವೈ.ಎ.ನಾರಾಯಣಸ್ವಾಮಿ ಅವರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.
3ರಂದು ಬೆಂಗಳೂರು ಉತ್ತರದ ನಮ್ಮ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪ್ರಮುಖರಾದ ಆರ್.ಅಶೋಕ್, ಡಾ.ಅಶ್ವತ್ಥನಾರಾಯಣ, ಬೈರತಿ ಬಸವರಾಜು, ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸುತ್ತಾರೆ ಎಂದು ವಿವರಿಸಿದರು. ಗಣಪತಿ ದೇವಸ್ಥಾನ, ಮೈಸೂರು ಬ್ಯಾಂಕ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ರೋಡ್ ಷೋ ನಡೆಯಲಿದೆ ಎಂದರು.
4ರಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಮಂಗಳೂರಿನ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪ್ರಲ್ಹಾದ್ ಜೋಶಿ, ನಳಿನ್‍ಕುಮಾರ್ ಕಟೀಲ್, ವಿ.ಸುನೀಲ್‍ಕುಮಾರ್, ಸಿ.ಟಿ.ರವಿ, ತಾರಾ ಅನುರಾಧ ಅವರು ಭಾಗವಹಿಸುತ್ತಾರೆ. ಟೌನ್ ಹಾಲ್, ಹಂಪನಕಟ್ಟೆಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ರೋಡ್ ಷೋ ಇರುತ್ತದೆ. 4ರಂದು ಬೆಂಗಳೂರು ಗ್ರಾಮಾಂತರದ ಡಾ.ಸಿ.ಎನ್.ಮಂಜುನಾಥ್ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಎಚ್.ಡಿ.ಕುಮಾರಸ್ವಾಮಿ, ಆರ್.ಅಶೋಕ್, ಸಿ.ಟಿ.ರವಿ, ಡಾ.ಅಶ್ವತ್ಥನಾರಾಯಣ, ಎ.ನಾರಾಯಣಸ್ವಾಮಿ, ಜಿ.ಟಿ.ದೇವೇಗೌಡ, ಸಿ.ಪಿ.ಯೋಗೇಶ್ವರ್, ಎಸ್.ಸುರೇಶ್‍ಕುಮಾರ್, ಶ್ರೀಮತಿ ಶ್ರುತಿ ಮತ್ತಿತರರು ಪಾಲ್ಗೊಳ್ಳುತ್ತಾರೆ ಎಂದು ವಿವರ ನೀಡಿದರು.
4ರಂದು ಬೆಂಗಳೂರು ದಕ್ಷಿಣ ಕ್ಷೇತ್ರದ ತೇಜಸ್ವಿ ಸೂರ್ಯ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮವಿದೆ. ಹಿರಿಯರಾದ ಯಡಿಯೂರಪ್ಪ, ಪ್ರಲ್ಹಾದ್ ಜೋಶಿ, ಆರ್.ಅಶೋಕ್, ಡಾ.ಅಶ್ವತ್ಥನಾರಾಯಣ, ಪ್ರತಾಪಸಿಂಹ, ಸುನೀಲ್‍ಕುಮಾರ್, ಶ್ರೀಮತಿ ತಾರಾ ಅನುರಾಧ ಅವರು ಭಾಗವಹಿಸುವರು.
4ರಂದು ಚಿತ್ರದುರ್ಗದ ಗೋವಿಂದ ಕಾರಜೋಳ ಅವರ ನಾಮಪತ್ರ ಸಲ್ಲಿಕೆ ನಡೆಯಲಿದೆ. ಮಾನ್ಯರಾದ ಯಡಿಯೂರಪ್ಪ, ಮಾಧುಸ್ವಾಮಿ, ಜನಾರ್ದನ ರೆಡ್ಡಿ, ವೈಎ.ನಾರಾಯಣಸ್ವಾಮಿ, ಎನ್. ರವಿಕುಮಾರ್,ವೈ.ಎ.ನಾರಾಯಣಸ್ವಾಮಿ, ತಿಪ್ಪಾರೆಡ್ಡಿ, ಚಿದಾನಂದಗೌಡ, ರಾಜೇಶ್ ಗೌಡ ಅವರು ಭಾಗವಹಿಸುತ್ತಾರೆ. ಅದೇದಿನ ಚಿಕ್ಕಬಳ್ಳಾಪುರದ ನಮ್ಮ ಅಭ್ಯರ್ಥಿ ಡಾ. ಸುಧಾಕರ್ ಅವರ ನಾಮಪತ್ರ ಸಲ್ಲಿಕೆ ನಡೆಯುತ್ತದೆ. ಈ ಸಂದರ್ಭದಲ್ಲಿ ಯಡಿಯೂರಪ್ಪ, ಅಶೋಕ್, ಮುನಿರತ್ನ, ಬೈರತಿ ಬಸವರಾಜು, ಎಂ.ಟಿ.ಬಿ.ನಾಗರಾಜ್, ಜನಾರ್ದನ ರೆಡ್ಡಿ, ಅರವಿಂದ ಲಿಂಬಾವಳಿ, ಛಲವಾದಿ ನಾರಾಯಣಸ್ವಾಮಿ, ವೈಎ.ನಾರಾಯಣಸ್ವಾಮಿ, ಎಸ್.ಮುನಿರಾಜು, ಶ್ರೀಮತಿ ತಾರಾ ಅನುರಾಧ ಅವರು ಭಾಗವಹಿಸುವರು ಎಂದು ತಿಳಿಸಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 26ರಂದು ನಡೆಯುವ ಮತದಾನಕ್ಕೆ ಸಂಬಂಧಿಸಿ ಪ್ರಚಾರಕ್ಕೆ ಎಲ್ಲ ಸಿದ್ಧತೆಗಳನ್ನು ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಿನ್ನೆ ಆರಂಭವಾಗಿ ನಮ್ಮ ಮೊದಲ ಹಂತದ 14 ಜನ ಅಭ್ಯರ್ಥಿಗಳಿಗೂ ನಾಮಪತ್ರ ಸಲ್ಲಿಕೆಗೆ ಬೇಕಾದ ಒಳ್ಳೆಯ ತಯಾರಿಯನ್ನು ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದರು.
ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ಸಾಮಾಜಿಕ ಜಾಲತಾಣ ರಾಜ್ಯ ಸಂಚಾಲಕ ಪ್ರಶಾಂತ್ ಮಾಕನೂರು, ರಾಜ್ಯ ವಕ್ತಾರರಾದ ಮೋಹನ್ ವಿಶ್ವ, ಕು. ಸುರಭಿ ಹೊದಿಗೆರೆ ಅವರು ಭಾಗವಹಿಸಿದ್ದರು.