ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಕೆಲ ಹಳ್ಳಿಗಳಲ್ಲಂತೂ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಆತಂಕ ಎದುರಾಗಿದೆ. ಜಾನುವಾರು, ಕುರಿ, ಮೇಕೆಗಳಿಗೂ ಸಮಸ್ಯೆಯ ಬಿಸಿ ತಟ್ಟುತ್ತಿದೆ. ತಾಲ್ಲೂಕಿನ ಬಡೇಲಡಕು, ಅಲೂರು, ಕಾತ್ರಿಕೆಹಟ್ಟಿ, ಗುಡೇಕೋಟೆ, ನಾಗರಹುಣಸೆ, ಕಾನಮಡುಗು, ಮಾಲೂರು, ಆಲೂರು ಗೊಲ್ಲರಹಟ್ಟಿ, ಸಂಕ್ಲಾಪುರ ಗೊಲ್ಲರಹಟ್ಟಿ, ಸಕಲಾಪುರದಹಟ್ಟಿ, ಯರಗುಂಡ್ಲಹಟ್ಟಿ, ಬೆಳೆಕಟ್ಟೆ, ತಾಯಕನಹಳ್ಳಿ, ಮೊರಬಾನಹಳ್ಳಿ, ಮೊರಬ, ಬೀರಲಗುಡ್ಡ ಗ್ರಾಮಗಳಲ್ಲಿ ತೀವ್ರ ನೀರಿನ ಸಮಸ್ಯೆ
ಕಾಣಿಸಿಕೊಂಡಿದೆ. ಈ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ಜನರಿಗೆ ನೀರು ಪೂರೈಕೆ ಮಾಡಲಾಗುತ್ತಿದೆ.
ಆಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದಲೂ ಬಾಡಿಗೆ ಕೊಳವೆ ಬಾವಿಯಿಂದಲೇ ನೀರು ಪೂರೈಸಲಾಗುತ್ತಿದೆ. 2023ರ ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೆ 3 ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು, ಕೇವಲ 10ರಲ್ಲಿ ನೀರು ಸಿಕ್ಕಿರೆ ಇದರಿಂದ ಹೊಸ ಕೊಳವೆ ಬಾವಿ ಕೊರೆಸುವ ಬದಲು ಗ್ರಾಮಗಳ ಪಕ್ಕದಲ್ಲಿನ ರೈತರ ಕೊಳವೆ ಬಾವಿಗಳನ್ನೇ ಬಾಡಿಗೆ ಪಡೆದು ನೀರು ಪೂರೈ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಒಟ್ಟು 132 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅವುಗಳಲ್ಲಿ 121 ಘಟಕಗಳು ಕಾರ್ಯನಿರ್ವ ಹಿಸುತ್ತಿವೆ. ಆದರೆ ನೀರಿನ ಕೊರತೆಯಿಂದ ಅನೇಕ ಕಡೆ ಶುದ್ಧ ನೀರು ಸಿಗುತ್ತಿಲ್ಲ. ವಿವಿಧ ಕಾರಣಗಳಿಂದ 11 ಘಟಕಗಳು ಸ್ಥಗಿತಗೊಂಡಿವೆ.
ತುಂಗಭದ್ರಾ ನದಿಯಿಂದ ಉಜ್ಜನಿ ಸೇರಿದಂತೆ ತಾಲ್ಲೂಕಿನ 217 ಹಳ್ಳಿಗಳಿಗೆ ಪ್ಲೋರೈಡ್ ಮುಕ್ತ ಹಾಗೂ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಿ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಯೋಜನೆ ಬದಲಾದ ಹಿನ್ನೆಲೆಯಲ್ಲಿ ಕಾಮಗಾರಿ ಕುಂಟುತ್ತ ಸಾಗಿರುವುದಂತು ದಿಟ.