BIG NEWS ನಮ್ಮ ಖಾತೆಯಲ್ಲಿನ ಹಣ ಫ್ರೀಜ್ ಮಾಡಿ, ಕಾಂಗ್ರೆಸ್ ಕುಗ್ಗಿಸಲು ಯತ್ನಿಸುತ್ತಿರುವ ಬಿಜೆಪಿ: ಸೋನಿಯಾ ಆರೋಪ

VK NEWS
By -
0

ನವದೆಹಲಿ : ನವದೆಹಲಿ ಈಗಾಗಲೇ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸೋನಿಯಾ ಗಾಂಧಿ ಅವರು ಬಿಜೆಪಿ ವಿರುದ್ಧ ಆರೋಪ ಮಾಡಿದ್ದು, ದೇಶದ ಚುನಾವಣಾ ಚಂದಾ ಬಾಂಡ್ ಗಳು ಕಾನೂನು ಬಾಹಿರ ಎಂದು ನ್ಯಾಯಾಲಯ ಹೇಳಿದೆ. ಹೆಚ್ಚು ಹಣ ಬಿಜೆಪಿಗೆ ಬಂದಿದೆ. ಜೊತೆಗೆ, ವಿಪಕ್ಷಗಳಿಗೆ ತಮ್ಮ ಖಾತೆಯಲ್ಲಿರುವ ಹಣ ಬಳಕೆ ಮಾಡಲು ಸರ್ಕಾರ ಬಿಡ್ತಾ ಇಲ್ಲ. ಇದು ಕಾಂಗ್ರೆಸ್ ಮೇಲೆ ಪರಿಣಾಮ ಬೀರುವುದಿಲ್ಲ. ಇಡೀ ಪ್ರಜಾಪ್ರಭುತ್ವದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿನ ಚುನಾವಣಾ ಚಂದಾ ಬಾಂಡ್ ಗಳು ಕಾನೂನು ಬಾಹಿರ ಎಂದು ಈಗಾಗಲೇ ನ್ಯಾಯಾಲಯವೇ ಹೇಳಿಕೆನೀಡಿವೆ. 

ಅಂತೆಯೇ, ಚುನಾವಣಾ ಬಾಂಡ್‍ಗಳಿಂದ ಬಿಜೆಪಿಗೆ ಹೆಚ್ಚು ಹಣ ಬಂದಿದೆ. ವಿಪಕ್ಷಗಳಿಗೆ ತಮ್ಮ ಖಾತೆಯಲ್ಲಿರುವ ಹಣ ಬಳಕೆ ಮಾಡಲು ಸರಕಾರ ಬಿಡ್ತಾ ಇಲ್ಲ. ಈ ಸಮಸ್ಯೆಯು ಕೇವಲ ಕಾಂಗ್ರೆಸ್ಸಿನ ಮೇಲೆ ಪರಿಣಾಮ ಯಾವುದೇ ಬೀರುವುದಿಲ್ಲ. ಇದು ನಮ್ಮ ಪ್ರಜಾಪ್ರಭುತ್ವದ ಮೇಲೆ ಪರಿಣಾಮ ಬೀರಲಿದೆ. ಕಾಂಗ್ರೆಸ್ ಪಕ್ಷವನ್ನ ಆರ್ಥಿಕವಾಗಿ ಕುಗ್ಗಿಸಲು ಪ್ರಧಾನಿಯವರಿಂದ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕರಿಂದ ಸಂಗ್ರಹಿಸಿದ ಹಣ ಸ್ಥಗಿತಗೊಳಿಸಲಾಗಿದೆ. ನಮ್ಮ ಖಾತೆಯ ಹಣವನ್ನು ಬಲವಂತವಾಗಿ ತೆಗೆಯುತ್ತಿದ್ದಾರೆ. ಈ ಸವಾಲಿನ ನಡುವೆಯೂ ಸಹ, ನಮ್ಮ ಚುನಾವಣಾ ಪ್ರಚಾರದ ಕಾರ್ಯವೂ ಚೆನ್ನಾಗಿಯೇ ಇರಲಿದೆ. 

ಸುಪ್ರೀಂ ಕೋರ್ಟ್‍ನಿಂದ ಅಸಾಂವಿಧಾನಿಕ ಎಂದು ಹೇಳಲಾದ ಎಲೆಕ್ಟೊರಲ್ ಬಾಂಡ್ ಸಮಸ್ಯೆ ಇದೆ. ಎಲೆಕ್ಟೊರಲ್ ಬಾಂಡ್‍ಗಳು ಬಿಜೆಪಿಗೆ ಭಾರಿ ಲಾಭ ಮಾಡಿದೆ ಎಂದು ಅವರು ತಿಳಿಸಿದರು.

ನಂತರ ಕಾಂಗ್ರೆಸ್ ನಾಯಕ ಅಜೆಯ್ ಮಾಕೇನ್ ಅವರು ಮಾತನಾಡುತ್ತ, ಭಾರತದ ಪ್ರಜಾಪ್ರಭುತ್ವ ಮೇಲೆ ದಾಳಿಯಾಗಿದೆ. ಚುನಾವಣೆ ನಡೆಸಲು ಹಣ ಇರದಂತೆ ವ್ಯವಸ್ಥೆ ಮಾಡಿರುವುದು ಮತ್ತು ನಮ್ಮ ಖಾತೆಯಲ್ಲಿನ ಹಣ ಬಳಕೆಗೆ ನಮ್ಮಗೆ ಅವಕಾಶ ನೀಡುತ್ತಿಲ್ಲ. ಜಾಹೀರಾತು ನೀಡಲೂ ಸಾಧ್ಯವಾಗದ ಪರಿಸ್ಥಿತಿ ಬಂದೊಗಿದೆ. ಅಭ್ಯರ್ಥಿಗಳಿಗೆ ಹಣ ನೀಡಲು ಸಾಧ್ಯವಾಗುತ್ತಿಲ್ಲ. ಹೀಗೆಲ್ಲ ನಿರ್ಬಂಧ ಹಾಕಿದಲ್ಲಿ ಚುನಾವಣೆ ಮಾಡುವುದು ಯಾಕೆ. ಸೀತಾರಾಮನ್ ಕೇಸರಿ ಸಮಯದ ನೋಟಿಸ್ ಈಗ ನೀಡಲಾಗುತ್ತಿದೆ ಎಂದರು.

ಹೀಗೆಯೇ ಆದರೆ ಗಾಂಧಿ ಕಾಲದ ವಿಚಾರದಲ್ಲಿ ನೋಟಿಸ್ ನೀಡಬಹುದು. 30-40 ವರ್ಷಗಳ ಹಿಂದಿನ ವಿಷಯಗಳಿಗೆ ನೋಟಿಸ್ ನೀಡಲಾಗುತ್ತದೆ. ಅದು ಚುನಾವಣೆ ಸಂದರ್ಭದಲ್ಲಿ ನೋಟಿಸ್ ನೀಡಿ ಅಕೌಂಟ್ ಫ್ರೀಜ್ ಮಾಡಲಾಗಿದೆ. ಯಾವ ಪಕ್ಷವೂ ಆದಾಯ ತೆರಿಗೆ ಕಟ್ಟುವುದಿಲ್ಲ. ಆದರೆ ಕಾಂಗ್ರೆಸ್‍ಗೆ ಮಾತ್ರ ಯಾಕೆ ನೋಟಿಸ್ ನೀಡಲಾಗುತ್ತಿದೆ. 14.40 ಲಕ್ಷ ರೂ.ತೆರಿಗೆ ಬಾಕಿ ಉಳಿಸಿಕೊಂಡಿದೆ. ಇದಕ್ಕೆ ಕಾಂಗ್ರೆಸ್ ಮೇಲೆ 210 ಕೋಟಿ ರೂ. ದಂಡ ವಿಧಿಸಿದ್ದಾರೆ. ಇದು ಯಾವ ರೀತಿ ಪ್ರಜಾಪ್ರಭುತ್ವ ಎಂದೂ ಅಜೆಯ್ ಮಾಕೇನ್ ಅವರು ವಾಗ್ದಾಳಿ ನಡೆಸಿದ್ದಾರೆ.


Post a Comment

0Comments

Post a Comment (0)