ದ್ವಿಭಾಷಾ ನೀತಿಗಾಗಿ ಸಾರ್ವಜನಿಕ ಹಕ್ಕೊತ್ತಾಯ ಸಭೆ

VK NEWS
By -
0

ಕರ್ನಾಟಕ ರಾಜ್ಯದ ಪಠ್ಯಕ್ರಮದಲ್ಲಿ ದ್ವಿಭಾಷಾ ನೀತಿ ಅಳವಡಿಕೆಗೆ ಒತ್ತಾಯಿಸಿ ನಮ್ಮ ನಾಡು ನಮ್ಮ ಆಳ್ವಿಕೆ ವೇದಿಕೆಯು ಇದೇ ಭಾನುವಾರ ಸಾರ್ವಜನಿಕ ಹಕ್ಕೊತ್ತಾಯ ಸಭೆಯನ್ನು ಆಯೋಜಿಸಿದೆ. ಎರಡು ನುಡಿ - ಜಾಗೃತಿಯ ಕಿಡಿ ಹೆಸರಿನಲ್ಲಿ ಈ ಕಾರ್ಯಕ್ರಮದಲ್ಲಿ ದ್ವಿಭಾಷಾ ನೀತಿಗಾಗಿ ನಮ್ಮ ವೇದಿಕೆಯ ಪರವಾಗಿ ಡಾ.ರಮೇಶ್ ಬೆಲ್ಲಂಕೊಂಡ ಹಾಗೂ ಶ್ರೀ ಆನಂದ್ ಜಿ ಅವರು ಹಕ್ಕೊತ್ತಾಯ ಮಂಡನೆ ಮಾಡಲಿದ್ದಾರೆ. 


ಕವಿರಾಜ್ (ಚಲನಚಿತ್ರ ನಿರ್ದೇಶಕ/ಸಾಹಿತಿ) ಮತ್ತು ಬಿ.ಎಂ.ಗಿರಿರಾಜ್ (ರಂಗಭೂಮಿ ಮತ್ತು ಚಲನಚಿತ್ರ ನಿರ್ದೇಶಕ) ಸಾರ್ವಜನಿಕ ಸಂವಾದ ನಡೆಸಿಕೊಡುವರು. 

ಡಾ. ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷರುಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯಕ್ರಮದ ವಿಶೇಷ ಆಹ್ವಾನಿತರು. 

ಈ ಸಭೆಯು ದ್ವಿಭಾಷಾ ನೀತಿಯ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವ ಮತ್ತು ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶವನ್ನು ಹೊಂದಿದೆ.

ಕಾರ್ಯಕರ್ಮದ ಆಹ್ವಾನ ಪತ್ರಿಕೆಯನ್ನು ಈ ಪತ್ರದೊಂದಿಗೆ ಲಗತ್ತಿಸಲಾಗಿದೆ. ಈ ಕಾರ್ಯಕ್ರಮಕ್ಕೆ ತಮ್ಮ ಪತ್ರಿಕೆಯ/ಮಾಧ್ಯಮದ ವರದಿಗಾರರನ್ನು ನಿಯೋಜಿಸಿ ಕಾರ್ಯಕ್ರಮದ ವರದಿಯನ್ನು ಪ್ರಕಟಿಸುವಂತೆ/ಬಿತ್ತರಿಸುವಂತೆ ಕೋರಿಕೊಳ್ಳುತ್ತೇವೆ. 

ಕಾರ್ಯಕ್ರಮದ ದಿನಾಂಕ: ಮಾರ್ಚ್ 16, 2025, ಭಾನುವಾರ  

ಸಮಯ: ಸಂಜೆ ರಿಂದ ಗಂಟೆವರೆಗೆ , ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣಚಾಮರಾಜಪೇಟೆಬೆಂಗಳೂರು. 

Post a Comment

0Comments

Post a Comment (0)