ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ತಾಲ್ಲೂಕು ಹೊಳಲೂರು ಹೋಬಳಿ, ಕುಂಚೇನಹಳ್ಳಿ ಗ್ರಾಮದ ಸರ್ವೆ ನಂ. 80ರ ಕುಂಚೇನಹಳ್ಳಿ ರಾಜ್ಯ ಅರಣ್ಯ ಪ್ರದೇಶದ ಒಟ್ಟು ವಿಸ್ತೀರ್ಣ 1380 ಎಕರೆ ಅರಣ್ಯ ಪ್ರದೇಶದ ಪೈಕಿ 05 ಎಕರೆ 50 ಗುಂಟೆ ಅರಣ್ಯ ಪ್ರದೇಶವನ್ನು ಅದೇ ಗ್ರಾಮದ ಅರುಣಾಬಾಯಿ ಕೋಂ ಸತೀಶ್‍ನಾಯ್ಕ ಎಂಬುವವರು ಒತ್ತುವರಿ ಮಾಡಿ ಮೆಕ್ಕೆಜೋಳ ಬೆಳೆ ಬೆಳೆದಿರುತ್ತಾರೆ ಎಂದು ದೂರುದಾರರಾದ ಶಿವಮೊಗ್ಗ ಶಂಕರ ವಲಯದ ಕುಂಚೇನಹಳ್ಳಿ ಶಾಖೆಯ ವಲಯ ಅರಣ್ಯಾಧಿಕಾರಿ ಆರೋಪಿಸಿ ದೂರು ನೀಡಿದ್ದರು.
ಕರ್ನಾಟಕ ಭೂ ಕಬಳಿಕೆ ನಿμÉೀಧ ವಿಶೇಷ ನ್ಯಾಯಾಲಯವು ಈ ಪ್ರಕರಣವನ್ನು ಎಲ್.ಜಿ.ಸಿ.(ಜಿ) ಸಂಖ್ಯೆ: 1718/2019 ಎಂದು ದಾಖಲಿಸಿಕೊಂಡು ಸಂಪೂರ್ಣ ಸಾಕ್ಷ್ಯ ವಿಚಾರಣೆಯನ್ನು ನಡೆಸಿದ ನಂತರ ಆರೋಪಿತರು ಕುಂಚೇನಹಳ್ಳಿ ರಾಜ್ಯ ಅರಣ್ಯ ಜಮೀನನ್ನು ಭೂ ಕಬಳಿಕೆ ಮಾಡಿರುವುದು ಸಾಬೀತಾದ ಕಾರಣ ಆರೋಪಿತರಿಗೆ 01 ವರ್ಷ ಸಾದಾ ಶಿಕ್ಷೆ ಮತ್ತು ರೂ.10,000/- ರೂಪಾಯಿ ದಂಡವನ್ನು ವಿಧಿಸಿ, ದಂಡ ಪಾವತಿಸಲು ತಪ್ಪಿದ್ದಲ್ಲಿ 03 ತಿಂಗಳ ಸಾದಾ ಶಿಕ್ಷೆಯನ್ನು 02ನೇ ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯರಾದ ಪಾಟೀಲ ನಾಗಲಿಂಗನಗೌಡ ಮತ್ತು ಕಂದಾಯ ಸದಸ್ಯರಾದ ಕೆ.ಹೆಚ್. ಅಶ್ವತ್ಥ ನಾರಾಯಣಗೌಡ ರವರು ಇದ್ದ ಪೀಠವು 2025ರ ಫೆಬ್ರವರಿ 11 ರಂದು ತೀರ್ಪು ನೀಡಿರುತ್ತದೆ.
ಆರೋಪಿತರು ಒತ್ತುವರಿ ಮಾಡಿಕೊಂಡ ಅರಣ್ಯ ಜಮೀನನ್ನು ಕೂಡಲೇ ತೆರವುಗೊಳಿಸುವಂತೆ ಆದೇಶಿಸಿ, 60 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಶಂಕರ ವಲಯದ ವಲಯ ಅರಣ್ಯಾಧಿಕಾರಿಗೆ ನಿರ್ದೇಶಿಸಿ ತೀರ್ಪನ್ನು ನೀಡಿರುತ್ತದೆ ಎಂದು ಕರ್ನಾಟಕ ಭೂ ಕಬಳಿಕೆ ನಿμÉೀಧ ವಿಶೇಷ ನ್ಯಾಯಾಲಯದ ವಿಲೇಖನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.