ಈಗಾಗಲೇ ತಮಗೆಲ್ಲಾ ತಿಳಿದಿರುವ ಹಾಗೆ ಎಕೆಬಿಎಂಎಸ್‌ನ ಚುನಾವಣೆ ಸದ್ದು ಆರಂಭಗೊAಡಿದೆ. ಚುನಾವಣೆ ಎಂದರೆ ಅಲ್ಲೂ ಕೆಲವೊಂದು ವಿಷಯಗಳು ಚರ್ಚೆಯಾಗುವುದು ಸಹಜ.
ಇತ್ತೀಚೆಗೆ ಎಕೆಬಿಎಂಎಸ್‌ನ ಚುನಾವಣೆ ಸಂಬ0ಧ ಕೆಲ ಮಧ್ವ ಮುಖಂಡರು ಗುಪ್ತ ಸಭೆ ನಡೆಸಿ ಪ್ರತಿ ಬಾರಿ ಎಕೆಬಿಎಂಎಸ್ ಗೆ ಚುನಾವಣೆ ನಡೆಯುವಾಗ ಮಧ್ವರನ್ನು ಕಡೆಗಣಿಸುತ್ತ ಬಂದಿದ್ದು, ಈ ಬಾರಿ ನಡೆಯಲಿರುವ ಚುನಾವಣೆಯಲ್ಲಿ ನಾವು ಇದ್ದಿವಿ ಎಂಬ ಮಾತುಗಳನ್ನಾಡಿರುವುದು ಗುಸುಗುಸು ಸುದ್ದಿಯಾಗಿದೆ. ಅಂತೆಯೇ, ಇತ್ತ ಮಧ್ವ ಮತದಾರ ಬಂಧುಗಳು ಸಭೆ ನಡೆಸಿ ನಮ್ಮ ಮಧ್ವ ಕಡೆಯಿಂದ ಶ್ರೀ ಸುಧೀಂದ್ರ ರಾವ್ ಅವರು ಸ್ಪರ್ಧಿಸಲಿ ಎಂದು ಸಭೆಯಲ್ಲಿ ತೀರ್ಮಾನಿಸಿರುವುದೂ ಉಂಟು.
ಶ್ರೀ ಸುಧೀಂದ್ರರಾವ್ ಅವರು ಕಳೆದ 35 ವರ್ಷಗಳಿಂದ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಉಳಿತಿಗಾಗಿ ಸೇವೆಯನ್ನು ಸಲ್ಲಿಸಿದ್ದು ಅವರು ನಮ್ಮ ಬ್ರಾಹ್ಮಣ ಸಮುದಾಯದಲ್ಲಿ ಚಿರಪರಿಚಿತರಾಗಿದ್ದು ಅವರು ಸ್ಪರ್ಧಿಸಲಿ ಎಂದು ಒತ್ತಾಯಿಸಿದ್ದಾರೆ.ಶ್ರೀ N.S. ಸುಧೀಂದ್ರ ರಾವ್ ಅವರು ಪ್ರಸ್ತುತ ಅಖಿಲ ಕರ್ನಾಟಕ ಮಧ್ವ ಮಹಾಸಭಾ ಸಂಘಟನಾ ಕಾರ್ಯದರ್ಶಿ, ಅಕ್ಷಯ ವಿಪ್ರ ಮಹಾಸಭಾದ ಪ್ರಧಾನ ಕಾರ್ಯದರ್ಶಿ, ವೈಧಿಕ ಧರ್ಮ ಪರಿಪಾಲನ ಸಭಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಹಿರಿಯ ಪತ್ರಕರ್ತರು ಸಹ ಆಗಿದ್ದು ಚಿರಪರಿಚಿತರಾಗಿದ್ದಾರೆ.
ಒಟ್ಟಾರೆ ಮಧ್ವರ ಬಗ್ಗೆ ಎಕೆಬಿಎಂಎಸ್‌ನಲ್ಲಿ ಕೆಲ ದೋಷಪೂರಿತ ಚರ್ಚೆಗಳು ನಡೆಯುತ್ತಿರುವುದಂತೂ ದಿಟ. ಈಗ ಬಂದಿರುವ ಮಾಹಿತಿಯಂತೆ ಸಂಭವನೀಯ ಪಟ್ಟಿಯಲ್ಲಿ ಸುಧಿಂದ್ರ ಅವರ ಹೆಸರು ಮುಂಚೂಣಿಯಲ್ಲಿರುವುದು ಮೇಲ್ನೊಟಕ್ಕೆ ಕಂಡುಬAದಿದೆ.
ಈ ಗೊಂದಲಗಳ ಗೂಡಲ್ಲಿ ಇನ್ನೂ ಯರ‍್ಯಾರು ಚುನಾವಣಾ ಅಖಾಡಕ್ಕೆ ಧುಮುಕಲಿದ್ದಾರೆ ಕಾದು ನೋಡಬೇಕಿದೆ. ಚುನಾವಣೆ ಕಾವೇರುವ ಮುಂಚೆ ಕಾಲವೇ ಸೂಕ್ತ ಉತ್ತರ ನೀಡಲಿದೆ.