ಜಿಲ್ಲಾ ಸೈಬರ್ ಪೋಲೀಸರ ಕಾರ್ಯಾಚರಣೆ ಡ್ರಗ್ ಪೆಡ್ಲರ್ ಬಂಧನ 50 ಲಕ್ಷ ಬೆಲೆಯ MDMA ವಶ

VK NEWS
By -
0

ಕೋಲಾರ. ಜಿಲ್ಲಾ ಅಪರಾಧ ವಿಭಾಗದ ಪೋಲೀಸರು ರಾಷ್ರ್ಟೀಯ ಹೆದ್ಧಾರಿ ಮಡೇರಹಳ್ಳಿಯ ಸಮೀಪ ಬೆಂಗಳೂರು ಸೂಲದೇವನಹಳ್ಳಿಯ ಮೂಲದ ಸೈಯದ್ ಫುರ್ಖಾನ್ ಎಂಬಾತನನ್ನು ಬಂಧಿಸಿ ಆತನಿಂದ ಸುಮಾರು ಐವತ್ತು ಲಕ್ಷ ರೂ. ಬೆಲೆಯ 806 ಗ್ರಾಂ ತೂಕದ ಡಿಜೈನರ್ ಡ್ರಗ್ ಮಾಧಕ ವಸ್ತು ( MDMA) ಹಾಗೂ KTM ಬೈಕೊಂದನ್ನು  ವಶಪಡಿಸಿಕೊಂಡಿದ್ದಾರೆ.

ಆರೋಪಿ ಸೈಯದ್ ಫುರ್ಖಾನ್ ನೈಜಿರಿಯಾ ಹಾಗೂ ಇತರೆ ಬೇರೆ ಬೇರೆ ಕಡೆಗಳಿಂದ MDMA ಮಾಧಕ ವಸ್ತುವನ್ನು ಕಡಿಮೆ ಬೆಲೆಗೆ ಪಡೆದು ಸಣ್ಣ ಸಣ್ಣ ಪ್ಯಾಕೇಟುಗಳಾಗಿ ಮಾಡಿ ಹೆಚ್ಚಿನ ಬೆಲೆಗೆ ಕಾಲೇಜುಗಳ ಬಳಿ  ಹುಡುಗರಿಗೆ ಮಾರಾಟ ಮಾಡುತ್ತಿದ್ದನೆನ್ನಲಾಗಿದೆ.

ಸುದ್ಧಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೋಲೀಸು ವರಾಷ್ಠಾಧಿಕಾರಿ ನಿಖಿಲ್ ಈ MDMA ಮಾಧಕ ಪದಾರ್ಥವು ಜಿಲ್ಲಾ  ಪೋಲೀಸು ಇತಿಹಾಸಲ್ಲಿ ಮೊದಲ ಭಾರಿಗೆ ಇಷ್ಟೊಂದು ದೊಡ್ಡ ಮೊತ್ತದ ಹಾಗೂ ಹೆಚ್ಚು ಬೆಲೆ ಬಾಳುವ ಮಾಧಕ ಪದಾರ್ಥವಾಗಿದ್ದು  ಆರೋಪಿ ಸೈಯದ್ ಫುರ್ಖಾನ್  ನನ್ನು ಸೆರೆ ಹಿಡಿಯುವಲ್ಲಿ ಜಿಲ್ಲಾ ಸೈಬರ್ ಇನ್ಸ್ ಫೆಕ್ಟರ್ ಜಗದೀಶ್ ಸಿಬ್ಬಂಧಿಗಳಾದ ಅಂಬರೀಶ್ ˌ ಶಿವಾನಂದˌ ಆನಂದ ಕುಮಾರ್ˌಹಾಗೂ ಅರುಣ್ ಕುಮಾರ್ ರವರನ್ನು ಶ್ಲಾಘಿಸಿದ್ದಾರೆ.


ಈ ರೀತಿಯ MDMA ಡಿಜೈನರ್ ಡ್ರಗ್ ನ್ನು ಹದಿಹರೆಯದ ಶ್ರೀಮಂತ ಹುಡುಗರು ಸೇರುವ ರೇವು ಪಾರ್ಟಿ, ಕ್ಲಬ್ ಗಳು ˌ ಹಾಗೂ ಐಷಾರಾಮಿ ರೆಸಾರ್ಟ್ ಗಳನ್ನು ಉಪಯೋಗಿಸುವ ಡಜೈನರ್ ಡ್ರಗ್ MDMA ಎನ್ನಲಾಗಿದೆ.

Post a Comment

0Comments

Post a Comment (0)