ಚಾಮರಾಜಪೇಟೆ ಮಾಧ್ವ ಸಂಘದ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಮಧ್ವ ಮಹಾಸಭಾ (ರಿ) ಮಧ್ವ ಸ್ನೇಹ ಮಿಲನ ಕಾರ್ಯಕ್ರಮ ಮತ್ತು ಅಧ್ಯಕ್ಷೀಯ ಅಭ್ಯರ್ಥಿ ಎಸ್.ರಘುನಾಥ್ ರವರ ಚುನಾವಣೆ ಪ್ರಚಾರ ಸಭೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷರಾದ ಡಾ||ಎಂ.ಆರ್.ವಿ.ಪ್ರಸಾದ್ ರವರು, ಎ.ಕೆ.ಬಿ.ಎಂ.ಎಸ್ ಚುನಾವಣೆಯ ಅಧ್ಯಕ್ಷೀಯ ಅಭ್ಯರ್ಥಿಯಾದ ಎಸ್.ರಘುನಾಥ್ ರವರು ಮತ್ತು ನಿಕಟಪೂರ್ವ ಹಿರಿಯ ಉಪಾಧ್ಯಕ್ಷರಾದ ಆರ್.ಲಕ್ಷ್ಮಿಕಾಂತ್ ರವರು, ಸಾಹಿತಿ ಕೆ.ಪಿ.ಪುತ್ತುರಾಯರವರ, ಬಡಗನಾಡು ಸಂಘದ ಅಧ್ಯಕ್ಷರಾದ ಚಿದಾನಂದ್ ಯಜ್ಞವಲ್ಕ ಸಂಘದ ವೇಣುಗೋಪಾಲ್ ಬಬ್ಬೂರುಕೆಮ್ಮೆ ಸೇವಾ ಸಮಿತಿ ಕಾರ್ಯದರ್ಶಿ ಸತ್ಯಪ್ರಕಾಶ್, ಡಾ||ಸತ್ಯನಾರಾಯಣ್, ಸುಬ್ಬಲಕ್ಷ್ಮಿ ಶರ್ಮ, ಜೆ.ಸು.ನಾಗಾರಾಜ್, ಸುದರ್ಶನ್, ಶ್ರೀಧರ್ ದಿಕ್ಷೀತ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.ಡಾ||ಎಂ.ಆರ್.ವಿ.ಪ್ರಸಾದ್ ರವರು ಸರಳ ಸಜ್ಜನ ವ್ಯಕ್ತಿತ್ವದ ಎಸ್.ರಘುನಾಥ್ ರವರು ಅಧ್ಯಕ್ಷರಾಗುವುದು ಸೂಕ್ತ ಆಯ್ಕೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರ ನಿಕಟ ಸಂಪರ್ಕದಿಂದ ಮಹಾಸಭಾಗೆ ಮುಕ್ಕಾಲು ಎಕರೆ ಜಾಗವನ್ನು ನೀಡಿದರು.
ಅ ಜಾಗದಲ್ಲಿ ಸಮುದಾಯ ಕಟ್ಟಬೇಕು.
ಎಸ್.ರಘುನಾಥ್ ರವರಿಗೆ ಉತ್ಸಾಹ ಮತ್ತು ಶಕ್ತಿ ಇದೆ ಬ್ರಾಹ್ಮಣ ಅಭಿವೃದ್ದಿ, ಏಳಿಗೆ ಇವರ ನೇತೃತ್ವದಲ್ಲಿ ನಡೆಯುತ್ತದೆ ಎಂದು ಹೇಳಿದರು. ಅಧ್ಯಕ್ಷೀಯ ಅಭ್ಯರ್ಥಿ ಎಸ್.ರಘುನಾಥ್ ರವರು ಮಾತನಾಡಿ, ಬ್ರಾಹ್ಮಣ ಜನಾಂಗದ ಶೈವ, ವೈಷ್ಣವ, ಮಾಧ್ವ ಎಲ್ಲ ಉಪಪಂಗಡಗಳ ಎಲ್ಲರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಲ್ಲಿ ಸದಸ್ಯರಿದ್ದಾರೆ.
ಬ್ರಾಹ್ಮಣ ಸಮುದಾಯ ಸಂಘಟನೆ ಮತ್ತು ಸಹಕಾರ ನೀಡಲು ವಿಶ್ವವಿಪ್ರತೇಯಿ ಸಂಘಟನೆ ಮತ್ತು ಶಿಕ್ಷಣ ಕ್ಷೇತ್ರ, ವಿದ್ಯಾರ್ಥಿ ವೇತನ ಹಾಗೂ ಅರ್ಚಕರು, ಪಂಡಿತರಿಗೆ ಕೊರೋನ ಸಂದರ್ಭದಲ್ಲಿ ಸಹಾಯಹಸ್ತ ನೀಡಿ ಸಂಘದಿಂದ ಸಹಕಾರ ನೀಡಲಾಯಿತು.
ಸಮಾಜ ಸೇವೆಯ ಮೂಲಕ ಸಂಘಟನೆ ಮಾಡಲಾಗುತ್ತಿದೆ.
ಅರ್ಚಕರು, ಅಗಮ ಪಂಡಿತರಿಗೆ ವೈದ್ಯಕೀಯ ಸೌಲಭ್ಯ ಸಿಗುವಂತೆ ವಿಮಾ ಪಾಲಿಸಿ ಮತ್ತು ಸುರ್ವಣ ಸೌಧ ನಿರ್ಮಾಣ ಕಾಯಕಲ್ಪ. ಬಿ.ಎನ್.ವಿ.ಸುಬ್ರಮಣ್ಯರವರು ಮತ್ತು ಸಿ.ವಿ.ಎಲ್.ಶಾಸ್ತ್ರೀರವರ ಅಭಿಮಾನಿಗಳು, ಸ್ನೇಹಿತರು ನನಗೆ ಬೆಂಬಲ ಕೊಡುತ್ತಿದ್ದಾರೆ.
ರಾಜ್ಯಾದ್ಯಂತ ಇರುವ ವಿಪ್ರ ಮುಖಂಡರು ನನ್ನ ಬೆಂಬಲ ನಿಂತಿದ್ದಾರೆ. ಪ್ರತಿ ಜಿಲ್ಲೆಗಳಲ್ಲಿ ಚುನಾವಣೆ ಪ್ರಚಾರ ಮಾಡಲಾಗುತ್ತಿದೆ.
ಆರ್.ಲಕ್ಷ್ಮಿಕಾಂತ್ ರವರು ಅಖಿಲ ಕರ್ನಾಟಕ ಮಾಧ್ವ ಮಹಾಸಭೆಯು ಎಸ್.ರಘುನಾಥ್ ರವರಿಗೆ ಸಂಪೂರ್ಣ ಬೆಂಬಲ ಸಹಕಾರ ನೀಡಿರುವುದು ಸಂತೋಷದಾಯಕ ಸಂಗತಿಯಾಗಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷೀಯ ಚುನಾವಣೆಯಲ್ಲಿ ಮನಸ್ಸುಪೂರ್ತಿಯಿಂದ ರಾಜ್ಯಾದ್ಯಂತ ಇರುವ ವಿಪ್ರರು ಎಸ್.ರಘುನಾಥ್ ರವರಿಗೆ ಬೆಂಬಲ ನೀಡುತ್ತಿದ್ದಾರೆ.
ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಎಸ್.ರಘುನಾಥ್ ರವರ ಪ್ರಚಾರ ಮಾಡಲಾಗುತ್ತಿದೆ, ಎಲ್ಲ ಜಿಲ್ಲೆಗಳಲ್ಲಿ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಬ್ರಾಹ್ಮಣ ಸಮುದಾಯವು ಬುದ್ದಿವಂತರು, ಜ್ಞಾನವಂತರು ಅವರು ತೀರ್ಮಾನ ಮಾಡಿದ್ದಾರೆ ಎಸ್.ರಘುನಾಥ್ ರವರಿಗೆ ನಮ್ಮ ಮತ ಎಂದು ನಿರ್ಧಾರ ಮಾಡಿದ್ದಾರೆ. ಬ್ರಾಹ್ಮಣ ಮಹಾಸಭಾದಲ್ಲಿ ಬದಲಾವಣೆಯಾಗಬೇಕು, ಬ್ರಾಹ್ಮಣ ಅಭಿವೃದ್ದಿಯಾಗಬೇಕು ಈ ನಿಟ್ಟಿನಲ್ಲಿ ಸಂಘಟಿರಾಗಿದ್ದೇವೆ.
ಒಂದೊಂದು ಮತ ಬಹಳ ಮುಖ್ಯ, ಮತದಾರರ ಮನೆ, ಮನೆಗೆ ತೆರಳಿ ಬ್ರಾಹ್ಮಣ ಮಹಾಸಭಾ ಮತ್ತು ಬ್ರಾಹ್ಮಣರ ಅಭಿವೃದ್ದಿಗೆ ಎಸ್.ರಘುನಾಥ್ ರವರ ಸಾಧನೆ, ಯೋಜನೆಗಳಿಗೆ ಮತ ನೀಡುವಂತೆ ಪ್ರಚಾರ ಮಾಡಬೇಕು ಎಂದು ಹೇಳಿದರು.ಕೆಂಗೇರಿ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಸುಧೀಂದ್ರಕುಮಾರ್,ರಾಮ್ ಪ್ರಸಾದ್, ಹರಿಪ್ರಸಾದ್ ಶ್ರೀಮತಿ ಮಾಲಿನಿ ಕೆ, ಜೆ.ಎಚ್. ಅನಿಲ್‌ಕುಮಾರ್, ಕೆ.ವಿ. ರಾಮಚಂದ್ರ, ಮೋಹನ್ ಕೆ.. ನ. ಸುಧೀಂದ್ರ ರಾವ್, ಕೆ.ವಿ. ಅಶ್ವಥ ನಾರಾಯಣ್, ಕೆ.ಆರ್. ನಾಗರಾಜ್, ಆನಂದ ಸವಣೂರು, ಪ್ರವೀಣ್, ಶ್ರೀಮತಿ ಶಶಿಕಲಾ ಬಿ.ವಿ.. ಲಕ್ಷ್ಮೀಶ್, ನಾಗೇಂದ್ರ ಜೋಯಿಸ್, ರಥಯಾತ್ರೆ ಸುರೇಶ್, ಹರಿದಾಸ ಸಾಹಿತ್ಯ ಸಂಘದ ಬಾಲಾಜಿರವರು ಭಾಗವಹಿಸಿದ್ದರು.