ನಮ್ಮ ಹಿಂದೂ ಸಮಾಜದಲ್ಲಿ ಭಜನೆಗೆ ತನ್ನದೇ ಆದ ವಿಶಿಷ್ಟ ಇತಿಹಾಸ ಇದೆ.ಇದು ಯಾವಾಗಿನಿಂದ ಆರಂಭ ಆಗಿದೆ ಎಂದು ಸರಿಯಾಗಿ ತಿಳಿಯದು.ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ಇದರ ಉಲ್ಲೇಖ ಇದೆ.
ಮರು ದಿನ ಭಾನುವಾರ ರಾಮ ದೇವರ ಪಟದೊಂದಿಗೆ ಸಮಾಜದ ಗಂಡು ಮಕ್ಕಳೆಲ್ಲ ಬೀದಿ ಭಜನೆ ಅಂದರೆ ಸಮಾಜದ ಮನೆಯವರೆಲ್ಲರ ಮನೆಯ ಮುಂದೆ ಭಜನೆ ಮಾಡುವರು.ಆಗ ಗೃಹಿಣಿಯರು ತಮ್ಮ ಯಥಾ ಶಕ್ತಿ ಅಕ್ಕಿ, ಕಾಯಿ, ಬೆಲ್ಲ, ಬಾಳೆಹಣ್ಣು ನೀಡಿ ರಾಮನ ಪಟಕ್ಕೆ ನಮಿಸುವರು.
ಸಾಮಾನ್ಯವಾಗಿ ಹಿಂದೆಲ್ಲ ಶನಿವಾರ ರಾಮ ಭಜನೆ ಮನೆ ಮಂದಿಯೆಲ್ಲ ಸೇರಿ ಮಾಡುತ್ತಿದ್ದರು.ಶನಿವಾರ ಸಂಜೆ ರಾಮನ ಫೋಟೋಗೆ ಪೂಜಿಸಿ ಭಜನೆ ಮಾಡಿ ನಂತರ ನೈವೇದ್ಯ ಮಾಡಿ ಎಲ್ಲರೂ ಸ್ವೀಕರಿಸುತ್ತಿದ್ದರು.ಭಜನೆ ಗಣೇಶ ನ ,ಶಾರದೆಯ ನಾಮದೊಂದಿಗೆ ಶುರುವಾಗಿ ಮುಗಿಯುವಾಗ ಮಂಗಳ ದೊಂದಿಗೆ ಮುಕ್ತಾಯ ಆಗುತ್ತಿತ್ತು.
ಇದು ಬಿಟ್ಟರೆ ಸಮಾಜದ ದೇವರ ರಥೋತ್ಸವ ಇತ್ಯಾದಿ ಕಾರ್ಯಕ್ರಮಗಳಲ್ಲಿ ಎಲ್ಲ ಸದಸ್ಯರು ಭಜನೆ ಮಾಡುತ್ತಾ ದೇವರ ಪಲ್ಲಕ್ಕಿಯ ಜೊತೆಗೆ ಹೋಗುವುದು ಇದೆ.
ಈ ನಡುವೆ ಭಜನಾ ಮಂಡಳಿಗಳು ಶುರುವಾಗಿ ಸಮಾಜದ ಮಹಿಳೆಯರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಇಂಬು ಕೊಡುತ್ತಿದೆ.
ಭಜನೆ ಮುಗಿದ ನಂತರ ಹುಡುಗರು ತಮ್ಮ ಸಮಾಜದ ದೇವಸ್ಥಾನಕ್ಕೆ ಹೋಗಿ ಅಕ್ಕಿ, ಬೆಲ್ಲ ಇತ್ಯಾದಿ ಶೇಖರಿಸಿ ಇಡುತ್ತಾರೆ.ಅದನ್ನು ರಾಮನವಮಿ ಇಲ್ಲವೇ ಹನುಮಜ್ಜಯಂತಿಯ ದಿನ ಅನ್ನ ಸಂತರ್ಪನೆಗೆ ಉಪಯೋಗಿಸುವರು.ಉಳಿದ ಕಾಯಿ, ಹಣ್ಣುಗಳನ್ನು ದೇವರಿಗೇ ನಿವೇದಿಸಿ ಎಲ್ಲರೂ ಹಂಚಿಕೊಳ್ಳುತ್ತಾರೆ.ಪೂಜಾ ಪರಿಕರಗಳನ್ನು ಸಂಗ್ರಹಿಸಿ ಇಡುವರು.
ಬನ್ನಿ ನಾವು ಕೂಡಾ ಕನಿಷ್ಠ ನಮ್ಮ ನಮ್ಮ ಮನೆಯಲ್ಲಿ ಭಜನೆ ಮಾಡಿ ನಮ್ಮ ಸಂಸ್ಕೃತಿ ಉಳಿಸೋಣ,ಬೆಳೆಸೋಣ.
ಭಜನಾ ಸ್ಪರ್ಧಗಳು ನಡೆಯುತ್ತವೆ.ಇವೆಲ್ಲ ನಮ್ಮ ಧರ್ಮದ ಉಳಿಕೆಯಲ್ಲಿ ನೆರವಾಗುತ್ತಿವೆ.
ರಾಧಿಕಾ ಜಿ ಎನ್
ಟೀವೀ ಹೋಸ್ಟ್
brahmies@gmail.com