ನೃತ್ಯ ಕುಟೀರ ಗುರು ವಿದುಷಿ ದೀಪಾ ಭಟ್ ಸಂಯೋಜನೆಯಲ್ಲಿ ತನ್ನ 20ನೇ ವಾರ್ಷಿಕೋತ್ಸವದ ಪ್ರಯುಕ್ತ ರವೀಂದ್ರ ಕಲಾಕ್ಷೇತ್ರದಲ್ಲಿ "ವಾಗ್ಗೇಯಕಾರ ವೈಭವಂ" ಎಂಬ ನೃತ್ಯ ಮಾಲಿಕೆಯನ್ನು ಕಲಾತ್ಮಕವಾಗಿ ಪ್ರದರ್ಶಿಸಿ ಕಲಾ ರಸಿಕರ ಮೆಚ್ಚುಗೆಗೆ ಪಾತ್ರರಾದರು. ವಿದುಷಿ ಸುಮಾ ಕೃಷ್ಣಮೂರ್ತಿ ಮತ್ತು ಶ್ರೀ ಎಸ್ ನಂಜುಂಡ ರಾವ್ ರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸುಮಾರು 14 ವಾಗ್ಗೇಯಕಾರರ ಕೃತಿಗಳನ್ನು ಪಂಚ ಭಾಷೆಯಲ್ಲಿ ಸಮೂಹ ನೃತ್ಯಕ್ಕೆ ಅಳವಡಿಸಲಾಗಿತ್ತು.
ಹಾಡುಗಾರಿಕೆಯಲ್ಲಿ ವಿದ್ವಾನ್ ರೋಹಿತ್ ಭಟ್, ಮೃದಂಗದಲ್ಲಿ ವಿದ್ವಾನ್ ಜಿ ಎಸ್ ನಾಗರಾಜ್, ಕೊರಳಿನಲ್ಲಿ ವಿದ್ವಾನ್ ಮಹೇಶ್ ಸ್ವಾಮಿ, ಪಿಟೀಲಿನಲ್ಲಿ ವಿದ್ವಾನ್ ಅರ್ಜುನ್ ಅವರು ಹಿಮ್ಮೇಳದಲ್ಲಿ ಸಹಕರಿಸಿದರು.